ಆ್ಯಪ್ನಗರ

ಕಚ್ಚಿದ ಹಾವನ್ನು ಕೊಂದು ರೈತನೂ ಸಾವು

ಕಚ್ಚಿದ ಹಾವನ್ನು ಕೊಂದು ರೈತನೂ ಸಾವು ವಿಕ ಸುದ್ದಿಲೋಕ ಮಂಡ್ಯ ನಗರದ ಮೈಸೂರು ಸಕ್ಕರೆ ಕಾರ್ಖಾನೆ(ಮೈಷುಗರ್‌) ಆವರಣದಲ್ಲಿ ಮಂಡಲದ ಹಾವು ಕಡಿದು ರೈತರೊಬ್ಬರು ಮೃತಪಟ್ಟಿದ್ದಾರೆ...

Vijaya Karnataka 23 Nov 2018, 5:00 am
ಮಂಡ್ಯ: ನಗರದ ಮೈಸೂರು ಸಕ್ಕರೆ ಕಾರ್ಖಾನೆ(ಮೈಷುಗರ್‌) ಆವರಣದಲ್ಲಿ ಮಂಡಲದ ಹಾವು ಕಡಿದು ರೈತರೊಬ್ಬರು ಮೃತಪಟ್ಟಿದ್ದಾರೆ. ರೈತ ಸಾಯುವ ಮೊದಲು ತನಗೆ ಕಚ್ಚಿದ ಹಾವನ್ನು ಕೊಂದು ಹಾಕಿದ್ದಾರೆ.
Vijaya Karnataka Web farmer killed snake whick byte him in mandya
ಕಚ್ಚಿದ ಹಾವನ್ನು ಕೊಂದು ರೈತನೂ ಸಾವು


ತಾಲೂಕಿನ ಬೇಲೂರು ಗ್ರಾಮದ ನಿವಾಸಿ ತಿಮ್ಮಯ್ಯ ಎಂಬುವರ ಪುತ್ರ ಬೊಮ್ಮಯ್ಯ(45) ಮೃತರು. ಇವರು ಮೈಷುಗರ್‌ಗೆ ಸರಬರಾಜು ಮಾಡಲು ಎತ್ತಿನಗಾಡಿಯಲ್ಲಿ ಕಬ್ಬು ತುಂಬಿಕೊಂಡು ಬುಧವಾರ ಸಂಜೆ ಕಾರ್ಖಾನೆಗೆ ಹೋಗಿದ್ದರು. ಮಧ್ಯರಾತ್ರಿ ಸಮಯದಲ್ಲಿ ತನ್ನ ಸರದಿ ಬಂದಾಗ ಕಬ್ಬನ್ನು ಅನ್‌ಲೋಡ್‌ ಮಾಡಿ ಯಾರ್ಡ್‌ ಬಳಿಕ ತೂಕದ ಯಂತ್ರದ ಮನೆ ಬಳಿಗೆ ಹೋಗಿದ್ದಾರೆ.

ಈ ವೇಳೆ ಎತ್ತಿನಗಾಡಿಯಿಂದ ಇಳಿದು ನೆಲದ ಮೇಲೆ ನಡೆದುಕೊಂಡು ಹೋಗುತ್ತಿದ್ದಾಗ ಮಂಡಲದ ಹಾವು ಕಚ್ಚಿದೆ. ಆಗ ಬೊಮ್ಮಯ್ಯ ಅವರು ತನಗೆ ಕಚ್ಚಿದ ಹಾವನ್ನು ಕಬ್ಬಿನ ಜಲ್ಲೆ ಹಾಗೂ ಕಲ್ಲುಗಳಿಂದ ಒಡೆದು ಕೊಂದು ಹಾಕಿದ್ದಾರೆ. ಆದರೆ, ಕೆಲವೇ ಕ್ಷಣಗಳಲ್ಲಿ ಹಾವಿನ ವಿಷವು ದೇಹವನ್ನು ವ್ಯಾಪಿಸಿದ್ದರಿಂದ ಬೊಮ್ಮಯ್ಯ ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಆದರೆ, ಆಸ್ಪತ್ರೆಗೆ ಹೋಗುವಷ್ಟರಲ್ಲೇ ಬೊಮ್ಮಯ್ಯ ಅವರು ಮೃತಪಟ್ಟಿದ್ದಾರೆ ವೈದ್ಯರು ಖಚಿತಪಡಿಸಿದ್ದಾರೆ. ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ಗುರುವಾರ ಬೆಳಗ್ಗೆ ಶವ ಪರೀಕ್ಷೆ ನಡೆಸಿದ ಬಳಿಕ ವಾರಸುದಾರರಿಗೆ ನೀಡಲಾಯಿತು. ಘಟನೆ ಹಿನ್ನೆಲೆಯಲ್ಲಿ ಜಿಲ್ಲಾಸ್ಪತ್ರೆಗೆ ತಹಸೀಲ್ದಾರ್‌ ಎಲ್‌.ನಾಗೇಶ್‌, ಉಪ ತಹಸೀಲ್ದಾರ್‌ ಎಂ.ಜಿ.ವಸಂತಕುಮಾರ್‌ ಭೇಟಿ ನೀಡಿ ಪಂಚನಾಮೆ ನಡೆಸಿದರು.

ಕಾರ್ಖಾನೆಯಿಂದ 5 ಲಕ್ಷ ರೂ. ಪರಿಹಾರ: ಕಾರ್ಖಾನೆ ಯಾರ್ಡ್‌ನಲ್ಲಿ ಹಾವು ಕಡಿತದಿಂದ ಮೃತಪಟ್ಟ ರೈತ ಬೊಮ್ಮಯ್ಯ ಕುಟುಂಬಕ್ಕೆ ಮೈಷಗರ್‌ ಕಂಪನಿಯಿಂದ 5 ಲಕ್ಷ ರೂ. ಪರಿಹಾರ ನೀಡುವುದಾಗಿ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಎಂ.ಎನ್‌.ಅಜಯ್‌ನಾಗಭೂಷಣ್‌ ಭರವಸೆ ನೀಡಿದ್ದಾರೆ. ಹಾಗೆಯೇ ತಾಲೂಕು ಆಡಳಿತದಿಂದ 25 ಸಾವಿರ ರೂ. ಪರಿಹಾರ ನೀಡಲಾಗಿದೆ ಎಂದು ತಹಸೀಲ್ದಾರ್‌ ಎಲ್‌.ನಾಗೇಶ್‌ 'ವಿಜಯ ಕರ್ನಾಟಕ'ಕ್ಕೆ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ