ಆ್ಯಪ್ನಗರ

ಅಪ್ರಾಪ್ತೆ ಮೇಲೆ ಅತ್ಯಾಚಾರಗೈದ 75ರ ಅಜ್ಜನಿಗೆ 19 ವರ್ಷ ಜೈಲು ಶಿಕ್ಷೆ!

ಹನ್ನೊಂದು ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದ ವೃದ್ಧನಿಗೆ 19 ವರ್ಷ ಜೈಲು ಶಿಕ್ಷೆ ವಿಧಿಸಿ ಮಂಡ್ಯದ ಒಂದನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ (ವಿಶೇಷ ಪೋಕ್ಸೋ ನ್ಯಾಯಾಲಯ) ನ್ಯಾಯಾಧೀಶರು ಸೋಮವಾರ ತೀರ್ಪು ನೀಡಿದ್ದಾರೆ.

Vijaya Karnataka Web 25 Aug 2020, 8:28 pm
ಮಂಡ್ಯ: ಹನ್ನೊಂದು ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದ ವೃದ್ಧನಿಗೆ 19 ವರ್ಷ ಜೈಲು ಶಿಕ್ಷೆ ವಿಧಿಸಿ ಮಂಡ್ಯದ ಒಂದನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ (ವಿಶೇಷ ಪೋಕ್ಸೋ ನ್ಯಾಯಾಲಯ) ನ್ಯಾಯಾಧೀಶರು ಸೋಮವಾರ ತೀರ್ಪು ನೀಡಿದ್ದಾರೆ.
Vijaya Karnataka Web rape case verdict


ತಾಲೂಕಿನ ಹಳೇಬೂದನೂರು ಗ್ರಾಮದ ನಿವಾಸಿ ಕೆಂಗಾಲಯ್ಯ(75) ಶಿಕ್ಷೆಗೊಳಗಾದ ಆರೋಪಿ. ಈತ 2015ರ ಜೂ.8ರಂದು ಚಾಕಲೇಟ್ ಕೊಡಿಸುವ ಹಾಗೂ ತನ್ನ ಮನೆಯಲ್ಲಿ ಟಿವಿ ನೋಡಲು ಅವಕಾಶ ಕೊಡುವ ನೆಪದಲ್ಲಿ ಬಾಲಕಿ ಮೇಲೆ ಅದೇ ಗ್ರಾಮದ 11 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದನು. ಈ ಸಂಬಂಧ ಜೂ.17ರಂದು ಬಾಲಕಿಯ ತಾಯಿ ಪೊಲೀಸರಿಗೆ ದೂರು ನೀಡಿದ್ದರು.

ಐಪಿಸಿ ಸೆಕ್ಷನ್ 376, 506 ಹಾಗೂ ಪೋಕ್ಸೋ ಕಾಯಿದೆ ಸೆಕ್ಷನ್ 6, 7 ಮತ್ತು 12ರ ಪ್ರಕಾರ ಪ್ರಕರಣ ದಾಖಲಿಸಿಕೊಂಡ ಮಂಡ್ಯ ಗ್ರಾಮಾಂತರ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿ, ಆತನ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಅಲ್ಲಿಂದ ಈವರೆಗೆ ಕೋರ್ಟ್‌ನಲ್ಲಿ ವಿಚಾರಣೆ ನಡೆಸಿದ್ದು, ಸೋಮವಾರ ತೀರ್ಪು ಹೊರ ಬಿದ್ದಿದೆ.

ಆರ್‌ಬಿಐನಿಂದ ಮತ್ತೊಂದು ಆಪರೇಷನ್: ₹20 ಸಾವಿರ ಕೋಟಿ ಸರಕಾರಿ ಬಾಂಡುಗಳ ಖರೀದಿ!

ಆರೋಪಿಗೆ ಐಪಿಸಿ ಸೆಕ್ಷನ್ 376 ಪ್ರಕಾರ 10 ವರ್ಷ ಜೈಲು ಶಿಕ್ಷೆ, 5000ರೂ. ದಂಡ, ದಂಡ ಕಟ್ಟಲು ವಿಫಲರಾದರೆ 1 ವರ್ಷ ಜೈಲು ಶಿಕ್ಷೆ, ಸೆಕ್ಷನ್ 506ಪ್ರಕಾರ(ಪ್ರಾಣ ಬೆದರಿಕೆ) 1 ವರ್ಷ ಜೈಲು ಶಿಕ್ಷೆಘಿ, ಪೋಕ್ಸೋ ಕಾಯಿದೆ ಸೆಕ್ಷನ್ 6, 7ರ ಪ್ರಕಾರ 5 ವರ್ಷದ ಜೈಲು ಶಿಕ್ಷೆ, 1,000ರೂ. ದಂಡ, ದಂಡ ಪಾವತಿಸಲು ವಿಫಲನಾದರೆ ಮತ್ತೆ 1 ವರ್ಷ ಜೈಲು ಶಿಕ್ಷೆ ಹಾಗೂ ಪೋಕ್ಸೋ ಕಾಯಿದೆ ಸೆಕ್ಷನ್ 12ರ ಪ್ರಕಾರ 3 ವರ್ಷ ಜೈಲು ಶಿಕ್ಷೆ ವಿಧಿಸಿ ನ್ಯಾಯಾಧೀಶೆ ರಾಜೇಶ್ವರಿ ಹೆಗಡೆ ಅವರು ತೀರ್ಪು ನೀಡಿದ್ದಾರೆ.

ನಿತ್ಯಾನಂದನಿಂದ ಹೊಸ ಕರೆನ್ಸಿ 'ಕೈಲಾಸ್‌ ಡಾಲರ್‌' ಬಿಡುಗಡೆ!

ಘಟನೆ ನಡೆದಾಗ 70 ವರ್ಷದವನಾದ ಆರೋಪಿ ಕೆಂಗಾಲಯ್ಯನಿಗೆ ಈಗ 75 ವರ್ಷ ವಯಸ್ಸಾಗಿದೆ. ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ (ಪೋಕ್ಸೋ) ಎಚ್. ದಾಸೇಗೌಡ ಅವರು ವಕಾಲತ್ತು ವಹಿಸಿದ್ದರು. ಘಟನೆ ನಡೆದಾಗ 11 ವರ್ಷ ಬಾಲಕಿಯಾಗಿದ್ದೆ ಸಂತ್ರಸ್ಥೆಯು, ತನಗಾದ ದೌರ್ಜನ್ಯದ ನಡುವೆ ಆತ್ಮಬಲ ಹೆಚ್ಚಿಸಿಕೊಂಡು ಓದಿನತ್ತ ಆಸಕ್ತಿ ಬೆಳೆಸಿಕೊಂಡು ಇದೀಗ ಪಿಯು ವ್ಯಾಸಂಗ ಮಾಡುತ್ತಿದ್ದಾಳೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ