ಆ್ಯಪ್ನಗರ

ಯಾವುದು ಸಕ್ರಮ, ಯಾವುದು ಅಕ್ರಮ? ಮಂಡ್ಯ ಸಭೆಯಲ್ಲಿ ಜೆಡಿಎಸ್‌ ಶಾಸಕರ ಪ್ರಶ್ನೆಗಳ ಸುರಿಮಳೆ..!

ಮಂಡ್ಯದಲ್ಲಿ ಬುಧವಾರ ನಡೆದ ದಿಶಾ ಸಭೆ ಜೆಡಿಎಸ್‌ ಶಾಸಕರು ಹಾಗೂ ಸಂಸದೆ ಸುಮಲತಾ ಅಂಬರೀಶ್‌ ನಡುವಿನ ಪರೋಕ್ಷ ಕಿತ್ತಾಟಕ್ಕೆ ಸಾಕ್ಷಿಯಾಯಿತು. ಗಣಿಗಾರಿಕೆಗೆ ನಿರ್ಬಂಧ ವಿಧಿಸಿರುವುದಕ್ಕೆ ಕೆರಳಿದ ಜೆಡಿಎಸ್‌ ಶಾಸಕರು ಅಧಿಕಾರಿಗಳನ್ನು ಯಾವುದು ಲೀಗಲ್‌..? ಯಾವುದು ಇಲ್ಲೀಗಲ್‌..? ಅಂತಾ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಕೇಳಿದರು.

Vijaya Karnataka Web 19 Aug 2021, 9:39 am

ಹೈಲೈಟ್ಸ್‌:


  • ಮಂಡ್ಯದ ದಿಶಾ ಸಭೆಯಲ್ಲಿ ಅಧಿಕಾರಿಗಳಿಗೆ ಜೆಡಿಎಸ್‌ ಶಾಸಕರಿಂದ ಪ್ರಶ್ನೆಗಳ ಸುರಿಮಳೆ
  • ಗಣಿಕಾರಿಕೆ/ಕ್ರಷರ್‌ಗಳ ಸ್ಥಗಿತದ ಬಗ್ಗೆ ಲೀಗಲ್‌ ಯಾವುದು..? ಇಲ್ಲೀಗಲ್‌ ಯಾವುದು..? ಅಂತಾ ಪ್ರಶ್ನೆ
  • ಲೀಗಲ್‌ ಮೈನಿಂಗ್‌ ನಿಲ್ಲಿಸಲು ನಿಮಗೆ ಅಧಿಕಾರ ಕೊಟ್ಟವರ‍್ಯಾರು? ರವೀಂದ್ರ ಶ್ರೀಕಂಠಯ್ಯ ಪ್ರಶ್ನೆ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web jds mla ravindra srikantaiah questions officials in disha meeting over mining
ಯಾವುದು ಸಕ್ರಮ, ಯಾವುದು ಅಕ್ರಮ? ಮಂಡ್ಯ ಸಭೆಯಲ್ಲಿ ಜೆಡಿಎಸ್‌ ಶಾಸಕರ ಪ್ರಶ್ನೆಗಳ ಸುರಿಮಳೆ..!
ಮಂಡ್ಯ: ಅಕ್ರಮ ಮತ್ತು ಸಕ್ರಮ ಕ್ರಷರ್‌, ಗಣಿಗಾರಿಕೆ ಬಗ್ಗೆಯೂ ದಿಶಾ ಸಭೆಯಲ್ಲಿ ಕಾವೇರಿದ ಚರ್ಚೆ ನಡೆಯಿತು. ಗಣಿಗಾರಿಕೆ/ಕ್ರಷರ್‌ಗಳ ಸ್ಥಗಿತ ಬಗ್ಗೆ ಜೆಡಿಎಸ್‌ ಶಾಸಕರು ಅಧಿಕಾರಿಗಳನ್ನು ನೇರವಾಗಿ ಪ್ರಶ್ನಿಸಿದರೆ, ಸಂಸದೆಯನ್ನು ಪರೋಕ್ಷವಾಗಿ ಟೀಕಿಸಿದರು.
ಲೀಗಲ್‌ ಯಾವುದು? ಇಲ್ಲೀಗಲ್‌ ಯಾವುದು? ಲೀಗಲ್‌ ಮೈನಿಂಗ್‌ನ್ನು ಏಕೆ ನಿಲ್ಲಿಸಿದ್ದೀರಿ? ಬೆಂಗಳೂರು-ಮೈಸೂರು ಹೈವೇ ಕಾಮಗಾರಿ ಮಾತ್ರ ಆದರೆ ಸಾಕಾ ನಿಮಗೆ? ಬೇರೆ ಕಾಮಗಾರಿಗಳು ಲೆಕ್ಕಕ್ಕಿಲ್ಲವೇ? ಕಚ್ಚಾ ಸಾಮಗ್ರಿಗಳ ಕೊರತೆಯಿಂದ ಎಲ್ಲ ಅಭಿವೃದ್ಧಿ ಕಾಮಗಾರಿಗಳು ಸ್ಥಗಿತಗೊಂಡಿವೆ. ಲೀಗಲ್‌ ಮೈನಿಂಗ್‌ ನಿಲ್ಲಿಸಲು ನಿಮಗೆ ಅಧಿಕಾರ ಕೊಟ್ಟವರ‍್ಯಾರು? ಯಾರು ಹೇಳಿದ್ದಾರೆಂದು ಗಣಿ ಅಧಿಕಾರಿಯನ್ನು ರವೀಂದ್ರ ಶ್ರೀಕಂಠಯ್ಯ ಪ್ರಶ್ನಿಸಿದರು.

ಇದಕ್ಕೆ ಶಾಸಕ ಸುರೇಶ್‌ಗೌಡ ದನಿಗೂಡಿಸಿದರು. ನಿಮ್ಮಿಂದಾಗಿ ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯ ನಿಂತಿದೆ. ಮಂಡ್ಯ ಜಿಲ್ಲೆಗೆ ಬೇರೆ ಕಾನೂನು ಇದೆಯಾ ಎಂದು ಪ್ರಶ್ನಿಸಿದಾಗ, ಅಧಿಕೃತವಾಗಿರುವ ಯಾವುದೇ ಗಣಿಗಾರಿಕೆಯನ್ನು ನಾವು ನಿಲ್ಲಿಸಿಲ್ಲವೆಂದು ಹಿರಿಯ ಭೂವಿಜ್ಞಾನಿ ಪದ್ಮಜಾ ತಿಳಿಸಿದರು. ಆಗ ಈ ಬಗ್ಗೆ ಮಾಹಿತಿ ನೀಡುವಂತೆ ಶಾಸಕರು ಪ್ರಶ್ನಿಸಿದಾಗ, ಯಾವುದೇ ಗಣಿಗಾರಿಕೆ ನಡೆಯುತ್ತಿಲ್ಲವೆಂದು ಪಾಂಡವಪುರ ಉಪ ವಿಭಾಗಾಧಿಕಾರಿ ಬಿ.ಸಿ.ಶಿವಾನಂದನಮೂರ್ತಿ ಸ್ಪಷ್ಟಪಡಿಸಿದರು. ಅಧಿಕಾರಿಗಳ ದ್ವಂದ್ವ ಹೇಳಿಕೆಗೆ ದಳಪತಿಗಳು ಗರಂ ಆದರು.

ಮಂಡ್ಯದಲ್ಲಿ ದಿಕ್ಕುತಪ್ಪಿದ 'ದಿಶಾ ಸಭೆ: ಸಂಸದೆ ಸುಮಲತಾ ವಿರುದ್ಧ ಜೆಡಿಎಸ್ ಶಾಸಕರ ಜಂಟಿ ಸಮರ..!
ಹಳ್ಳಿ ಜನರು ನಮ್ಮನ್ನು ಬೈಯ್ಯುತ್ತಿದ್ದಾರೆ. ಅಭಿವೃದ್ಧಿ ಕೆಲಸಗಳಿಗೆ ಮೆಟಿರೀಯಲ್‌ ಸಿಗ್ತಿಲ್ಲ. 2 ತಿಂಗಳಿನಿಂದ ಲೀಗಲ್‌ ಮೈನಿಂಗ್‌ ಕೂಡ ನಿಲ್ಲಿಸಿದ್ದೀರಾ. ಎಲ್ಲ ಅಭಿವೃದ್ದಿ ಕೆಲಸಗಳು ನಿಂತಿವೆ. ಮೆಟಿರಿಯಲ್ಸ್‌ ಅನ್ನು ಜಿಲ್ಲಾಡಳಿತವೇ ಪೂರೈಕೆ ಮಾಡುತ್ತಾ? ಜಿಲ್ಲೆಯಲ್ಲಿ ಲೀಗಲ್‌ ಆಗಿ ನಡೆಯುತ್ತಿರೊ ಗಣಿಗಾರಿಕೆ ಎಷ್ಟಿವೆ ಎಂದು ಶಾಸಕರಾದ ಸುರೇಶ್‌ಗೌಡ, ರವೀಂದ್ರ ಶ್ರೀಕಂಠಯ್ಯ ಪ್ರಶ್ನಿಸಿದರು.

ಬರೀ ಪ್ರವಾಸ ಮಾಡುವುದರಿಂದ ಏನು ಉಪಯೋಗ ಇಲ್ಲ: ಜನಾಶೀರ್ವಾದ ಯಾತ್ರೆಗೆ ಎಚ್‌ಡಿಕೆ ಟಾಂಗ್‌
ಇದಕ್ಕೆ ಉತ್ತರಿಸಿದ ಪದ್ಮಜಾ, ಜಿಲ್ಲೆಯಲ್ಲಿ 95 ಗಣಿಗಾರಿಕೆ ಲೀಗಲ್‌ ಆಗಿ ನಡೀತಿವೆ. ಕಾನೂನಾತ್ಮಕವಾಗಿ ನಡೆಯುತ್ತಿರುವ ಗಣಿಗಳನ್ನು ಸ್ಥಗಿತಗೊಳಿಸಿಲ್ಲ ಎಂದು ಪದ್ಮಜಾ ಉತ್ತರಿಸಿದರು. ಯಾರನ್ನು ಓಲೈಸಲು ಈ ರೀತಿ ಮಾತಾಡ್ತಿದ್ದೀರಿ. ಲೀಗಲ್‌ ಆಗಿದ್ದ ಮೇಲೂ ಯಾವ ಆಧಾರದ ಮೇಲೆ ನೀವು ನಿಲ್ಲಿಸಿದ್ದೀರಿ? ಕೈ ಕುಳಿ ಕೆಲಸ ಮಾಡುವ ಬಡವರ ಹೊಟ್ಟೆ ಮೇಲೇಕೆ ಕಲ್ಲಾಕ್ತಿದ್ದೀರಾ ಎಂದು ಶಾಸಕರು ಪ್ರಶ್ನಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ