ಆ್ಯಪ್ನಗರ

ಇಂದು ಹನುಮ ಜಯಂತಿ ಬೃಹತ್‌ ಸಂಕೀರ್ತನ ಯಾತ್ರೆ

ಇಂದು ಹನುಮ ಜಯಂತಿ ಬೃಹತ್‌ ಸಂಕೀರ್ತನ ಯಾತ್ರೆ ವಿಕ ಸುದ್ದಿಲೋಕ ಶ್ರೀರಂಗಪಟ್ಟಣ ಪಟ್ಟಣದಲ್ಲಿ ಡಿ20ರಂದು ಹನುಮ ಜಯಂತಿ ಬೃಹತ್‌ ಸಂಕೀರ್ತನ ಯಾತ್ರೆ ನಡೆಯಲಿದೆ...

Vijaya Karnataka 20 Dec 2018, 5:00 am
ಶ್ರೀರಂಗಪಟ್ಟಣ: ಪಟ್ಟಣದಲ್ಲಿ ಡಿ.20ರಂದು ಹನುಮ ಜಯಂತಿ ಬೃಹತ್‌ ಸಂಕೀರ್ತನ ಯಾತ್ರೆ ನಡೆಯಲಿದೆ. ಯಾತ್ರೆಗೆ ಆದಿಚುಂಚನಗಿರಿ ಶಾಖಾ ಮಠದ ಮೈಸೂರಿನ ಸೋಮಾನಂದನಾಥ ಸ್ವಾಮೀಜಿ ಚಾಲನೆ ನೀಡಲಿದ್ದಾರೆ.
Vijaya Karnataka Web hanuma jayanthi yatre today in srirangapattana
ಇಂದು ಹನುಮ ಜಯಂತಿ ಬೃಹತ್‌ ಸಂಕೀರ್ತನ ಯಾತ್ರೆ


ಪಟ್ಟಣದ ಹೊರವಲಯದಲ್ಲಿರುವ ಗಂಜಾಂನ ನಿಮಿಷಾಂಬ ದೇವಾಲಯದ ಬಳಿ ಇರುವ ಆಂಜನೇಯ ದೇವಾಲಯದಿಂದ ಪಟ್ಟಣದ ಮೂಡಲುಬಾಗಿಲು ಆಂಜನೇಯ ದೇವಸ್ಥಾನದವರೆಗೂ ಹನುಮ ಮಾಲಾಧಾರಿಗಳ ಸಂಕೀರ್ತನ ಪಾದಯಾತ್ರೆ ನಡೆಯಲಿದೆ. ಮೂಡಲುಬಾಗಿಲು ಹನುಮನ ಸೇವಾಸಮಿತಿ, ವಿಶ್ವ ಹಿಂದೂ ಪರಿಷತ್‌ ಹಾಗೂ ಭಜರಂಗದಳ ಸೇರಿದಂತೆ ನಾನಾ ಹಿಂದೂ ಸಂಘಟನೆಗಳ ಸುಮಾರು ಸಾವಿರಾರು ಕಾರ್ಯಕರ್ತರು ಯಾತ್ರೆಯಲ್ಲಿ ಭಾಗವಹಿಸುವರು.

ಶ್ರೀರಂಗಪಟ್ಟಣ, ಗಂಜಾಂ, ಕೆ.ಆರ್‌.ಪೇಟೆ, ನಾಗಮಂಗಲ, ಮದ್ದೂರು, ಮಳವಳ್ಳಿ, ಮಂಡ್ಯ ಮತ್ತು ಮೈಸೂರು ಜಿಲ್ಲೆಯಿಂದಲೂ ಹನುಮನ ಮಾಲಾಧಾರಣೆ ಮಾಡಿರುವ ಭಕ್ತರು ಪಟ್ಟಣಕ್ಕೆ ಆಗಮಿಸುತ್ತಾರೆ. ರಂಗನಾಥ ದೇವಾಲಯ ಮೈದಾನದಲ್ಲಿ ಬೃಹತ್‌ ಸಭೆ ನಡೆಯಲಿದೆ. ಹನುಮಾನ್‌ ಚಾಲಿಸಾ ಪಠಣೆ ಹಾಗೂ ಬೃಹತ್‌ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಚಂದ್ರವನ ಆಶ್ರಮದ ಪೀಠಾಧ್ಯಕ್ಷ ತಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ, ಹಿಂದೂ ಜಾಗರಣಾ ವೇದಿಕೆಯ ಪ್ರಧಾನ ಕಾರ್ಯದರ್ಶಿ ಶಿವನಂದಾ ಬಡಿಗೇರ್‌, ಹಿಂದೂ ಜಾಗರಣಾ ವೇದಿಕೆಯ ವಿಭಾಗ ಕಾರ್ಯದರ್ಶಿ ಜೀವನ್‌ ಇತರರು ಭಾಗವಹಿಸುವರು ಹಿಂದೂ ಜಾಗರಣ ವೇದಿಕೆ ಮುಖಂಡರು ತಿಳಿಸಿದ್ದಾರೆ.

ಬಿಗಿಬಂದೋಬಸ್ತ್‌: ಹನುಮ ಜಯಂತಿ ಹಿನ್ನಲೆಯಲ್ಲಿ ಸೂಕ್ತ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಲಾಗಿದೆ. ಎಸ್ಪಿ, 2 ಡಿವೈಸ್ಪಿ, 6 ಸಿಪಿಐ, 15 ಪಿಎಸ್‌ಐ 150 , 2 ಡಿಆರ್‌, ಕೆಎಸ್‌ಆರ್‌ಪಿ 3 ಹಾಗೂ 100 ಹೋಂಗಾರ್ಡ್‌ ಸಿಬ್ಬಂದಿ ಭದ್ರತೆಗೆ ನಿಯೋಜಿಸಲಾಗಿದೆ. 20 ಕ್ಕೂ ಹೆಚ್ಚು ಸ್ಥಳಗಳಲ್ಲಿ ಸಿಸಿ ಟಿವಿ ಕಣ್ಗಾವಲು ಇರಿಸಲಾಗಿದೆ. ಬುಧವಾರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶಿವಪ್ರಕಾಶ್‌ ದೇವರಾಜ್‌ ಪಟ್ಟಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ