ಆ್ಯಪ್ನಗರ

ಕಣ್ಮನ ಸೆಳೆದ ಜಾನಪದ ಕಲಾಮೇಳ ಮೆರವಣಿಗೆ

ಕಣ್ಮನ ಸೆಳೆದ ಜಾನಪದ ಕಲಾಮೇಳ ಮೆರವಣಿಗೆ ಧಿಧಿಧಿಧಿಧಿಧಿಧಿಧಿಧಿಧಿಧಿಧಿಧಿಧಿಧಿಧಿಧಿಧಿಧಿಧಿಧಿಧಿಧಿಧಿಧಿಧಿಧಿಧಿಧಿಧಿ ವಿಕ ಸುದ್ದಿಲೋಕ ನಾಗಮಂಗಲ ತಾಲೂಕಿನ ...

Vijaya Karnataka 26 Sep 2019, 5:00 am
ನಾಗಮಂಗಲ: ತಾಲೂಕಿನ ಆದಿಚುಂಚನಗಿರಿಯಲ್ಲಿಭೈರವೈಕ್ಯ ಡಾ.ಬಾಲಗಂಗಾಧರನಾಥ ಸ್ವಾಮೀಜಿ ಗುರು ಸಂಸ್ಮರಣೋತ್ಸವದ ನಿಮಿತ್ತ ಶ್ರೀ ಮಠದಲ್ಲಿನಡೆದ ರಾಜ್ಯಮಟ್ಟದ 41ನೇ ಕಾಲಭೈರವೇಶ್ವರ ಜಾನಪದ ಕಲಾ ಮೇಳದ ಅಂಗವಾಗಿ ಜಾನಪದ ಕಲಾವಿದರ ಆಕರ್ಷಕ ಮೆರವಣಿಗೆ ನಡೆಯಿತು.
Vijaya Karnataka Web folk art procession in adichunchanagiri mutt
ಕಣ್ಮನ ಸೆಳೆದ ಜಾನಪದ ಕಲಾಮೇಳ ಮೆರವಣಿಗೆ


ಮಂಗಳವಾರ ರಾತ್ರಿ ಅದಿಚುಂಚನಗಿರಿಯ ಹೆಬ್ಬಗಿಲು ಚುಂಚನಹಳ್ಳಿ ಮಹಾದ್ವಾರದಿಂದ ಪ್ರಾರಂಭವಾದ ಮೆರವಣಿಗೆಯಲ್ಲಿಸಾವಿರಾರು ಜಾನಪದ ಕಲಾವಿದರು ಭಾಗವಹಿಸಿದ್ದರು. ಡಾ.ನಿರ್ಮಲಾನಂನಾಥಸ್ವಾಮೀಜಿ ಸರ್ವಾಲಂಕೃತವಾಗಿದ್ದ ಮುತ್ತಿನ ಪಲ್ಲಕ್ಕಿಯಲ್ಲಿಕುಳಿತು ಕಲಾವಿದರು ಮತ್ತು ಕಲಾಸಕ್ತರಿಗೆ ದರ್ಶನ ನೀಡಿದರು. ಚುಂಚನಹಳ್ಳಿ ಮುಖ್ಯ ದ್ವಾರದಿಂದ ಕಾಲಭೈರವೇಶ್ವರ ಪುಷ್ಕರಣಿಯವರೆಗೆ ಸುಮಾರು ಒಂದು ಕಿಲೋ ಮೀಟರ್‌ ದೂರ ಕ್ರಮಿಸಿದ ಅದ್ದೂರಿ ಮೆರವಣಿಗೆಯಲ್ಲಿಕಲಾವಿದರು ಹಾಡಿ ಕುಣಿದು ಕುಪ್ಪಳಿಸುವ ಜತೆಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.

ಡೊಳ್ಳು ಕುಣಿತ, ಕಂಸಾಳೆ, ಕೋಲಾಟ, ಪೂಜಾ ಕುಣಿತ, ವೀರಗಾಸೆ ಕುಣಿತ, ಪಟದ ಕುಣಿತ, ಲಂಬಾಣಿ ನೃತ್ಯ ಸೇರಿದಂತೆ ಅನೇಕ ಜಾನಪದ ಕಲಾ ತಂಡಗಳ ಪ್ರದರ್ಶನ ಆಕರ್ಷಣಿಯವಾಗಿತ್ತು. ರಸ್ತೆಯ ಇಕ್ಕೆಲಗಳಲ್ಲಿನಿಂತು ಮೆರವಣಿಗೆಯನ್ನು ವೀಕ್ಷಿಸಿದ ಕಲಾಸಕ್ತರು ಹಾಗೂ ಶ್ರೀಮಠದ ಭಕ್ತರು ಕಲಾವಿದರ ಚಮತ್ಕಾರಗಳನ್ನು ಆನಂದಿಸಿದರು.

ಅದ್ದೂರಿ ತೆಪೊ್ಪೕತ್ಸವ: ಮೆರವಣಿಗೆ ನಂತರ ಕಾಲಭೈರವೇಶ್ವರ ಪುಷ್ಕರಣಿಯಲ್ಲಿತೆಪೊ್ಪೕತ್ಸವ ಅದ್ದೂರಿಯಾಗಿ ಜರುಗಿತು. ವಿದ್ಯುತ್‌ ದೀಪಗಳು ಮತ್ತು ಪುಷ್ಪಾಲಂಕಾರಗೊಂಡಿದ್ದ ತೆಪ್ಪದಲ್ಲಿನಿರ್ಮಲಾನಂದನಾಥಸ್ವಾಮೀಜಿ ಕುಳಿತು ದರ್ಶನ ನೀಡಿರು. ಶ್ರಿಗಳ ಬಲ ಭಾಗ ಭೈರವೈಕ್ಯಶ್ರೀಗಳ ಪುತ್ಥಳಿ, ಎಡ ಭಾಗದಲ್ಲಿಕಾಲಭೈರವೇಶ್ವರಸ್ವಾಮಿ ಪ್ರತಿಮೆ ಇಡಲಾಗಿತ್ತು. ತೆಪೊ್ಪೕತ್ಸವ ಪ್ರಾರಂಭವಾಗುತ್ತಿದ್ದಂತೆ ಪುಷ್ಕರಣಿ ನೆರೆದಿದ್ದ ಭಕ್ತರಿಂದ ಜಯಘೋಷ ಮೊಳಗಿತು. ಶ್ರೀಮಠದ ಕಾರ್ಯದರ್ಶಿ ಪ್ರಸನ್ನನಾಥಸ್ವಾಮೀಜಿ, ಹಾಸನ ಶಾಖಾಮಠದ ಶಂಭೂನಾಥಸ್ವಾಮೀಜಿ, ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮಾನಂದನಾಥಸ್ವಾಮೀಜಿ, ಪ್ರಕಾಶನಾಥಸ್ವಾಮೀಜಿ, ಸೌಮ್ಯನಾಥಸ್ವಾಮೀಜಿ, ಗುಣನಾಥಸ್ವಾಮೀಜಿ, ಮಂಗಳನಾಥಸ್ವಾಮೀಜಿ, ಅನ್ನದಾನೇಶ್ವರನಾಥಸ್ವಾಮೀಜಿ, ಧರ್ಮಪಾಲನಾಥಸ್ವಾಮೀಜಿ ಸೇರಿದಂತೆ ಸಾಧು ಸಂತರು, ಭಕ್ತರು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ