ಆ್ಯಪ್ನಗರ

ಜಲ್ಲಿ ಕ್ರಷರ್‌, ಡಾಂಬರ್‌ ಪ್ಲಾಂಟ್‌ ನಿಲ್ಲಸಿ: ಡಿಸಿ, ಎಸ್ಪಿಗೆ ರೈತ ದೂರು

ಮಂಡ್ಯ: ಜಲ್ಲಿ ಕ್ರಷರ್‌, ಡಾಂಬರ್‌ ಪ್ಲಾಂಟ್‌ನಿಂದ ವ್ಯವಸಾಯಕ್ಕೆ ತೊಂದರೆ ಉಂಟಾಗುತ್ತಿದ್ದು, ಕೂಡಲೇ ಇದನ್ನು ಸ್ಥಗಿತಗೊಳಿಸದಿದ್ದರೆ ಜಮೀನಿನಲ್ಲೇ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ತಾಲೂಕಿನ ಕೋಡಿ ಶೆಟ್ಟಿಪುರ ಗ್ರಾಮದ ರೈತ ಮರೀಗೌಡ ದೂರು ನೀಡಿದ್ದಾರೆ.

Vijaya Karnataka 17 Sep 2018, 5:00 am
ಮಂಡ್ಯ: ಜಲ್ಲಿ ಕ್ರಷರ್‌, ಡಾಂಬರ್‌ ಪ್ಲಾಂಟ್‌ನಿಂದ ವ್ಯವಸಾಯಕ್ಕೆ ತೊಂದರೆ ಉಂಟಾಗುತ್ತಿದ್ದು, ಕೂಡಲೇ ಇದನ್ನು ಸ್ಥಗಿತಗೊಳಿಸದಿದ್ದರೆ ಜಮೀನಿನಲ್ಲೇ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ತಾಲೂಕಿನ ಕೋಡಿ ಶೆಟ್ಟಿಪುರ ಗ್ರಾಮದ ರೈತ ಮರೀಗೌಡ ದೂರು ನೀಡಿದ್ದಾರೆ.
Vijaya Karnataka Web gravel crusher dumper plant stop dc sp complaint from farmers
ಜಲ್ಲಿ ಕ್ರಷರ್‌, ಡಾಂಬರ್‌ ಪ್ಲಾಂಟ್‌ ನಿಲ್ಲಸಿ: ಡಿಸಿ, ಎಸ್ಪಿಗೆ ರೈತ ದೂರು

ರೈತ ಮರೀಗೌಡರ ಜಮೀನಿನ ಪಕ್ಕ ಮೈಸೂರಿನ ಮೂಲದ ಉದ್ಯಮಿಯೊಬ್ಬರಿಗೆ ಸೇರಿದ ಜಮೀನಿಲ್ಲಿ ಜಲ್ಲಿ ಕ್ರಷರ್‌ ಮತ್ತು ಡಾಂಬರ್‌ ಪ್ಲಾಂಟ್‌ ನಡೆಸಲಾಗುತ್ತಿದೆ. ಇದರಿಂದ ದುರ್ವಾಸನೆ ಮತ್ತು ಧೂಳು ಹೆಚ್ಚಾಗಿದ್ದು, ರೇಷ್ಮೆ ಬೆಳೆ ಮತ್ತು ದನ-ಕರುಗಳಿಗೆ ಮೇವು ಬೆಳೆಯಲಾಗದೆ ವ್ಯವಸಾಯ ಮಾಡಲು ಸಾಧ್ಯವಾಗುತ್ತಿಲ್ಲ. ಕುಟುಂಬ ನಿರ್ವಹಣೆಗೆ ಕೃಷಿಯನ್ನೇ ನಂಬಿ ಬದುಕುತ್ತಿರುವ ನಮಗೆ ಜಲ್ಲಿ ಕ್ರಷರ್‌ ಮತ್ತು ಡಾಂಬರ್‌ ಪ್ಲಾಂಟ್‌ನಿಂದ ತೊಂದರೆಯಾಗುತ್ತಿದೆ.

ಹಳೆಯ ಡಾಂಬರ್‌ ಪ್ಲಾಂಟ್‌ ಜತೆಗೆ ನಿರ್ಮಿಸಿರುವ ಬೃಹತ್‌ ಡಾಂಬರ್‌ ಪ್ಲಾಂಟ್‌ ಯಾವುದೇ ಪರವಾನಗಿ ಇಲ್ಲದೆ ಕೆಲಸ ಮಾಡುತ್ತಿದ್ದು, ಉಪವಿಭಾಗಾಧಿಕಾರಿ, ತಹಸೀಲ್ದಾರ್‌, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಪರಿಸರ ಮತ್ತು ವಾಯು ಮಾಲಿನ್ಯ ಇಲಾಖೆ, ಗ್ರಾ.ಪಂಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ.

ಈ ಕುರಿತು ಪ್ಲಾಂಟ್‌ನ ಮಾಲೀಕರಿಗೆ ಅಳಲು ತೋಡಿಕೊಂಡರೆ ಬೆದರಿಕೆ ಹಾಕುತ್ತಾರೆ. ಜಿಲ್ಲಾಧಿಕಾರಿ ಎನ್‌.ಮಂಜುಶ್ರೀ ಮತ್ತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ.ಶಿವಪ್ರಕಾಶ್‌ ಜಲ್ಲಿ ಕ್ರಷರ್‌ ಡಾಂಬರ್‌ ಪ್ಲಾಂಟ್‌ ನಿಲ್ಲಿಸಿ ಈ ಸಂಬಂಧ ಸೂಕ್ತ ಕ್ರಮ ಜರುಗಿಸದಿದ್ದರೆ, ತಮ್ಮ ಜಮೀನಲ್ಲೇ ಆತ್ಮಹತ್ಯೆ ಮಾಡಿಕೊಳ್ಳವುದಾಗಿ ರೈತ ಮರೀಗೌಡ ದೂರಿನ ಮೂಲಕ ಎಚ್ಚರಿಕೆ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ