ಆ್ಯಪ್ನಗರ

ಮಂಡ್ಯದಲ್ಲಿ ವಕೀಲ ರವೀಂದ್ರ ಕೊಲೆ, ಬಾಲಕ ಸೇರಿದಂತೆ 6 ಮಂದಿ ಬಂಧನ!

ಮದ್ದೂರು ತಾಲೂಕು ಕೆಸ್ತೂರು ಪೊಲೀಸ್‌ ಠಾಣೆ ವ್ಯಾಪ್ತಿಯ ನವಿಲೆ ಗ್ರಾಮದ ವಕೀಲ ರವೀಂದ್ರ (50)ರವರ ಕೊಲೆಯಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ಬಾಲಕ ಸೇರಿದಂತೆ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

Vijaya Karnataka Web 7 Jan 2021, 7:59 am
ಮಂಡ್ಯ: ಮದ್ದೂರು ತಾಲೂಕು ನವಿಲೆ ಗ್ರಾಮದ ವಕೀಲ ಕೆ.ರವೀಂದ್ರ ಅವರ ಕೊಲೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಒಬ್ಬ ಬಾಲಕ ಸೇರಿದಂತೆ ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
Vijaya Karnataka Web ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ


ನವಿಲೆ ಗ್ರಾಮದ ಎನ್‌.ಟಿ.ರಂಗಸ್ವಾಮಿ (33), ಸಂತೋಷ್‌ ಅಲಿಯಾಸ್‌ ಶಾಂತರಾಜು (32), ರಂಗಸ್ವಾಮಿ(35), ಹರಕನಹಳ್ಳಿ ನಿವಾಸಿಗಳಾದ ಅಭಿರಾಜ(18), ನಾಗರಾಜು(20) ಹಾಗೂ ಒಬ್ಬ 17 ವರ್ಷದ ಬಾಲಕನನ್ನು ಬಂಧಿಸಲಾಗಿದೆ.

ಆರೋಪಿಗಳು ಜ.2ರಂದು ರವೀಂದ್ರ ಅವರನ್ನು ನವಿಲೆ ಗ್ರಾಮದ ಅವರ ಜಮೀನಿನ ಬಳಿಯಿರುವ ಶಿಂಷಾ ನದಿ ಬಳಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಈ ಬಗ್ಗೆ ರವೀಂದ್ರ ಪತ್ನಿ ಅಂಬುಜಾಕ್ಷಿ ನೀಡಿದ ದೂರಿನ ಮೇರೆಗೆ ಕೆಸ್ತೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಜಮೀನಿಗೆ ತೆರಳಿದ್ದ ವಕೀಲ ಶಿಂಷಾ ನದಿಯಲ್ಲಿ ಶವವಾಗಿ ಪತ್ತೆ: 8 ಮಂದಿ ವಿರುದ್ಧ ಕೊಲೆ ಆರೋಪ

ಘಟನೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಪ್ರತಿಭಟನೆಗಳು ನಡೆದಿದ್ದವು. ವಕೀಲರ ಸಂಘ ಹಾಗೂ ದಲಿತಪರ ಸಂಘಟನೆಗಳ ಕಾರ‍್ಯಕರ್ತರು ಆರೋಪಿಗಳ ಬಂಧನಕ್ಕೆ ಪೊಲೀಸ್‌ ಇಲಾಖೆ ಮೇಲೆ ಒತ್ತಡ ಹೇರಿದ್ದರು. ಇದರ ಮಧ್ಯೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಪರಶುರಾಮ್‌ ಆರೋಪಿಗಳ ಬಂಧನಕ್ಕಾಗಿ ಡಿವೈಎಸ್‌ಪಿ ಎಂ.ಜೆ.ಪೃಥ್ವಿ ನೇತೃತ್ವದಲ್ಲಿ ಮೂರು ಪ್ರತ್ಯೇಕ ತಂಡ ರಚಿಸಿದ್ದರು. ಈ ತಂಡವು ಖಚಿತ ಮಾಹಿತಿ ಮೇರೆಗೆ ಗೌಪ್ಯ ಸ್ಥಳದಲ್ಲಿ ಅಡಗಿದ್ದ ಆರೋಪಿಗಳನ್ನು ಗುರುವಾರ ಬಂಧಿಸಿದೆ.
ಗುಂಡು-ತುಂಡಿನ ಪಾರ್ಟಿ ಮಾಡಿದವರಿಗೆ ಬಿಲ್ ಕೇಳಿದ್ದೇ ತಪ್ಪಾಯ್ತು..! ಧಾಬಾ ಮಾಲೀಕನನ್ನು ಕೊಂದವರು ಅಂದರ್

2017ರಲ್ಲಿ ವಕೀಲ ರವೀಂದ್ರ ವಿರುದ್ಧ ಕೆಸ್ತೂರು ಪೊಲೀಸ್‌ ಠಾಣೆಯಲ್ಲಿ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣ ದಾಖಲಾಗಿತ್ತು. ಈ ಪ್ರಕರಣ ಹಾಗೂ ಜಮೀನು ವ್ಯಾಜ್ಯದ ಹಿನ್ನೆಲೆಯಲ್ಲಿ ದ್ವೇಷವಿಟ್ಟುಕೊಂಡು ಕೊಲೆ ಮಾಡಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಜತೆಗೆ ಆರೋಪಿಗಳ ಪೈಕಿ ಒಬ್ಬ, ಆತ್ಮಹತ್ಯೆ ಪ್ರಚೋದನೆ ಪ್ರಕರಣ ದಾಖಲಿಸಿದ್ದ ಕುಟುಂಬದ ವ್ಯಕ್ತಿಯಾಗಿದ್ದಾನೆ. ಎಲ್ಲರನ್ನೂ ಜ.7ರಂದು ಬೆಳಗ್ಗೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಎಸ್ಪಿ ಕೆ.ಪರಶುರಾಮ್‌ ತಿಳಿಸಿದರು.
ಮಹಿಳೆಯ ಅತ್ಯಾಚಾರ, ಕೊಲೆ: ಗೋವಾದಲ್ಲಿ ಬೆಂಗಳೂರು ವ್ಯಕ್ತಿ ಬಂಧನ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ