ಆ್ಯಪ್ನಗರ

ಮಂಡ್ಯದಲ್ಲಿ 125 ಅಡಿ ಎತ್ತರದ ಕಾವೇರಮ್ಮನ ಪ್ರತಿಮೆ ನಿರ್ಮಿಸಲು ಮುಂದಾದ ರಾಜ್ಯ ಸರಕಾರ

ಜತೆಗೆ ಕೆಆರ್‌ಎಸ್‌ ಜಲಾಶಯವನ್ನು ಕಣ್ತುಂಬಿಕೊಳ್ಳಬಹುದಾದ 360 ಅಡಿ ಎತ್ತರದ ಎರಡು ಗಾಜಿನ ಗೋಪುರಗಳ ನಿರ್ಮಾಣವೂ ಸೇರಿದೆ

Times Now 15 Nov 2018, 11:28 am
ಬೆಂಗಳೂರು: ಮಂಡ್ಯ ಜಿಲ್ಲೆಯ ಕೃಷ್ಣ ರಾಜ ಸಾಗರ ಜಲಾಶಯದಲ್ಲಿ 125 ಅಡಿ ಎತ್ತರದ ಕಾವೇರಮ್ಮನ ಪ್ರತಿಮೆ ನಿರ್ಮಿಸಲು ಕರ್ನಾಟಕ ಸರಕಾರ ಯೋಜನೆ ರೂಪಿಸಿದೆ. ಸುಮಾರು 1,200 ಕೋಟಿ. ರೂ. ವೆಚ್ಚದಲ್ಲಿ ಕಾವೇರಮ್ಮನ ಪ್ರತಿಮೆ ನಿರ್ಮಾಣ ಮಾಡಲು ಮುಂದಾಗಿದೆ.
Vijaya Karnataka Web Cauvery Statue


ಜತೆಗೆ ಮ್ಯೂಸಿಯಂ ಕಾಂಪ್ಲೆಕ್ಸ್‌, ಕೆಆರ್‌ಎಸ್‌ ಜಲಾಶಯವನ್ನು ಕಣ್ತುಂಬಿಕೊಳ್ಳಬಹುದಾದ 360 ಅಡಿ ಎತ್ತರದ ಎರಡು ಗಾಜಿನ ಗೋಪುರಗಳು, ಒಳಾಂಗಣ ಕ್ರೀಡಾಂಗಣ, ಐತಿಹಾಸಿಕ ಸ್ಮಾರಕಗಳ ಪ್ರತಿಕೃತಿಗಳು ಇತ್ಯಾದಿ ನಿರ್ಮಿಸಲು ರಾಜ್ಯ ಸರಕಾರ ಮುಂದಾಗಿದೆ. ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ಈ ಯೋಜನೆ ರೂಪಿಸಲಾಗಿದೆ.

ಈ ಯೋಜನೆಯ ಭಾಗವಾಗಲು ಖಾಸಗಿ ಹೂಡಿಕೆದಾರರಿಗೂ ರಾಜ್ಯ ಸರಕಾರ ಆಹ್ವಾನ ಮಾಡಿದೆ.

ಇತ್ತೀಚೆಗೆ ಗುಜರಾತ್‌ನಲ್ಲಿ ನಿರ್ಮಾಣಗೊಂಡ ಸರ್ದಾರ್‌ ಪಟೇಲ್‌ ಪ್ರತಿಮೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದರು. ನಂತರ ಅಯೋಧ್ಯೆಯಲ್ಲಿ ರಾಮನ ಪ್ರತಿಮೆ ನಿರ್ಮಾಣ ಮಾಡುವುದಾಗಿ ಉತ್ತರ ಪ್ರದೇಶ ಸರಕಾರ ಘೋಷಿಸಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ