ಆ್ಯಪ್ನಗರ

ಬಣ್ಣದ ಅಂಗಡಿಗೆ ಬೆಂಕಿ: 6 ಲಕ್ಷ ರೂ. ನಷ್ಟ

ನಾಗಮಂಗಲ: ಬಣ್ಣ ಮಿಕ್ಸಿಂಗ್‌ ಮಾಡುವ ಅಂಗಡಿಗೆ ಭಾನುವಾರ ಮಧ್ಯಾಹ್ನ ಆಕಸ್ಮಿಕ ಬೆಂಕಿ ತಗುಲಿ ಸುಮಾರು 6 ಲಕ್ಷ ರೂ.ಗೂ ಅಧಿಕ ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿದೆ.

Vijaya Karnataka 20 Aug 2018, 5:00 am
ನಾಗಮಂಗಲ: ಬಣ್ಣ ಮಿಕ್ಸಿಂಗ್‌ ಮಾಡುವ ಅಂಗಡಿಗೆ ಭಾನುವಾರ ಮಧ್ಯಾಹ್ನ ಆಕಸ್ಮಿಕ ಬೆಂಕಿ ತಗುಲಿ ಸುಮಾರು 6 ಲಕ್ಷ ರೂ.ಗೂ ಅಧಿಕ ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿದೆ.
Vijaya Karnataka Web fire for paint shop rs 6 lakh loss
ಬಣ್ಣದ ಅಂಗಡಿಗೆ ಬೆಂಕಿ: 6 ಲಕ್ಷ ರೂ. ನಷ್ಟ


ಮಂಡ್ಯ -ನಾಗಮಂಗಲ ರಸ್ತೆಯ ಮುಸ್ಲಿಂ ಬ್ಲಾಕ್‌ನ ಆರ್ಮಂ ರಷೀದ್‌ ಎಂಬುವರಿಗೆ ಸೇರಿದ ಮನೆ, ಮಳಿಗೆಯಲ್ಲಿ ಬಾಡಿಗೆಗೆ ಇದ್ದ ಬಣ್ಣದ ಅಂಗಡಿ ಮಾಲೀಕ ಜಮೀರ್‌ ಪಾಷ ಎಂಬುವರಿಗೆ ಸೇರಿದ ಬಣ್ಣ ಹಾಗೂ ಮನೆ ಬೆಂಕಿಗೆ ಭಸ್ಮವಾಗಿದೆ.

ಜಮೀರ್‌ ಪಾಷ ನೂತನವಾಗಿ ಬಣ್ಣ ಮಿಕ್ಸಿಂಗ್‌ ಮಾಡುವ ಯಂತ್ರ ಖರೀದಿಧಿಸಿದ್ದು, ಈ ಯಂತ್ರದ ಸಹಾಯದಿಂದ ಬಣ್ಣ ಮಿಕ್ಸಿಂಗ್‌ ಮಾಡುವ ವೇಳೆ ಆಕಸ್ಮಿಕವಾಗಿ ಬೆಂಕಿಯ ಜ್ವಾಲೆ ಇಡಿ ಅಂಗಡಿ ಹಾಗೂ ಮನೆಯನ್ನು ಅವರಿಸಿದೆ. ಈ ವೇಳೆ ಅಂಗಡಿಯಲ್ಲಿದ್ದ 3 ಲಕ್ಷ ಕ್ಕೂ ಅಧಿಧಿಕ ಬಣ್ಣ ಹಾಗೂ 2.5 ಲಕ್ಷ ದ ಬಣ್ಣ ಮಿಕ್ಸಿಂಗ್‌ ಯಂತ್ರ ಸೇರಿ ಹಲವು ಬೆಲೆ ಬಾಳುವ ವಸ್ತುಗಳು ಸುಟ್ಟು ಕರಕಲಾಗಿದೆ. ಇದೇ ಮನೆಗೆ ಹೊಂದಿಕೊಂಡಂತ್ತಿದ್ದ ಅಕ್ಬರ್‌ ಎಂಬುವವರು ವಾಸವಿದ್ದ ಬಾಡಿಕಗೆ ಮನೆಯೂ ಬೆಂಕಿಯ ಕೆನ್ನಾಲಗೆಗೆ ಸಿಲುಕಿದೆ. ಅದೃಷ್ಟವಶಾತ್‌ ಯಾವುದೇ ಪ್ರಾಣಾಪಾಯವಾಗಿಲ್ಲ.

ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂಧಿದಿ ಆಗಮಿಸಿ, ಬೆಂಕಿ ನಂದಿಸಿದರು. ಸೆಸ್ಕ್‌ ಇಲಾಖೆಯ ನೌಕರರು ವಿದ್ಯುತ್‌ ಸಂಪರ್ಕ ಕಡಿತಗೊಳಿಸಿದರು. ಬೆಂಕಿ ಕಾಣುತ್ತಿದ್ದಂತೆ ಅಕ್ಕ, ಪಕ್ಕದ ನೂರಾರು ಮಂದಿ ಜಮಾಯಿಸಿ ಬೆಂಕಿಯನ್ನು ನಂದಿಸಲು ಶ್ರಮಿಸಿದರು. ಪೊಲೀಸರು ಕೂಡ ಸ್ಥಳದಲ್ಲಿ ಹಾಜರಿದ್ದರು. ನಾಗಮಂಗಲ ಪೊಳಿಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಾಸಕ ಭೇಟಿ: ಘಟನೆ ಸ್ಥಳಕ್ಕೆ ಶಾಸಕ ಸುರೇಶ್‌ ಗೌಡ ಭೇಟಿ ನೀಡಿ ಮನೆಯ ಮಾಲೀಕ ಆರ್ಮಂ ರಷೀದ್‌ ಹಾಗೂ ಬಣ್ಣದ ಅಂಗಡಿ ಮಾಲೀಕ ಜಮೀರ್‌ ಪಾಷ ಅವರಿಗೆ ತಲಾ 50 ಸಾವಿರ ರೂ. ಪರಿಹಾರ ನೀಡಿದರು. ಮಾಜಿ ಶಾಸಕ ಎನ್‌.ಚಲುವರಾಯಸ್ವಾಮಿ ಕೂಡ ಭೇಟಿ ನೀಡಿ ತಲಾ 25 ಸಾವಿರ ರೂ.ನೀಡುವ ಭರವಸೆ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ