ಆ್ಯಪ್ನಗರ

ಹರಿರಾಯನಹಳ್ಳಿಯಲ್ಲಿ ಧೂಳೆಬ್ಬಿಸಿದ ಬೈಕ್‌ ರೇಸ್‌

ವಿಕ ಸುದ್ದಿಲೋಕ ಕೆಆರ್‌...

Vijaya Karnataka 20 Feb 2019, 5:00 am
ಕೆ.ಆರ್‌. ಪೇಟೆ: ತಾಲೂಕಿನ ಅಗ್ರಹಾರಬಾಚಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಹರಿರಾಯನಹಳ್ಳಿ ಬಳಿ ತಾಲೂಕು ಕುವೆಂಪು ಗೆಳೆಯರ ಬಳಗ ಸೇವಾ ಟ್ರಸ್ಟ್‌ ಮತ್ತು ಫ್ರೆಂಡ್ಸ್‌ ಬಾಯ್ಸ್‌ ಚಾಲೆಂಜರ್ಸ್‌ ಯುವಕ ಸಂಘ ಆಯೋಜಿಸಿದ್ದ ಅಂತರ್‌ ರಾಜ್ಯ ಮಟ್ಟದ ಮೋಟಾರ್‌ ಬೈಕ್‌ ರೇಸ್‌ ನೋಡುಗರಿಗೆ ವಿಶೇಷ ಅನುಭವ ನೀಡಿತು.
Vijaya Karnataka Web kr pete taluk byke race attract people
ಹರಿರಾಯನಹಳ್ಳಿಯಲ್ಲಿ ಧೂಳೆಬ್ಬಿಸಿದ ಬೈಕ್‌ ರೇಸ್‌


ಕಿವಿಗಡಚ್ಚುವ ಶಬ್ಧದೊಂದಿಗೆ ಶರವೇಗದಲ್ಲಿ ಬೈಕ್‌ಗಳನ್ನು ಸವಾರರು ಧೂಳೆಬ್ಬಿಸಿಕೊಂಡು ಮುನ್ನುಗುತ್ತಿದ್ದರೆ, ವೀಕ್ಷಕರು ಶಿಳ್ಳೆ ಹೊಡೆದು, ಚಪ್ಪಾಳೆ ತಟ್ಟಿ ಪ್ರೋತ್ಸಾಹ ನೀಡಿದರು. ತಮಿಳುನಾಡು, ಕೇರಳ ಸೇರಿದಂತೆ ರಾಜ್ಯದ ಮೂಲೆ ಮೂಲೆಗಳಿಂದ ಮುನ್ನೂರಕ್ಕೂ ಹೆಚ್ಚು ಸ್ಪರ್ಧಿಗಳು ಹತ್ತು ಎಕರೆ ಭೂಮಿಯಲ್ಲಿ ನಿರ್ಮಾಣ ಮಾಡಿದ್ದ ಕಡಿದಾದ ತಿರುವು ರಸ್ತೆಯಲ್ಲಿ ವೇಗವಾಗಿ ನುಗ್ಗುತ್ತಾ ಪ್ರದರ್ಶಿಸಿದ ದೃಶ್ಯ ನೋಡುಗರ ಮೈನವೀರೆಳಿಸಿತು.

50 ಸಿಸಿ, 100 ಸಿಸಿ ಮತ್ತು 200 ಸಿಸಿ ಹೀಗೆ ಮೂರು ಹಂತದಲ್ಲಿ ಸ್ಪರ್ಧೆಯಲ್ಲಿ ನಡೆಯಿತು. ಟಿವಿಎಸ್‌ 50 ಸ್ಕೂಟರ್‌ ಒಂದೇ ಚಕ್ರದಲ್ಲಿ ವ್ಹಿಲೀಂಗ್‌ ಮಾಡಿಕೊಂಡು ಓಡಿಸುವುದರ ಜತೆಗೆ ವಿಶೇಷ ಶಬ್ಧ ಬರುವಂತೆ ಸಿದ್ಧಪಡಿಸಿಕೊಂಡು ಶರವೇಗದಲ್ಲಿ ಚಲಾಯಿಸಿದ ದೃಶ್ಯ ಗಮನ ಸೆಳೆಯಿತು. ತಾಲೂಕಿನ ನಾನಾ ಭಾಗಗಳಿಂದ ಮಹಿಳೆಯರೂ ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಜನ ಈ ರೋಮಾಂಚನ ದೃಶ್ಯವನ್ನು ಕಣ್ತುಂಬಿಕೊಂಡರು.

ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಬಿ. ಈಶ್ವರಪ್ರಸಾದ್‌ ಮೋಟಾರ್‌ ರೇಸ್‌ ಚಾಲನೆ ನೀಡಿ ಮಾತನಾಡಿದರು. ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಕೆ.ಆರ್‌.ರವೀಂದ್ರಬಾಬು, ತಾಲೂಕು ಕುವೆಂಪು ಗೆಳೆಯರ ಬಳಗ ಸೇವಾ ಟ್ರಸ್ಟ್‌ ಅಧ್ಯಕ್ಷ ಮಿಲ್‌ ಮಂಜು, ಜಾಲಿ ಬಾಯ್ಸ್‌ ಕ್ರೀಡಾ ಬಳಗದ ಅಧ್ಯಕ್ಷ ಕೆ.ಬಿ. ವಿವೇಕ್‌, ಪುರಸಭಾ ಸದಸ್ಯ ಕೆ.ಟಿ. ಚಕ್ರಪಾಣಿ, ಕೆ.ಬಿ. ನಂದೀಶ್‌, ನವೀದ್‌ ಅಹಮದ್‌, ಪ್ರೇಮ್‌ ಇತರರು ಇದ್ದರು.

ಇಮ್ರಾನ್‌ಗೆ ಪ್ರಥಮ ಬಹುಮಾನ: ಮೈಸೂರಿನ ಇಮ್ರಾನ್‌ ಮೋಟಾರ್‌ ಬೈಕ್‌ ರೇಸ್‌ನಲ್ಲಿ ಪ್ರಥಮ ಬಹುಮಾನ ಪಡೆದರು. ತಾಲೂಕು ಜಾಲಿ ಬಾಯ್ಸ್‌ ಕ್ರೀಡಾ ಬಳಗದ ಅಧ್ಯಕ್ಷ ಕೆ.ಬಿ.ವಿವೇಕ್‌ ಮತ್ತು ತಾಲೂಕು ಕುವೆಂಪು ಗೆಳೆಯರ ಬಳಗ ಸೇವಾ ಟ್ರಸ್ಟ್‌ ಅಧ್ಯಕ್ಷ ಮಿಲ್‌ ಮಂಜು ಬಹುಮಾನ ವಿತರಣೆ ಮಾಡಿದರು. ಮುಂಜಾಗೃತಾ ಕ್ರಮವಾಗಿ ಅಗ್ನಿಶಾಮಕ ದಳ ಮತ್ತು ಆರೋಗ್ಯ ಇಲಾಖೆಯಿಂದ ತುರ್ತು ಚಿಕಿತ್ಸಾ ವಾಹನಗಳ ವ್ಯವಸ್ಥೆ ಮಾಡಲಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ