ಆ್ಯಪ್ನಗರ

ಕೊಕ್ಕರೆ ಬೆಳ್ಳೂರಿಗೆ ನೂತನ ಡಿಸಿಎಫ್‌ ಭೇಟಿ, ಪರಿಶೀಲನೆ

ಭಾರತೀನಗರ: ಪೆಲಿಕಾನ್‌ ಕೊಕ್ಕರೆಗಳ ಸರಣಿ ಸಾವಿನ ಹಿನ್ನೆಲೆಯಲ್ಲಿ ಪಕ್ಷಿ ಕೇಂದ್ರವಾದ ಮದ್ದೂರು ತಾಲೂಕು ಕೊಕ್ಕರೆ ಬೆಳ್ಳೂರಿಗೆ ನೂತನವಾಗಿ ಅಧಿಕಾರ ವಹಿಸಿಕೊಂಡಿರುವ ಅರಣ್ಯ(ವನ್ಯಜೀವಿ) ಇಲಾಖೆಯ ಡಿಸಿಎಫ್‌(ವಿಭಾಗೀಯ ಅರಣ್ಯ ಸಂರಕ್ಷ ಣಾಧಿಕಾರಿ) ಸಿದ್ದರಾಮಪ್ಪ ಅವರು ಭೇಟಿ ನೀಡಿ ಪರಿಶೀಲಿಸಿದರು.

Vijaya Karnataka 13 Jul 2018, 5:00 am
ಭಾರತೀನಗರ: ಪೆಲಿಕಾನ್‌ ಕೊಕ್ಕರೆಗಳ ಸರಣಿ ಸಾವಿನ ಹಿನ್ನೆಲೆಯಲ್ಲಿ ಪಕ್ಷಿ ಕೇಂದ್ರವಾದ ಮದ್ದೂರು ತಾಲೂಕು ಕೊಕ್ಕರೆ ಬೆಳ್ಳೂರಿಗೆ ನೂತನವಾಗಿ ಅಧಿಕಾರ ವಹಿಸಿಕೊಂಡಿರುವ ಅರಣ್ಯ(ವನ್ಯಜೀವಿ) ಇಲಾಖೆಯ ಡಿಸಿಎಫ್‌(ವಿಭಾಗೀಯ ಅರಣ್ಯ ಸಂರಕ್ಷ ಣಾಧಿಕಾರಿ) ಸಿದ್ದರಾಮಪ್ಪ ಅವರು ಭೇಟಿ ನೀಡಿ ಪರಿಶೀಲಿಸಿದರು.
Vijaya Karnataka Web kokkare bellur is the new dcf visitor and inspection
ಕೊಕ್ಕರೆ ಬೆಳ್ಳೂರಿಗೆ ನೂತನ ಡಿಸಿಎಫ್‌ ಭೇಟಿ, ಪರಿಶೀಲನೆ


ಪೆಲಿಕಾನ್‌ ಕೊಕ್ಕರೆಗಳ ಸಾವಿನ ಕುರಿತಂತೆ ಕೊಯಮ್ತೂರಿನ ಸೆಕಾನ್‌(ಸಲೀಂ ಅಲಿ ಸೆಂಟರ್‌ ಫಾರ್‌ ಆರ್ನಿಥಾಲಜಿ ಮತ್ತು ನ್ಯಾಚುರಲ್‌ ಹಿಸ್ಟರಿ) ವಿಜ್ಞಾನಿಗಳು ನೀಡಿರುವ ವರದಿ ಹಿನ್ನೆಲೆಯನ್ನು ಪರಿಗಣನೆಗೆ ತೆಗೆದುಕೊಂಡು ಸೂಕ್ತ ಕ್ರಮ ಕೈಗೊಳ್ಳುವ ಸಲುವಾಗಿ ಅವರು ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿದರು.

ಈ ಸಂದರ್ಭ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ವಿಜ್ಞಾನಿಗಳು ಈಗಾಗಲೇ ವರದಿ ನೀಡಿದ್ದಾರೆ. ಈ ವರಿದಿಯನ್ನು ಈ ಮೊದಲು ಇಲ್ಲಿಗೆ ಭೇಟಿ ನೀಡಿ ಸಮಾಲೋಚನೆ ಮಾಡಿದ್ದ ದೇಶದ ನಾನಾ ವಿಜ್ಞಾನಿಗಳ ತಂಡದೊಂದಿಗೆ ವರದಿ ಕುರಿತು ಪ್ರಸ್ತಾಪ ಮಾಡಿ ಅವರು ನೀಡುವ ಸಲಹೆಗನುಸಾರವಾಗಿ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.

ಎಲ್ಲಾ ಕೆರೆಗಳ ನೀರಿನ ಮಾದರಿಗಳಲ್ಲೂ ಪರಾವಲಂಬಿ ಹುಳುಗಳಿರುವುದು ಸಾಬೀತುಪಡಿಸಲಾಗಿರುವುದರಿಂದ ಅವುಗಳನ್ನು ತೊಡೆದು ಹಾಕುವುದೇ ಸವಾಲಿನ ಕೆಲಸವಾಗಿದೆ. ಅಲ್ಲದೆ ಎಲ್ಲಾ ಕೆರೆಗಳು ಕೂಡ ದೊಡ್ಡ ಕೆರೆಗಳಾಗಿದ್ದು, ಶಿಂಷಾ ನದಿಯಲ್ಲಿ ಯಥೇಚ್ಚ ಪ್ರಮಾಣದ ನೀರು ಇರುವುದರಿಂದ ಅಲ್ಲಿ ಯಾವ ಕ್ರಮ ಕೈಗೊಳ್ಳಬೇಕು, ಇದಲ್ಲದೆ ಕೆರೆಗಳು ಹಾಗೂ ನದಿಗಳಲ್ಲಿರುವ ಪೆಲಿಕಾನ್‌ನ ಆಹಾರವಾಗಿರುವ ಮೀನುಗಳನ್ನು ಹಿಡಿದು ಔಷಧ ಹಾಕಲು ಸಾಧ್ಯವಾಗುವುದಿಲ್ಲ.

ಇವೆಲ್ಲಾ ಒಂದು ರೀತಿಯಲ್ಲಿ ಸವಾಲೇ ಹಾಗಿದೆ. ಹಾಗಾಗಿ ಸಂಬಂಧಿಸಿದ(ಈಗಾಗಲೇ ಭೇಟಿ ನೀಡಿದ್ದ) ವಿಜ್ಞಾನಿಗಳೊಂದಿಗೆ ಚರ್ಚಿಸಿ ನಂತರ ಕ್ರಮ ಕೈಗೊಳ್ಳಲಾಗುವುದು. ಅಕ್ಟೋಬರ್‌, ನವೆಂಬರ್‌ ತಿಂಗಳಿನಲ್ಲಿ ಪೆಲಿಕಾನ್‌ಗಳು ಬರುವುದರಲ್ಲಿದ್ದು ಅಷ್ಟರೊಳಗೆ ಕ್ರಮ ತೆಗೆದುಕೊಂಡು ಮುಂದೆ ಪೆಲಿಕಾನ್‌ಗಳ ಸಾವು ಸಂಭವಿಸದಂತೆ ಎಚ್ಚರಿಕೆ ವಹಿಸಲಾಗುವುದು ಎಂದು ಭರವಸೆ ನೀಡಿದರು.

ಇದರ ಜತೆಗೆ ಕೊಕ್ಕರೆ ಬೆಳ್ಳೂರನ್ನು ಉತ್ತಮ ಪ್ರವಾಸಿ ಕೇಂದ್ರವಾಗಿ ರೂಪಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಪಕ್ಷಿ ಕೇಂದ್ರ ಕುರಿತಂತೆ ಮಾಹಿತಿ ಫಲಕಗಳು, ಗೋಡೆ ಬರವಣಿಗೆಗಳನ್ನು ಬರೆಸುವುದರ ಜತೆಗೆ ಮಾಹಿತಿ ಕೇಂದ್ರವನ್ನು ತೆರೆಯಲು ಚಿಂತನೆ ನಡೆಸಲಾಗಿದೆ. ಇದಲ್ಲದೆ ಪ್ರವಾಸಿಗರೂ ಸೇರಿದಂತೆ ಗ್ರಾಮಸ್ಥರು ಬಿಡುವಿನ ವೇಳೆಯಲ್ಲಿ ಒಂದೆಡೆ ಕುಳಿತು ಸಮಯ ಕಳೆಯಲು ಅಗತ್ಯವಾದ ಟೂರಿಸಂ ಪಾರ್ಕ್‌ ನಿಮಾಣ ಮಾಡಲು ಕೂಡ ಯೋಜನೆ ರೂಪಿಸಲಾಗುತ್ತಿದೆ. ಅದಕ್ಕೆ ಅಗತ್ಯವಿರುವ ಸ್ಥಳವನ್ನು ಗ್ರಾಮ ಪಂಚಾಯಿತಿಯವರು ಒದಗಿಸಲು ಮುಂದಾಗಬೇಕೆಂದು ಮನವಿ ಮಾಡಲಾಗುವುದು ಎಂದು ವಿವರಿಸಿದರು.

ವಲಯ ಅರಣ್ಯಾಧಿಕಾರಿ ರಾಜೇಶ್ವರಿ, ಉಪ ವಲಯ ಅರಣ್ಯಾಧಿಕಾರಿ ಮುರುಳಿನಾಯ್ಕ್‌, ಅರಣ್ಯ ರಕ್ಷ ಕ ಅಯ್ಯಪ್ಪ, ಬರ್ಡ್‌ ವಾಚರ್‌ ಲೋಕೇಶ್‌, ಹೆಜ್ಜಾರ್ಲೆ ಬಳಗದ ಬಿ.ಲಿಂಗೇಗೌಡ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ