ಆ್ಯಪ್ನಗರ

ಮಂಡ್ಯದಲ್ಲಿ ಬಕ್ರಿದ್‌ ಆಚರಣೆಗೆ ಪ್ರಾಣಿವಧೆ ನಿಷೇಧ: ಜಿಲ್ಲಾಧಿಕಾರಿ ಆದೇಶ!

ಆಗಸ್ಟ್ ತಿಂಗಳಲ್ಲಿ ನಡೆಯಲಿರುವ ಬಕ್ರಿದ್ ಹಬ್ಬ ಆಚರಣೆ ವೇಳೆ ಜಿಲ್ಲೆಯಲ್ಲಿ ಗೋವುಗಳು/ ಕರುಗಳು ಹಾಗೂ ಒಂಟೆಗಳ ವಧೆ ನಿಷೇಧಿಸಿ ಜಿಲ್ಲಾಕಾರಿ ಡಾ.ಎಂ.ವಿ.ವೆಂಕಟೇಶ್ ಆದೇಶ ಹೊರಡಿಸಿದ್ದಾರೆ. ಆದೇಶ ಉಲ್ಲಂಘಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.

Vijaya Karnataka Web 27 Jul 2020, 9:11 pm
ಮಂಡ್ಯ: ಆಗಸ್ಟ್ ತಿಂಗಳಲ್ಲಿ ನಡೆಯಲಿರುವ ಬಕ್ರಿದ್ ಹಬ್ಬ ಆಚರಣೆ ವೇಳೆ ಜಿಲ್ಲೆಯಲ್ಲಿ ಗೋವುಗಳು/ ಕರುಗಳು ಹಾಗೂ ಒಂಟೆಗಳ ವಧೆ ನಿಷೇಧಿಸಿ ಜಿಲ್ಲಾಕಾರಿ ಡಾ.ಎಂ.ವಿ.ವೆಂಕಟೇಶ್ ಆದೇಶ ಹೊರಡಿಸಿದ್ದಾರೆ.
Vijaya Karnataka Web cow cubs


ಕರ್ನಾಟಕ ಗೋವಧೆ ಪ್ರತಿಬಂಧಕ ಮತ್ತು ಜಾನುವಾರು ಪರಿರಕ್ಷಣೆಯ ಅಧಿನಿಯಮ 1964 ಜಾರಿಯಲ್ಲಿದ್ದು, ಸರ್ವೋಚ್ಛ ನ್ಯಾಯಾಲಯದ ಸಿವಿಲ್ ಅಪೀಲ್ ಸಂಖ್ಯೆ 3964-67 ಮತ್ತು 3969/1994ರ ಅನಿಯಮಗಳನ್ನು ಅನುಷ್ಠಾನಗೊಳಿಸುವ ಸಂಬಂಧ ಗೋರಕ್ಷಣೆ ಮಾಡುವುದು ಜಿಲ್ಲಾಡಳಿತದ ಜವಾಬ್ದಾರಿ.

ಹಾಗೆಯೇ ಈ ಕಾಯಿದೆ ಉಲ್ಲಂಘಿಸಿದವರ ವಿರುದ್ಧ ಕ್ರಮ ವಹಿಸುವುದು ಜಿಲ್ಲಾಡಳಿತದ ಕರ್ತವ್ಯವಾಗಿದೆ ಎಂದು ಸೋಮವಾರ ಹೊರಡಿಸಿರುವ ಪ್ರಾಣಿವಧೆ ನಿಷೇಧದ ಆದೇಶದಲ್ಲಿ ಉಲ್ಲೇಖಿಸಿದ್ದಾರೆ.

ಯಡಿಯೂರಪ್ಪ ಹೇಗೆ ಸಿಎಂ ಆದರೆಂದು ಆತ್ಮಾವಲೋಕನ ಮಾಡಿಕೊಳ್ಳಲಿ: ಸಿದ್ದರಾಮಯ್ಯ ಟಾಂಗ್‌

ಅದರಂತೆ ಬಕ್ರಿದ್ ಹಬ್ಬದಲ್ಲಿ ಗೋವು/ಕರುಗಳು ಮತ್ತು ಒಂಟೆಗಳನ್ನು ವಧೆ ಮಾಡುವುದು ಹಾಗೂ ಅನಧಿಕೃತವಾಗಿ ಸಾಗಾಣಿಕೆ ಮಾಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಆದೇಶ ಉಲ್ಲಂಘಿಸಿದವರ ವಿರುದ್ಧ ಕಾನುನು ಕ್ರಮ ಜರುಗಿಸಲಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಜಿಲ್ಲೆಯಲ್ಲಿ ಸತತ ಐದನೇ ದಿನವೂ ಕೊರೊನಾ ಪಾಸಿಟಿವ್ ಪ್ರಕರಣಗಳು ಅರ್ಧ ಶತಕ ದಾಟಿದೆ. ಕಳೆದ ನಾಲ್ಕು ದಿನಗಳಿಂದ ನಿತ್ಯ 50ಕ್ಕೂ ಹೆಚ್ಚು ಹೊಸ ಪ್ರಕರಣಗಳು ಪತ್ತೆಯಾಗಿತ್ತಿದ್ದವು. ಅದೇ ರೀತಿ ಸೋಮವಾರವೂ 56 ಪ್ರಕರಣಗಳು ದೃಢಪಟ್ಟಿವೆ.

ಕಾರ್ಮಿಕರ ತುಟ್ಟಿ ಭತ್ಯೆ ಮುಂದೂಡಿಕೆಗೆ ವಿವಿಧ ಸಂಘಟನೆಗಳಿಂದ ಆಕ್ಷೇಪ!

ಜು.23ರಂದು 50, ಜು.24ರಂದು 57, ಜು.25ರಂದು 60, ಜು.26ರಂದು 64 ಪ್ರಕರಣಗಳು ಪತ್ತೆಯಾಗಿದ್ದವು. ಜು.27ರಂದು 56 ಪ್ರಕರಣಗಳು ಕಂಡು ಬಂದಿವೆ. ಇದರೊಂದಿಗೆ ಜಿಲ್ಲೆಯಲ್ಲಿನ ಒಟ್ಟು ಸೋಂಕಿತರ ಸಂಖ್ಯೆಯು 1247ಕ್ಕೇರಿದೆ. ಸೋಮವಾರ ಪತ್ತೆಯಾಗಿರುವ ಸೋಂಕಿತರಲ್ಲಿ ಐವರು ಬೆಂಗಳೂರಿನಿಂದ, ಒಬ್ಬರು ಮೈಸೂರು ಜಿಲ್ಲೆಯಿಂದ ಬಂದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ