ಆ್ಯಪ್ನಗರ

ನಿಖಿಲ್‌ ಪರ ಅಪ್ಪ-ತಾತ ಪ್ರಚಾರ

ವಿಕ ಸುದ್ದಿಲೋಕ ಮಂಡ್ಯ/ಮದ್ದೂರು ಕಳೆದ ಹಲವು ದಿನಗಳಿಂದ ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಅಭ್ಯರ್ಥಿ ನಿಖಿಲ್‌ ಕುಮಾರಸ್ವಾಮಿ ಪರವಾಗಿ ...

Vijaya Karnataka 14 Apr 2019, 9:45 am
ಮಂಡ್ಯ/ಮದ್ದೂರು: ಕಳೆದ ಹಲವು ದಿನಗಳಿಂದ ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಅಭ್ಯರ್ಥಿ ನಿಖಿಲ್‌ ಕುಮಾರಸ್ವಾಮಿ ಪರವಾಗಿ ಪ್ರತ್ಯೇಕವಾಗಿ ವಿವಿಧೆಡೆ ಪ್ರಚಾರ ನಡೆಸುತ್ತಿದ್ದ ಅಪ್ಪ-ಮಗ ಶನಿವಾರ ಒಟ್ಟಿಗೆ ರೋಡ್‌ ಶೋ ನಡೆಸುವ ಮೂಲಕ ಮತಯಾಚಿಸಿದರು.
Vijaya Karnataka Web election campiegn by hd devegowda and hd kumaraswamy in mandya
ನಿಖಿಲ್‌ ಪರ ಅಪ್ಪ-ತಾತ ಪ್ರಚಾರ


ಮನೆ ಮಗನನ್ನು ಗೆಲ್ಲಿಸಲೇಬೇಕೆಂದು ಪಣತೊಟ್ಟಿರುವ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಹಾಗೂ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮದ್ದೂರು ತಾಲೂಕಿನ ಕೆ.ಹೊನ್ನಲಗೆರೆ ಗ್ರಾಮದಲ್ಲಿ ರೋಡ್‌ ಶೋ ನಡೆಸಿ, ನಿಖಿಲ್‌ ಪರ ಪ್ರಚಾರ ನಡೆಸಿದರು.

ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ''ಅಭಿವೃದ್ಧಿ ವಿಚಾರಗಳನ್ನು ಪುನರ್‌ ಪ್ರಸ್ತಾಪಿಸಿ ಚುನಾವಣೆ ನೀತಿ ಸಂಹಿತೆ ಇರುವುದರಿಂದ ಹಣ ಬಿಡುಗಡೆಯಾಗಿಲ್ಲ. ಆರು ತಿಂಗಳಲ್ಲಿ ಎಲ್ಲ ಅಭಿವೃದ್ಧಿ ಕಾರ್ಯಗಳು ಪೂರ್ಣಗೊಳ್ಳಲಿವೆ'' ಎಂದು ಭರವಸೆ ನೀಡಿದರು.

''ರೈತರ ಸಾಲ ಮನ್ನಾ ವಿಚಾರವಾಗಿ ಪಕ್ಷೇತರ ಅಭ್ಯರ್ಥಿ ಮಾತನಾಡುತ್ತಾರೆ. ನೀತಿ ಸಂಹಿತೆ ಇರುವುದರಿಂದ ಪೂರ್ಣ ಪ್ರಮಾಣದ ಹಣ ಬಿಡುಗಡೆಯಾಗಿಲ್ಲ. ಚುನಾವಣೆ ಹಿನ್ನಲೆಯಲ್ಲಿ ಆಯೋಗ ಬಾಕಿ ಹಣ ಬಿಡುಗಡೆ ಮಾಡದಂತೆ ಸೂಚಿಸಿದೆ. ಚುನಾವಣೆ ಬಳಿಕ ಪೂರ್ಣ ಪ್ರಮಾಣದ ಸಾಲ ಮನ್ನಾ ಹಣ ಪಾವತಿಯಾಗಲಿದೆ'' ಎಂದು ಹೇಳಿದರು.

ದೇಣಿಗೆ: ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಅವರ ಪುತ್ರ ಡಿ.ಟಿ.ಸಂತೋಷ್‌ ಅಭಿಮಾನಿ ಬಳಗದಿಂದ ನಿಖಿಲ್‌ ಚುನಾವಣಾ ವೆಚ್ಚಕ್ಕಾಗಿ ಜೆಡಿಎಸ್‌ಗೆ 3 ಲಕ್ಷ ರೂ.ಗಳನ್ನು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ನೀಡಿದರು.

ಸುಮಲತಾಗೆ ಅಮೆರಿಕ ಕಮಾಂಡೋ ಭದ್ರತೆ ಕೊಡಲಿ: ಕುಮಾರಸ್ವಾಮಿ

ಪಕ್ಷೇತರ ಅಭ್ಯರ್ಥಿ ಸುಮಲತಾಗೆ ಭಯವಿದ್ದರೆ ಅಮೆರಿಕದ ಕಮಾಂಡೋಸ್‌ ಭದ್ರತೆ ಪಡೆಯಲಿ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.

ಮದ್ದೂರು ತಾಲೂಕು ಬೋರಾಪುರ ಹೆಲಿಪ್ಯಾಡ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಸಿಆರ್‌ಪಿಎಫ್‌ ಮಾತ್ರವಲ್ಲ. ಅಮೆರಿಕ ಕಮಾಂಡೋ ಭದ್ರತೆ ಬೇಕಾದರೂ ಪಡೆಯಲಿದೆ. ಮೋದಿ ಅವರು ಟ್ರಂಪ್‌ ಜತೆæ ಮಾತನಾಡಿ ಭದ್ರತೆ ಕೊಡಿಸಲಿ'' ಎಂದು ಲೇವಡಿ ಮಾಡಿದರು.

ಸೈನಿಕರ ಬಗೆಗಿನ ಹೇಳಿಕೆ ಸಮರ್ಥಿಸಿಕೊಂಡ ಸಿಎಂ:
ಸೈನಿಕರಿಗೆ ಕುಮಾರಸ್ವಾಮಿ ಅಪಮಾನ ಮಾಡಿದ್ದಾರೆ ಎಂಬ ನರೇಂದ್ರ ಮೋದಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನನ್ನ ಹೇಳಿಕೆ ಅಸತ್ಯವೇನಲ್ಲ. ವೀರಯೋಧ ಗುರು ಕುಟುಂಬ ನೋಡಿ ಹೇಳಿದ್ದೇನೆ. ಶ್ರೀಮಂತರ ಮಕ್ಕಳು ಹೋಗಿ ಸೇನೆ ಸೇರುತ್ತಾರಾ? ಗುರು ಕುಟುಂಬಕ್ಕೆ ನಾನು ಕೆಲಸ ಕೊಡಿಸಿದ್ದೇನೆಯೇ ಹೊರತು ಮೋದಿ ಕೊಡಿಸಿದ್ದಾರಾ ಎಂದು ಪ್ರಶ್ನಿಸಿದರು. ನನ್ನ ಹೇಳಿಕೆಯಲ್ಲಿ ತಪ್ಪೇನಿದೆ. ದೇಶದ ಗಡಿ ಕಾಯುತ್ತಿರುವವರು ಬಡ ಕುಟುಂಬದವರು. ಈ ದೇಶದ ಬಡ ಕುಟುಂಬದವರು ಎರಡು ಹೊತ್ತಿನ ಊಟಕ್ಕೂ ಕಷ್ಟ ಪಡುತ್ತಿರುವುದನ್ನು ನೋಡಿದ್ದೇನೆ. ಬಡವರ ಜತೆ ನಾನು ಇರೋದು. ಚಿನ್ನದ ಸ್ಪೂನ್‌ ಹಿಡಿದವರ ಜತೆಯಿಲ್ಲ. ಅಂತಹವರ ಜತೆ ಚೆಲ್ಲಾಟವಾಡಬೇಡಿ ಎಂದು ಮೋದಿಗೆ ಹೇಳಿದ್ದೇನೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ