ಆ್ಯಪ್ನಗರ

​ ಅಕ್ರಮ ಕಲ್ಲು ಪುಡಿ ಸಾಗಣೆ: ಐದು ಲಾರಿ ವಶ

ತಾಲೂಕಿನ ಬೇಬಿಬೆಟ್ಟದಲ್ಲಿ ಕಲ್ಲು ಗಣಿಗಾರಿಕೆಗೆ ನಿಷೇಧಾಜ್ಞೆ ಜಾರಿಯಾಗಿದ್ದರೂ, ಕಳ್ಳತನದಿಂದ ಕಲ್ಲಿನ ಪುಡಿ ಸಾಗಾಣಿಕೆ ಮಾಡುತ್ತಿದ್ದ ಐದು ಲಾರಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

Vijaya Karnataka 14 Oct 2017, 5:15 am
ಪಾಂಡವಪುರ: ತಾಲೂಕಿನ ಬೇಬಿಬೆಟ್ಟದಲ್ಲಿ ಕಲ್ಲು ಗಣಿಗಾರಿಕೆಗೆ ನಿಷೇಧಾಜ್ಞೆ ಜಾರಿಯಾಗಿದ್ದರೂ, ಕಳ್ಳತನದಿಂದ ಕಲ್ಲಿನ ಪುಡಿ ಸಾಗಾಣಿಕೆ ಮಾಡುತ್ತಿದ್ದ ಐದು ಲಾರಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
Vijaya Karnataka Web illegal stone powder transit five lorry seized
​ ಅಕ್ರಮ ಕಲ್ಲು ಪುಡಿ ಸಾಗಣೆ: ಐದು ಲಾರಿ ವಶ


ನಿಷೇಧಾಜ್ಞೆ ಜಾರಿಯಲ್ಲಿರುವ ಬೇಬಿಬೆಟ್ಟದ ಕಲ್ಲು ಗಣಿಗಾರಿಕೆ ಪ್ರದೇಶದಲ್ಲಿ ಗುರುವಾರ ರಾತ್ರಿ ಕಳ್ಳತನದಿಂದ ಕಲ್ಲಿನ ಪುಡಿ ಸಾಗಣೆ ಮಾಡುತ್ತಿದ್ದ ತಾಲೂಕಿನ ಕಟ್ಟೇರಿ ಗ್ರಾಮದ ಆನಂದ್, ನಾರಾಯಣ ಪುರ ಗ್ರಾಮದ ಲೋಕೇಶ್, ಶ್ರೀರಂಗಪಟ್ಟಣ ಬೆಳಗೂಳ ಗ್ರಾಮದ ಬಿ.ಎನ್.ರವಿ, ಕೆ.ಆರ್.ಪೇಟೆ ತಾಲೂಕಿನ ದುಡಕನಹಳ್ಳಿ ಗ್ರಾಮದ ಡಿ.ಸಿ.ಸುನೀಲ್‌ಚಂದ್ರ ಅವರಿಗೆ ಸೇರಿದ ಲಾರಿಗಳನ್ನು ವೃತ್ತ ನಿರೀಕ್ಷಕ ಎಂ.ಕೆ.ದೀಪಕ್ ನೇತತ್ವದ ಪೊಲೀಸರ ತಂಡ ವಶಕ್ಕೆ ಪಡೆದಿದೆ. ನಂತರ ಲಾರಿ ಮಾಲೀಕರು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ ದಂಡ ಪಾವತಿ ಮಾಡಿದ ಬಳಿ ಲಾರಿ ಬಿಡುಗಡೆ ಮಾಡಿದ್ದಾರೆ.

ಅಕ್ರಮ ಕಲ್ಲು ಗಣಿಗಾರಿಕೆ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಬೇಬಿಬೆಟ್ಟದ ಅಮತ್‌ಮಹಲ್ ಕಾವಲು, ಹೊನಗಾನಹಳ್ಳಿ, ಚಿನಕುರಳಿ ಹಾಗೂ ಬನ್ನಂಗಾಡಿ ಸರಹದ್ದಿನ ಪ್ರದೇಶಕ್ಕೆ ತಹಸೀಲ್ದಾರ್ ಡಿ.ಹನುಮಂತರಾಯಪ್ಪ ಒಂದು ತಿಂಗಳ ಕಾಲ ಕಲ್ಲು ಗಣಿಗಾರಿಕೆ ನಡೆಸದಂತೆ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶಿಸಿದ್ದರು.

ಇದರಿಂದ ನಿತ್ಯ ಶಬ್ದದಿಂದ ಕೂಡಿದ್ದ ಬೇಬಿಬೆಟ್ಟದ ಕಲ್ಲು ಗಣಿಗಾರಿಕೆ, ಕ್ರಷರ್, ಲಾರಿ ಸಾಗಣಿಕೆ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಲಾರಿಗಳು ಸಾಲುಗಟ್ಟಿನಿಂತಿವೆ, ಧೂಳಿನಿಂದ ಕೆಂಗೆಟ್ಟಿದ್ದ ಅಕ್ಕಪಕ್ಕದ ಗ್ರಾಮಸ್ಥರು ನೆಮ್ಮದಿಯ ನಿಟ್ಟುಸಿರುಬಿಟ್ಟಿದ್ದಾರೆ. ನಿಷೇಧಾಜ್ಞೆಯ ಬಗ್ಗೆ ಹೊನಗಾನಹಳ್ಳಿ, ಚಿನಕುರಳಿ, ಬನ್ನಂಗಾಡಿ ಗ್ರಾಮಗಳಲ್ಲಿ ಮೈಕ್‌ಗಳಲ್ಲಿ ಸಾರಿಸುವ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸಲಾಗುತ್ತಿದೆ. ನಿಷೇಧಾಜ್ಞೆ ಹಿನ್ನೆಲೆಯಲ್ಲಿ ಡಿಆರ್ ತುಕ್ಕಡಿ, ಪೊಲೀಸರ ತಂಡ ನಿಯೋಜಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ