ಆ್ಯಪ್ನಗರ

ಶ್ರೀರಂಗಪಟ್ಟಣ: ಭಾರಿ ಮಳೆಗೆ ಮನೆಗಳು ಕುಸಿತ

​​ಮನೆಯಲ್ಲಿದ್ದ ಧಾನ್ಯ ಹಾಗೂ ಗೃಹ ಉಪಯೋಗಿ ವಸ್ತುಗಳು ಹಾನಿಗೊಳಗಾಗಿವೆ. ದೊಡ್ಡಪಾಳ್ಯ ಗ್ರಾಮದಲ್ಲಿ ತೆಂಗಿನ ಮರ ಮುರಿದು ವಿದ್ಯುತ್‌ ವೈರ್‌ ಮೇಲೆ ಬಿದ್ದ ಕಾರಣ ಮೂರು ವಿದ್ಯುತ್‌ ಕಂಬಗಳು ಮುರಿದುಬಿದ್ದಿವೆ. ಇಡೀ ರಾತ್ರಿ ಗ್ರಾಮ ಕಗ್ಗತ್ತಲಲ್ಲಿ ಮುಳುಗಿತ್ತು.

Vijaya Karnataka 21 Oct 2021, 7:33 pm
ಶ್ರೀರಂಗಪಟ್ಟಣ: ಬುಧವಾರ ರಾತ್ರಿ ಸುರಿದ ಭಾರಿ ಮಳೆಗೆ ತಾಲೂಕಿನ ನಾನಾ ಗ್ರಾಮಗಳಲ್ಲಿ ಮನೆಗಳು ಧರೆಗುರುಳಿದ್ದು, ಲೋಕ ಪಾವನಿ ನದಿಯಲ್ಲಿ ಹೆಚ್ಚು ಪ್ರಮಾಣದ ನೀರು ಹರಿದ ಕಾರಣ ನದಿ ಪ್ರದೇಶದಲ್ಲಿರುವ ಜಮೀನಿಗೆ ನೀರು ಹರಿದು ಬೆಳೆ ಹಾನಿಯಾಗಿದೆ.
Vijaya Karnataka Web ಮಳೆ ಮೋಡ
ಮಳೆ ಮೋಡ


ಮಂಡ್ಯ ಜಿಲ್ಲೆಯ ತಾಲೂಕಿನ ಚಿಂದಗಿರಿಕೊಪ್ಪಲು ಗ್ರಾಮದಲ್ಲಿ ರವಿ ಎಂಬುವವರಿಗೆ ಸೇರಿದ ಹಳೆಯ ಮನೆ ಧರೆಗುರುಳಿದೆ ಅದೃಷ್ಟವಶಾತ್‌ ಮನೆ, ಮಂದಿ ಪಕ್ಕದ ಮನೆಯಲ್ಲಿ ಮಲಗಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಡತನಾಳು, ನೆಲಮನೆ, ಎಂ. ಶೆಟ್ಟಹಳ್ಳಿ, ತಡಗವಾಡಿ ಇತರ ಗ್ರಾಮಗಳಲ್ಲಿ ಮಣ್ಣಿನಿಂದ ನಿರ್ಮಿಸಿದ್ದ ಮನೆಯ ಗೋಡೆಗಳು ಧರೆಗುರುಳಿವೆ.

ವರುಣನ ಅಬ್ಬರಕ್ಕೆ ಕೊಚ್ಚಿ ಹೋದ ರೈತನ ಬದುಕು..! ಶ್ರೀರಂಗಪಟ್ಟಣದಲ್ಲಿ ಟೊಮೆಟೋ ಬೆಳೆ ನಾಶ

ಮನೆಯಲ್ಲಿದ್ದ ಧಾನ್ಯ ಹಾಗೂ ಗೃಹ ಉಪಯೋಗಿ ವಸ್ತುಗಳು ಹಾನಿಗೊಳಗಾಗಿವೆ. ದೊಡ್ಡಪಾಳ್ಯ ಗ್ರಾಮದಲ್ಲಿ ತೆಂಗಿನ ಮರ ಮುರಿದು ವಿದ್ಯುತ್‌ ವೈರ್‌ ಮೇಲೆ ಬಿದ್ದ ಕಾರಣ ಮೂರು ವಿದ್ಯುತ್‌ ಕಂಬಗಳು ಮುರಿದುಬಿದ್ದಿವೆ. ಇಡೀ ರಾತ್ರಿ ಗ್ರಾಮ ಕಗ್ಗತ್ತಲಲ್ಲಿ ಮುಳುಗಿತ್ತು.

ಪಾಂಡವಪುರ, ನಾಗಮಂಗಲದಲ್ಲಿಯೂ ಹೆಚ್ಚು ಪ್ರಮಾಣದಲ್ಲಿ ಮಳೆ ಸುರಿದ ಪರಿಣಾಮ. ಲೋಕಪಾವನಿ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದ್ದು ನದಿ ಪಾತ್ರದಲ್ಲಿ ಇರುವ ಚಿಂದಗಿರಿಕೊಪ್ಪಲು, ನೆಲಮನೆ, ಬಲ್ಲೇನಹಳ್ಳಿ, ಶೆಟ್ಟಹಳ್ಳಿ ಇತರ ಗ್ರಾಮಗಳ ರೈತರ ಜಮೀನಿಗೆ ನದಿ ನೀರು ನುಗ್ಗಿದೆ. ರೈತರು ಬೆಳೆದಿದ್ದ ಭತ್ತ, ಕಬ್ಬು, ಬಾಳೆ, ತರಕಾರಿ ಬೆಳೆಗಳಿಗೆ ನೀರು ನುಗ್ಗಿ ಬೆಳೆ ಹಾನಿ ಸಂಭವಿಸಿದೆ.

ಮಂಡ್ಯದಲ್ಲಿ ವರುಣ ದೇವನ ರುದ್ರ ನರ್ತನ : ನದಿಗಳಂತಾದ ರಸ್ತೆಗಳು!

ರಾತ್ರಿ ಸುರಿದ ಮಳೆಗೆ ಹಾನಿಯಾಗಿರುವ ಸಂಬಂಧ ಸ್ಥಳಕ್ಕೆ ಭೇಟಿ ನೀಡಿ ವರದಿ ನೀಡುವಂತೆ ಎಲ್ಲಾ ರಾಜಸ್ವ ನಿರೀಕ್ಷಕರು ಹಾಗೂ ಗ್ರಾಮ, ಲೆಕ್ಕಿಗರಿಗೆ ಸೂಚಿಸಿದ್ದೇನೆ ನಿಖರ ವರದಿ ಆಧರಿಸಿ ಮನೆಕುಸಿತ, ಬೆಳೆಹಾನಿ ಸಂಬಂಧ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಲಾಗುವುದು ಸೂಕ್ತ ಕ್ರಮ ವಹಿಸಲಾಗುವುದು ಎಂದು ತಹಸೀಲ್ದಾರ್‌ ಶ್ವೇತ ಎನ್‌. ರವೀಂದ್ರ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ