ಆ್ಯಪ್ನಗರ

ರೈತ ವಿರೋಧಿ ಧೋರಣೆ ಖಂಡಿಸಿ ರೈತ ಸಂಘ ಪ್ರತಿಭಟನೆ

ವಿಕ ಸುದ್ದಿಲೋಕ ಶ್ರೀರಂಗಪಟ್ಟಣ ಶ್ರೀರಂಗಪಟ್ಟಣ ಎಸ್‌ಬಿಐ ಶಾಖೆಯ ವ್ಯವಸ್ಥಾಪಕರ ರೈತ ವಿರೋಧಿ ಧೋರಣೆ ಖಂಡಿಸಿ ರೈತ ಸಂಘದ ಕಾರ‍್ಯಕರ್ತರು ಮಂಗಳವಾರ ಬ್ಯಾಂಕ್‌ ಕಚೇರಿ ಎದುರು ...

Vijaya Karnataka 5 Dec 2018, 5:00 am
ಶ್ರೀರಂಗಪಟ್ಟಣ: ಶ್ರೀರಂಗಪಟ್ಟಣ ಎಸ್‌ಬಿಐ ಶಾಖೆಯ ವ್ಯವಸ್ಥಾಪಕರ ರೈತ ವಿರೋಧಿ ಧೋರಣೆ ಖಂಡಿಸಿ ರೈತ ಸಂಘದ ಕಾರ‍್ಯಕರ್ತರು ಮಂಗಳವಾರ ಬ್ಯಾಂಕ್‌ ಕಚೇರಿ ಎದುರು ಬೃಹತ್‌ ಪ್ರತಿಭಟನೆ ನಡೆಸಿದರು.
Vijaya Karnataka Web farmers assosiation protest against banks anti farmers rules in srirangapattana
ರೈತ ವಿರೋಧಿ ಧೋರಣೆ ಖಂಡಿಸಿ ರೈತ ಸಂಘ ಪ್ರತಿಭಟನೆ


ಪಟ್ಟಣದ ಮುಖ್ಯಬೀದಿಯಲ್ಲಿರುವ ಎಸ್‌ಬಿಐ ಬ್ಯಾಂಕ್‌ ಎದುರು ಜಮಾವಣೆಗೊಂಡ ನೂರಾರು ಮಂದಿ ಪ್ರತಿಭಟನಕಾರರು ಬ್ಯಾಂಕ್‌ ವ್ಯವಸ್ಥಾಪಕ ಮಹೇಶ್‌ ವಿರುದ್ಧ ಘೋಷಣೆ ಕೂಗಿದರು. ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಪ್ರತಿಭಟನೆ ನಡೆಸಿದರು.

ರೈತ ಸಂಘದ ಜಿಲ್ಲಾ ಪ್ರಧಾನ ಕಾರ‍್ಯದರ್ಶಿ ಮಂಜೇಶ್‌ಗೌಡ ಮಾತನಾಡಿ, ಬ್ಯಾಂಕ್‌ನಿಂದ ಪಡೆದಿರುವ ಸಾಲವನ್ನು ಏಕಕಾಲಕೆ ತಿರುವಳಿ ಮಾಡದೆ ಎಸ್‌ಬಿಐ ಬ್ಯಾಂಕ್‌ ವ್ಯವಸ್ಥಾಪಕ ಮಹೇಶ್‌ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ. ತಾಲೂಕಿನ ನಾನಾ ಗ್ರಾಮಗಳ ರೈತರು ಬ್ಯಾಂಕ್‌ನಲ್ಲಿ ಸಾಲ ಪಡೆದಿದ್ದು ಒಂದೇ ಬಾರಿಗೆ ಸಾಲ ತಿರುವಳಿ ಮಾಡಲು ರೈತರು ಸಿದ್ದರಿದ್ದಾರೆ. ಅದಕ್ಕೆ ವ್ಯವಸ್ಥಾಪಕರು ಬಡ್ಡಿ, ಸುಸ್ತಿ ಬಡ್ಡಿ ಸೇರಿಸಿ ನಾನಾ ಷರತ್ತುಗಳನ್ನು ಹೇರುತ್ತಿದ್ದಾರೆ. ವ್ಯವಸ್ಥಾಪಕ ನಡವಳಿಕೆ ಬಗ್ಗೆ ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್‌ನ ಮುಖ್ಯಸ್ಥರ ಗಮನಕ್ಕೆ ತಂದಿದ್ದರೂ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ, ಏಕ ಕಾಲಕ್ಕೆ ಸಾಲ ತೀರಿಸಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.

ರೈತ ಸಂಘದ ಜಿಲ್ಲಾಧ್ಯಕ್ಷ ಬೋರಾಪುರಶಂಕರೇಗೌಡ ಮಾತನಾಡಿ, ರೈತರು ಪಡೆದಿರುವ ಕೃಷಿಗೆ ಸಂಬಂಧಿಸಿದ ಹೈನುಗಾರಿಕೆ ಸಾಲಗಳಾದ ಹಸು, ಎಮ್ಮೆ, ಕುರಿ, ಎತ್ತುಗಾಡಿ ಸಾಲವನ್ನು ಕಟ್ಟಲು ತೊಂದರೆಯಾಗುತ್ತಿದೆ. ಎನ್‌ಪಿಎ ಆಗಿರುವ ಸಾಲವನ್ನು ಮನ್ನಾ ಮಾಡಬೇಕು. ನಮ್ಮನ್ನಾಳುವ ಯಾವ ಸರಕಾರಗಳು ರೈತರ ಪರ ನಿಲ್ಲುತ್ತಿಲ್ಲ. ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರೀಯ ಬ್ಯಾಂಕುಗಳಲ್ಲಿ ರೈತರು ಪಡೆದಿರುವ ಸಾಲ ಮನ್ನಾ ಮಾಡಲಿಲ್ಲ. ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಕೂಡ 24 ಗಂಟೆಯೊಳಗೆ ರೈತರ ಸಾಲ ಮನ್ನಾ ಮಾಡುತ್ತೇನೆ ಎಂದು ಹೇಳಿದ್ದರೂ ಇದುವರೆಗೂ ಎಲ್ಲಾ ಸಾಲ ಮನ್ನಾ ಆಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎಸ್‌ಬಿಐ ಬ್ಯಾಂಕ್‌ನ ಉನ್ನತಾಧಿಕಾರಿ ಸ್ಥಳಕ್ಕೆ ಬರಬೇಕು ಅಲ್ಲಿಯವರೆಗೂ ಪ್ರತಿಭಟನೆ ಕೈ ಬಿಡುವುದಿಲ್ಲ ಎಂದು ಪಟ್ಟು ಹಿಡಿದರು. ಸ್ಥಳಕ್ಕೆ ಆಗಮಿಸಿದ ಎಸ್‌ಬಿಐ ಬ್ಯಾಂಕ್‌ ಮುಖ್ಯ ವ್ಯವಸ್ಥಾಪಕ ನಾರಾಯಣಸ್ವಾಮಿ, ಒಟಿಎಸ್‌ ಸೌಲಭ್ಯ ಕುರಿತು ಈ ತಿಂಗಳೊಳಗೆ ಸಮಸ್ಯೆ ಬಗೆಹರಿಸಲಾಗುವುದು. ರೈತರು ಕುರಿ, ಎಮ್ಮೆ ಖರೀದಿಸಲು ಹಾಗೂ ಬೆಳೆ ಸಾಲವನ್ನು ಹೊಸದಾಗಿ ನೀಡಲಾಗುವುದು ಎಂದು ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆದರು.

ರೈತ ಸಂಘದ ಜಿಲ್ಲಾ ಕಾರಾರ‍ಯಧ್ಯಕ್ಷ ಸಿ.ಸ್ವಾಮಿ, ಉಪಾಧ್ಯಕ್ಷ ಕೆ.ನಾಗೇಂದ್ರಸ್ವಾಮಿ, ತಾಲೂಕು ಅಧ್ಯಕ್ಷ ಶ್ರೀಕಂಠಯ್ಯ, ಹಿರಿಯ ರೈತ ಹೋರಾಟಗಾರರಾದ ಇಂಡುವಾಳುಚಂದ್ರಶೇಖರ್‌, ಟಿ.ಡಿ.ದೇವೇಗೌಡ, ಡಿ.ಎಸ್‌. ಚಂದ್ರಶೇಖರ್‌, ಕೊಡಿಯಾಲಸಿದ್ದೇಗೌಡ, ದೊಡ್ಡಪಾಳ್ಯ, ಜಯರಾಮು, ಬಿ.ಎಸ್‌ ರಮೇಶ್‌, ಗೋಪಾಲಗೌಡ, ನಾಗರಾಜು, ತಮ್ಮಣ್ಣಗೌಡ ಸೇರಿದಂತೆ ನೂರಾರು ಮಂದಿ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ