ಆ್ಯಪ್ನಗರ

ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ

ಅಂಗನವಾಡಿ ಕಾರ‌್ಯಕರ್ತೆಯರು ಕೇವಲ ಅಂಗನವಾಡಿಗಳಲ್ಲಿ ಮಕ್ಕಳನ್ನು ಮಲಗಿಸಿ ಕಳುಹಿಸುವುದಷ್ಟೇ ಅಲ್ಲದೆ, ಅವರನ್ನು ಜವಾಬ್ದಾರಿಯಿಂದ ನೋಡಿಕೊಳ್ಳಬೇಕು ಎಂದು ಶಾಸಕ ಡಿ.ಸಿ.ತಮ್ಮಣ್ಣ ಸಲಹೆ ನೀಡಿದರು.

Vijaya Karnataka 11 Sep 2017, 5:15 am
ಭಾರತೀನಗರ: ಅಂಗನವಾಡಿ ಕಾರ‌್ಯಕರ್ತೆಯರು ಕೇವಲ ಅಂಗನವಾಡಿಗಳಲ್ಲಿ ಮಕ್ಕಳನ್ನು ಮಲಗಿಸಿ ಕಳುಹಿಸುವುದಷ್ಟೇ ಅಲ್ಲದೆ, ಅವರನ್ನು ಜವಾಬ್ದಾರಿಯಿಂದ ನೋಡಿಕೊಳ್ಳಬೇಕು ಎಂದು ಶಾಸಕ ಡಿ.ಸಿ.ತಮ್ಮಣ್ಣ ಸಲಹೆ ನೀಡಿದರು.
Vijaya Karnataka Web land pump for anganwadi building
ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ


ಸಮೀಪದ ಬೊಪ್ಪಸಮುದ್ರ ಗ್ರಾಮದಲ್ಲಿ ನೂತನ ಅಂಗನವಾಡಿ ಕಟ್ಟಡಕ್ಕೆ ಗುದ್ದಲಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಮಕ್ಕಳ ಮನಸ್ಸು ಬಹಳ ಸೂಕ್ಷ್ಮ. ಅವರ ಮನಸ್ಸಿನಲ್ಲಿ ಯಾವ ರೀತಿ ಬದಲಾವಣೆ ತರಬೇಕೆಂಬ ದೃಷ್ಟಿ ಇಟ್ಟುಕೊಂಡು ಪಾಠ ಮಾಡಬೇಕು. ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿ ವಿದ್ಯಾಭ್ಯಾಸ ನೀಡುವ ಅಂಗನವಾಡಿ ಕೇಂದ್ರ ದೇವಸ್ಥಾನವಿದ್ದಂತೆ ಎಂದರು.

ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಚಿಕ್ಕ ಮಕ್ಕಳಿಗೆ ಲಾಲನೆ, ಪಾಲನೆ, ಪೋಷಣೆ ಅಂಗನವಾಡಿ ಕೇಂದ್ರದಲ್ಲಿ ಅತಿಮುಖ್ಯವಾಗಿದೆ. ಆದ್ದರಿಂದ ಮಕ್ಕಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು.

ಇದೇ ವೇಳೆ ಸಿಡಿಪಿಒ ಚೇತನ್‌ಕುಮಾರ್, ಮುಖಂಡರಾದ ಮಾಜಿ ನಿರ್ದೇಶಕ ಲಿಂಗಯ್ಯ, ಗ್ರಾ.ಪಂ ಸದಸ್ಯೆ ಸುಶೀಲಶಂಭು, ಮಾಜಿ ಅಧ್ಯಕ್ಷ ರಾಜಪ್ಪ, ಮುಖಂಡರಾದ ಎಂ.ಕೆ.ರಾಜಣ್ಣ, ಮರಿಮಾದೇಗೌಡ, ಚಿಕ್ಕಹೈದೇಗೌಡ, ಬಿ.ಎಂ.ಪ್ರಕಾಶ್, ಬಿ.ಕೆ.ಶಂಕರೇಗೌಡ, ಬಿ.ಕೆ.ಪುಟ್ಟಸ್ವಾಮಿ, ತಾ.ಪಂ ಮಾಜಿ ಸದಸ್ಯ ತಮ್ಮಯ್ಯ, ಭೀಮಣ್ಣ, ಗುತ್ತಿಗೆದಾರ್ ಮುಡೀನಹಳ್ಳಿ ತಿಮ್ಮಯ್ಯ ಮತ್ತಿತರರು ಹಾಜರಿದ್ದರು.

ಗುದ್ದಲಿ ಪೂಜೆ: ಸೋಮೇಶ್ವರ ದೇವಾಲಯದ ಜೀರ್ಣೋದ್ಧಾರ ಕಾರ‌್ಯಕ್ಕೆ ಶಾಸಕ ಡಿ.ಸಿ.ತಮ್ಮಣ್ಣ ಗುದ್ದಲಿಪೂಜೆ ನೆರವೇರಿಸಿದರು.

ನಂತರ ಮಾತನಾಡಿದ ಅವರು, ಪೂಜಿಸಲ್ಪಡುತ್ತಿದ್ದ ಅರಳಿಕಟ್ಟೆಗಳು ಇಂದು ರಾಜಕೀಯ ಕಟ್ಟೆಗಳಾಗಿವೆ. ಜನಗಳು ಸೋಮಾರಿಗಳಾಗುತ್ತಿದ್ದಾರೆ. ದೈವಭಕ್ತಿ ಕಡಿಮೆಯಾಗುತ್ತಿದೆ. ದೇವಸ್ಥಾನಗಳ ಅಭಿವೃದ್ಧಿಯಿಂದ ಜನರಲ್ಲಿ ದೈವಭಕ್ತಿ ಮೂಡುತ್ತದೆ. ಇದರಿಂದ ದೇವಸ್ಥಾನಗಳನ್ನು ಅಭಿವೃದ್ಧಿ ಪಡಿಸಲು ಮುಜುರಾಯಿ ಇಲಾಖೆಯಿಂದ ಹಣ ಬಿಡುಗಡೆಗೊಳ್ಳುತ್ತಿದೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ