ಆ್ಯಪ್ನಗರ

ಪಿಡಿಒ, ಗ್ರಾಪಂ ಕಾರ್ಯದರ್ಶಿಗಳಿಂದ ಮನವಿ

ವಿಕ ಸುದ್ದಿಲೋಕ ಶ್ರೀರಂಗಪಟ್ಟಣ ಗ್ರಾಮ ಪಂಚಾಯಿತಿ ಸಿಬ್ಬಂದಿಯನ್ನು ಅನ್ಯ ಇಲಾಖೆಗಳ ಕಾರ‍್ಯಕ್ಕೆ ನಿಯೋಜಿಸುತ್ತಿರುವುದನ್ನು ವಿರೋಧಿಸಿ ಪಿಡಿಒ, ಗ್ರಾಪಂ ಕಾರ‍್ಯದರ್ಶಿಗಳು ಸೋಮವಾರ ...

Vijaya Karnataka 15 Oct 2019, 5:00 am
ಶ್ರೀರಂಗಪಟ್ಟಣ: ಗ್ರಾಮ ಪಂಚಾಯಿತಿ ಸಿಬ್ಬಂದಿಯನ್ನು ಅನ್ಯ ಇಲಾಖೆಗಳ ಕಾರ‍್ಯಕ್ಕೆ ನಿಯೋಜಿಸುತ್ತಿರುವುದನ್ನು ವಿರೋಧಿಸಿ ಪಿಡಿಒ, ಗ್ರಾಪಂ ಕಾರ‍್ಯದರ್ಶಿಗಳು ಸೋಮವಾರ ತಾಪಂ ಕಾರ‍್ಯನಿರ್ವಾಹಕ ಅಧಿಕಾರಿ ಹಾಗೂ ತಹಸೀಲ್ದಾರ್‌ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.
Vijaya Karnataka Web grama panchayat pdo and secretaries protest in srirangapattan
ಪಿಡಿಒ, ಗ್ರಾಪಂ ಕಾರ್ಯದರ್ಶಿಗಳಿಂದ ಮನವಿ


ಗ್ರಾಮ ಪಂಚಾಯಿತಿ ಬಿಲ್‌ ಕಲೆಕ್ಟರ್‌, ಕಂಪ್ಯೂಟರ್‌ ಆಪರೇಟರ್‌, ಅಟೆಂಡರ್‌ಗಳನ್ನು ಕಂದಾಯ, ಶಿಕ್ಷಣ ಇತರ ಇಲಾಖೆಗಳಿಗೆ ನಿಯೋಜನೆ ಮಾಡಲಾಗುತ್ತಿದೆ. ಜತೆಗೆ ಸಿಬ್ಬಂದಿಯನ್ನು ಕೀಳಾಗಿ ನಡೆಸಿಕೊಳ್ಳಲಾಗುತ್ತಿದೆ. ಮಹಿಳಾ ಸಿಬ್ಬಂದಿಗೆ ಮೂಲ ಸೌಕರ‍್ಯ ಒದಗಿಸುತ್ತಿಲ್ಲ. ಇದರಿಂದ ಗ್ರಾಮ ಪಂಚಾಯಿತಿ ಕೆಲಸಗಳು ನನೆಗುದಿಗೆ ಬಿದ್ದಿವೆ ಎಂದು ಗ್ರಾಪಂ ಅಭಿವೃದ್ಧಿ ಅಧಿಕಾರಿಗಳ ಸಂಘ ಅಧ್ಯಕ್ಷ ನಾಗೇಂದ್ರ ದೂರಿದರು.

ಮನವಿ ಸ್ವೀಕರಿಸಿ ಮಾತನಾಡಿದ ತಾಪಂ ಇಒ ನಾಗವೇಣಿ, ಸಮಸ್ಯೆ ಕುರಿತು ಜಿಲ್ಲಾಧಿಕಾರಿ, ಜಿ.ಪಂ ಸಿಇಒ, ಉಪವಿಭಾಗಾಧಿಕಾರಿ ಹಾಗೂ ತಹಸೀಲ್ದಾರ್‌ ಅವರಿಗೆ ಪತ್ರ ಬರೆಯಲಾಗುವುದು ಎಂದು ಹೇಳಿದರು. ತಹಸೀಲ್ದಾರ್‌ ಡಿ.ನಾಗೇಶ್‌ ಅವರಿಗೂ ಮನವಿ ಸಲ್ಲಿಸಲಾಯಿತು. ಸಂಘದ ಉಪಾಧ್ಯಕ್ಷ ಬಿ.ಬಸವರಾಜು, ಖಜಾಂಚಿ ರಮೇಶ್‌, ಸದಸ್ಯರಾದ ರಾಜೇಶ್ವರ್‌, ಶಿಲ್ಪಾ, ಚೈತ್ರ, ಕೆಂಪಲಿಂಗೇಗೌಡ, ಪ್ರಶಾಂತ್‌ಬಾಬು ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ