ಆ್ಯಪ್ನಗರ

ಜಿಲ್ಲಾದ್ಯಂತ ಔಷಧ ಅಂಗಡಿ ಬಂದ್‌

ಮಂಡ್ಯ: ಔಷಧಿ ಇ-ಫಾರ್ಮಸಿ ವ್ಯವಸ್ಥೆಗೆ ಕೇಂದ್ರ ಸರಕಾರ ಗೆಜೆಟ್‌ ಸುತ್ತೋಲೆ ಹೊರಡಿಸಿರುವುದನ್ನು ಖಂಡಿಸಿ ಅಖಿಲ ಭಾರತ ಔಷಧ ವಿತರಕರ ಸಂಸ್ಥೆಯ(ಎಐಒಸಿಡಿ) ಕರೆ ಮೇರೆಗೆ ಜಿಲ್ಲಾದ್ಯಂತ ಔಷಧಿ ಅಂಗಡಿಗಳನ್ನು ಬಂದ್‌ ಔಷಧ ವ್ಯಾಪಾರಿಗಳು ಪ್ರತಿಭಟಿಸಿದರು.

Vijaya Karnataka 29 Sep 2018, 5:00 am
ಮಂಡ್ಯ: ಔಷಧಿ ಇ-ಫಾರ್ಮಸಿ ವ್ಯವಸ್ಥೆಗೆ ಕೇಂದ್ರ ಸರಕಾರ ಗೆಜೆಟ್‌ ಸುತ್ತೋಲೆ ಹೊರಡಿಸಿರುವುದನ್ನು ಖಂಡಿಸಿ ಅಖಿಲ ಭಾರತ ಔಷಧ ವಿತರಕರ ಸಂಸ್ಥೆಯ(ಎಐಒಸಿಡಿ) ಕರೆ ಮೇರೆಗೆ ಜಿಲ್ಲಾದ್ಯಂತ ಔಷಧಿ ಅಂಗಡಿಗಳನ್ನು ಬಂದ್‌ ಔಷಧ ವ್ಯಾಪಾರಿಗಳು ಪ್ರತಿಭಟಿಸಿದರು.
Vijaya Karnataka Web drug shops close across the district
ಜಿಲ್ಲಾದ್ಯಂತ ಔಷಧ ಅಂಗಡಿ ಬಂದ್‌


ಜಿಲ್ಲೆಯಲ್ಲಿರುವ 350ಕ್ಕೂ ಹೆಚ್ಚು ಔಷಧಿ ಅಂಗಡಿಗಳು ಬಂದ್‌ ಆಗಿದ್ದವು. ಆದರೆ, ಜಿಲ್ಲಾಸ್ಪತ್ರೆ ಆವರಣದಲ್ಲಿ ಜನೌಷಧ ಕೇಂದ್ರ ಸೇರಿದಂತೆ ಕೇಂದ್ರ ಮತ್ತು ರಾಜ್ಯ ಸರಕಾರದಿಂದ ತೆರೆದಿರುವ ಔಷಧ ಕೇಂದ್ರಗಳು ತೆರೆದಿದ್ದು ಜನರಿಗೆ ಔಷಧ ವಿತರಣೆಯಾಯಿತು. ಇದರೊಂದಿಗೆ ನರ್ಸಿಂಗ್‌ ಹೋಂಗಳು, ಕ್ಲಿನಿಕ್‌ಗಳ ಒಳಗಿದ್ದ ಔಷಧಿ ಕೇಂದ್ರಗಳು ತೆರೆದಿದ್ದವು.

ಬಂದ್‌ಗೆ ಬೆಂಬಲ ನೀಡುವಂತೆ ಕೋರುವ ಜತೆಗೆ ಮಾನವೀಯ ದೃಷ್ಟಿಯಿಂದ ಔಷಧ ಅಂಗಡಿಗಳನ್ನು ಮುಚ್ಚುವುದು ಅಥವಾ ತೆರೆಯುವ ವಿವೇಚನೆಯನ್ನು ಖಾಸಗಿ ನರ್ಸಿಂಗ್‌ ಹೋಂಗಳಿಗೆ ಬಿಡಲಾಗಿತ್ತು. ಹೀಗಾಗಿ ನರ್ಸಿಂಗ್‌ ಹೋಂಗಳಿಗೆ ಬಂದ ರೋಗಿಗಳಿಗೆ ತುರ್ತು ಚಿಕಿತ್ಸೆಗಾಗಿ ಬೇಕಾದ ಔಷಧಕ್ಕಾಗಿ ನರ್ಸಿಂಗ್‌ ಹೋಂಗಳಲ್ಲಿನ ಔಷಧ ಕೇಂದ್ರಗಳು ತೆರೆಯಲ್ಪಟ್ಟಿದ್ದವು ಎಂದು ಜಿಲ್ಲಾ ಔಷಧಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಕೆ.ಗೌಸ್‌ಖಾನ್‌ 'ಧಿವಿಜಯ ಕರ್ನಾಟಕ'ಕ್ಕೆ ತಿಳಿಸಿದರು.

ಆನ್‌ಲೈನ್‌ನಲ್ಲಿ ಔಷಧ ಮಾರಾಟಕ್ಕೆ ಕೇಂದ್ರ ಸರಕಾರ ಅನುಮತಿ ನೀಡಿದರೆ, ಔಷಧಿ ಅಂಗಡಿಗಳನ್ನೇ ನಂಬಿ ಜೀವ ನಡೆಸುತ್ತಿರುವ ಲಕ್ಷಾಂತರ ಔಷಧ ವ್ಯಾಪಾರಿಗಳು ಬದುಕು ಏನಾಗಬೇಕು? ಹೀಗಾಗಿ ಔಷಧಿ ಇ-ಫಾರ್ಮಸಿ ವ್ಯವಸ್ಥೆಗೆ ಕೇಂದ್ರ ಸರಕಾರ ಗೆಜೆಟ್‌ ಸುತ್ತೋಲೆ ಹೊರಡಿಸಿರುವುದನ್ನು ಖಂಡಿಸಿ ದೇಶಾದ್ಯಂತ ಇಂದು ಔಷಧ ಅಂಗಡಿಗಳ ಬಂದ್‌ ನಡೆಸಲಾಯಿತು ಎಂದು ಅವರು ಹೇಳಿದರು.

ಔಷಧ ಅಂಗಡಿಗಳು ಮುಚ್ಚಿದ್ದರಿಂದ ಜನರು ತುರ್ತುವಾಗಿ ಔಷಧ ಖರೀದಿಸಲು ಪರದಾಡುವಂತಾಗಿತ್ತು. ರಸ್ತೆಯಿಂದ ರಸ್ತೆಗೆ ಅಲೆಯುತ್ತಿದ್ದ ಜನರು, ನರ್ಸಿಂಗ್‌ ಹೋಂಗಳು ಹಾಗೂ ಜಿಲ್ಲಾಸ್ಪತ್ರೆ ಆವರಣದಲ್ಲಿನ ಜನೌಷಧ ಕೇಂದ್ರಕ್ಕೆ ತೆರಳುತ್ತಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ