ಆ್ಯಪ್ನಗರ

ಕೆ.ಆರ್‌.ಪೇಟೆ-ಕೆ.ಆರ್‌.ನಗರ-ಭೇರ್ಯ ಮುಖ್ಯರಸ್ತೆ ಮುಳುಗಡೆ

ತಾಲೂಕಿನಲ್ಲಿ ಹೇಮಾವತಿ ನದಿ ನೀರಿನ ಪ್ರವಾಹದಿಂದಾಗಿ ಅಕ್ಕಿಹೆಬ್ಬಾಳು ಸೇತುವೆಯ ಮೇಲೆ ಹಾಕಲಾಗಿದ್ದ ವಿದ್ಯುತ್‌ ಕಂಬಗಳು ಬುಡ ಸಮೇತ ಉರುಳಿ ಬಿದ್ದ ಪರಿಣಾಮ ಸಂಚಾರ ಬಂದ್‌ ಆಗಿತ್ತು. ಹೇಮಗಿರಿ ಬಳಿ ಇರುವ ಮೀನುಗಾರರ ಗುಡಿಸಲುಗಳಿಗೆ ನೀರು ನುಗ್ಗಿದ್ದರಿಂದ ಗುಡಿಸಲುಗಳು ನಾಶವಾಗಿವೆ. ಅಕ್ಕಿಹೆಬ್ಬಾಳು ಹೋಬಳಿಯ ಚಿಕ್ಕಮಂದಗೆರೆ ಗ್ರಾಮದ ಹಲವಾರು ಮನೆಗಳಿಗೆ ನೀರು ನುಗ್ಗಿ ದಿನಬಳಕೆಯ ವಸ್ತುಗಳು ನಾಶವಾಗಿವೆ.

Vijaya Karnataka 12 Aug 2019, 5:00 am
ಕೆ.ಆರ್‌.ಪೇಟೆ : ತಾಲೂಕಿನಲ್ಲಿ ಹೇಮಾವತಿ ನದಿ ನೀರಿನ ಪ್ರವಾಹದಿಂದಾಗಿ ಅಕ್ಕಿಹೆಬ್ಬಾಳು ಸೇತುವೆಯ ಮೇಲೆ ಹಾಕಲಾಗಿದ್ದ ವಿದ್ಯುತ್‌ ಕಂಬಗಳು ಬುಡ ಸಮೇತ ಉರುಳಿ ಬಿದ್ದ ಪರಿಣಾಮ ಸಂಚಾರ ಬಂದ್‌ ಆಗಿತ್ತು.
Vijaya Karnataka Web MDY-MDY11AUGKRP21


ಹೇಮಗಿರಿ ಬಳಿ ಇರುವ ಮೀನುಗಾರರ ಗುಡಿಸಲುಗಳಿಗೆ ನೀರು ನುಗ್ಗಿದ್ದರಿಂದ ಗುಡಿಸಲುಗಳು ನಾಶವಾಗಿವೆ. ಅಕ್ಕಿಹೆಬ್ಬಾಳು ಹೋಬಳಿಯ ಚಿಕ್ಕಮಂದಗೆರೆ ಗ್ರಾಮದ ಹಲವಾರು ಮನೆಗಳಿಗೆ ನೀರು ನುಗ್ಗಿ ದಿನಬಳಕೆಯ ವಸ್ತುಗಳು ನಾಶವಾಗಿವೆ.

ಇತಿಹಾಸದಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದ ನೀರು ಹೇಮಾವತಿ ನದಿಯಲ್ಲಿ ಹರಿದು ಬರುತ್ತಿರುವ ಕಾರಣ ತಾಲೂಕಿನ ಸುಮಾರು 20ಕ್ಕೂ ಹೆಚ್ಚು ಗ್ರಾಮಗಳ ನೂರಾರು ಎಕರೆ ಜಮೀನಿನಲ್ಲಿ ಬೆಳೆದಿದ್ದ ವಿವಿಧ ಬೆಳೆಗಳು ಕಳೆದ ಎರಡು ದಿನಗಳಿಂದ ನೀರಿನಿಂದ ಆವೃತಗೊಂಡಿದ್ದು ಕೊಳೆಯಲಾರಂಭಿಸಿವೆ.

ಕಬ್ಬಲಗೆರೆಪುರ, ಬಸ್ತಿಹೊಸಕೋಟೆ, ಬಲ್ಲೇನಹಳ್ಳಿ, ಯರಗನಹಳ್ಳಿ, ಕಾಶಿಮುರುಕನಹಳ್ಳಿ, ಕಟ್ಟಹಳ್ಳಿ, ಕಟ್ಟೆಕ್ಯಾತನಹಳ್ಳಿ, ಸೋಮನಾಥಪುರ, ಬಸವನಹಳ್ಳಿ ಮತ್ತಿತರರ ಗ್ರಾಮಗಳ ರೈತರು ಕೆ.ಆರ್‌.ಎಸ್‌. ಹಿನ್ನೀರಿನ ಸಾವಿರಾರು ಎಕರೆ ಭೂಪ್ರದೇಶದಲ್ಲಿ ಕಡೆಲೆಕಾಯಿ, ಸೂರ್ಯಕಾಂತಿ, ಸೇವಂತಿಗೆ ಹೂವಿನ ಬೆಳೆಗಳು, ಸೌತೆಕಾಯಿ ಮತ್ತಿತರರ ಬೆಳೆಗಳನ್ನು ಬೆಳೆದಿದ್ದರು. ಎಲ್ಲವೂ ಒಂದೆರಡು ತಿಂಗಳಲ್ಲಿ ಕಟಾವಿಗೆ ಬರಲಿದ್ದವು. ಈಗ ಹೇಮಾವತಿ ಮತ್ತು ಕೆ.ಆರ್‌.ಎಸ್‌. ನೀರಿನಲ್ಲಿ ಮುಳುಗಿದ್ದು ಬೆಳೆಗಳು ಸರ್ವನಾಶಗೊಂಡಿವೆ. ಇದರಿಂದ ರೈತರಿಗೆ ಕೋಟ್ಯಂತರ ರೂ. ನಷ್ಟವಾಗಿದೆ ಎಂದು ಅಂದಾಜು ಮಾಡಲಾಗಿದೆ.

ಕೆ.ಆರ್‌.ಪೇಟೆ-ಕೆ.ಆರ್‌.ನಗರ-ಭೇರ್ಯ ಮುಖ್ಯರಸ್ತೆಯಲ್ಲಿರುವ ಅಕ್ಕಿಹೆಬ್ಬಾಳು ಸೇತುವೆಯು ಸಂಪೂರ್ಣ ಮುಳುಗಡೆಯಾಗಿದ್ದು, ಅಪಾಯದ ಭೀತಿ ಎದುರಾಗಿದೆ. ಸೇತುವೆಯ ಮೇಲೆ ಹಾಕಲಾಗಿದ್ದು ವಿದ್ಯುತ್‌ ಕಂಬಗಳು ನೀರಿನ ರಭಸಕ್ಕೆ ಸಿಲುಕಿ ಬುಡಸಮೇತ ಬಿದ್ದು ಹೋಗಿವೆ. ಇದರಿಂದ ಅಕ್ಕಿಹೆಬ್ಬಾಳು ಹೋಬಳಿ ಹಾಗೂ ಹರಿಹರಪುರ, ಮಡುವಿನಕೋಡಿ ಭಾಗದ ಹತ್ತಾರು ಹಳ್ಳಿಗಳಿಗೆ ವಿದ್ಯುತ್‌ ಸಂಪರ್ಕ ಕಡಿತಗೊಂಡಿದೆ.

ಅಕ್ಕಿಹೆಬ್ಬಾಳು ಹೋಬಳಿಯ ಮಂದಗೆರೆ ಗ್ರಾಮದ ಬಳಿ ಹೇಮಾವತಿ ನದಿಗೆ ಅಡ್ಡಲಾಗಿ ಕಟ್ಟಿರುವ ಸಂಪರ್ಕ ಸೇತುವೆಯು ಮುಳುಗಿ, ಸೇತುವೆಯ ಮೇಲೆ ನದಿಯ ನೀರು ಉಕ್ಕಿ ಹರಿಯುತ್ತಿದೆ. ಮೂರ್ನಾಲ್ಕು ಭಾಗಗಳಲ್ಲಿ ಬಿರುಕು ಬಿಟ್ಟಿರುವ ಕಾರಣ ಹೊಳೆನರಸೀಪುರ ಮತ್ತು ಕೆ.ಆರ್‌.ಪೇಟೆ ಪಟ್ಟಣಗಳಿಗೆ ಸಂಪರ್ಕ ಸಂಪೂರ್ಣ ಬಂದ್‌ ಆಗಿದ್ದು ಪ್ರಯಾಣಿಕರಿಗೆ ಓಡಾಡಲು ತೀವ್ರ ಅನನುಕೂಲ ಉಂಟಾಗಿದೆ.

ಹೇಮಗಿರಿ ಬಳಿ ಹೇಮಾವತಿ ನದಿಯು ರಂಗನಾಥಸ್ವಾಮಿ ಬೆಟ್ಟದ ಪಾದದ ಬಳಿಗೆ ಬಂದಿದ್ದು, ಬಂಡಿಹೊಳೆ, ಕೆ.ಆರ್‌.ಪೇಟೆ ಮುಖ್ಯ ರಸ್ತೆ ಬಂದ್‌ ಆಗಿದೆ. ಪರಾರ‍ಯಯವಾಗಿ ಆದಿಚುಂಚನಗಿರಿ ಶಿಕ್ಷ ಣ ಸಂಸ್ಥೆಯ ಮಾರ್ಗವಾಗಿ ಹೋಗಲು ಅವಕಾಶ ಕಲ್ಪಿಸಲಾಗಿದೆ. ಹೇಮಗಿರಿ ಬಳಿ ನದಿ ದಡದಲ್ಲಿ ಗುಡಿಸಲು ಕಟ್ಟಿಕೊಂಡು ವಾಸವಿದ್ದ ಸುಮಾರು 20ಕುಟುಂಬಗಳನ್ನು ಮುಂಜಾಗ್ರತಾ ಕ್ರಮವಾಗಿ ಹೇಮಗಿರಿ ಕಲ್ಯಾಣ ವೆಂಕಟರಮಣಸ್ವಾಮಿ ಸಮುದಾಯ ಭವನಕ್ಕೆ ಸ್ಥಳಾಂತರ ಮಾಡಲಾಗಿದೆ. ಆದರೆ, ಗುಡಿಸಲಿನಲ್ಲಿದ್ದ ಅಗತ್ಯ ವಸ್ತುಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ. ಕೆ.ಆರ್‌.ಪೇಟೆ ಪಟ್ಟಣಕ್ಕೆ ಕುಡಿಯುವ ನೀರು ಪೂರೈಕೆ ಮಾಡುವ ಐದು ಪಂಪ್‌ಹೌಸ್‌ಗಳು ಸಂಪೂರ್ಣ ಜಲಾವೃತಗೊಂಡಿದ್ದು, ಪಟ್ಟಣಕ್ಕೆ ನೀರು ಪೂರೈಕೆ ಬಂದ್‌ ಆಗಿದೆ. ನೀರು ತುಂಬಿಕೊಂಡಿರುವ ಕಾರಣ ಪಂಪ್‌ಸೆಟ್‌ಗಳು ಕೆಟ್ಟು ಹೋಗಿವೆ ರಿಪೇರಿಗೆ ಸುಮಾರು ಕನಿಷ್ಠ ಒಂದು ವಾರಗಳ ಬೇಕಾಗುತ್ತದೆ. ಅಲ್ಲಿಯವರೆಗೆ ಪಟ್ಟಣದ ಜನತೆ ನೀರಿಗಾಗಿ ಪರಿತಪಿಸಬೇಕಾಗುತ್ತದೆ. ಆದ್ದರಿಂದ ಪುರಸಭೆಯ ಅಧಿಕಾರಿಗಳು ಪಟ್ಟಣಕ್ಕೆ ನೀರು ಪೂರೈಕೆ ಮಾಡಲು ಪರಾರ‍ಯಯ ವ್ಯವಸ್ಥೆ ಕಲ್ಪಿಸುವ ಮೂಲಕ ಪಟ್ಟಣದ ಜನತೆಗೆ ಅನುಕೂಲ ಮಾಡಿಕೊಡಬೇಕಾಗಿದೆ.

ನೀರಿನಲ್ಲಿ ಮುಳುಗಿನ ಜಲವಿದ್ಯುತ್‌ ಘಟಕ: ಹೇಮಾವತಿ ನದಿಯಲ್ಲಿ ಸುಮಾರು 1ಲಕ್ಷ ಕ್ಯೂಸೆಕ್‌ಗೂ ಹೆಚ್ಚು ನೀರು ಹರಿದು ಬರುತ್ತಿರುವ ಕಾರಣ ಅಕ್ಕಿಹೆಬ್ಬಾಳು ಬಳಿಯ ಕಾವೇರಿ ವಿದ್ಯುತ್‌ ಉತ್ಪಾದಕ ಘಟಕಕ್ಕೆ ನೀರು ತುಂಬಿಕೊಂಡಿದ್ದು ವಿದ್ಯುತ್‌ ಉತ್ಪಾದನೆ ಸ್ಥಗಿತಗೊಂಡಿದೆ. ಲಕ್ಷಾಂತರ ರೂ. ಮೌಲ್ಯದ ಉಪಕರಣಗಳು ಜಲಾವೃತಗೊಂಡಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ