ಆ್ಯಪ್ನಗರ

ಸ್ವಚ್ಛತೆಗಾಗಿ ನದಿಗಿಳಿದ ಉಪನ್ಯಾಸಕರು, ವಿದ್ಯಾರ್ಥಿಗಳು

ಶ್ರೀರಂಗಪಟ್ಟಣ: ಕಾವೇರಿ ನದಿ ಸ್ವಚ್ಛತಾ ಆಂದೋಲನ ಹೆಸರಿನಲ್ಲಿ ಸತತ ನಾಲ್ಕನೇ ಭಾನುವಾರವೂ ನಾನಾ ಸಂಘ, ಸಂಸ್ಥೆಗಳ ಕಾರ್ಯಕರ್ತರು ನದಿ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡರು.

Vijaya Karnataka 25 Jun 2018, 5:00 am
ಶ್ರೀರಂಗಪಟ್ಟಣ: ಕಾವೇರಿ ನದಿ ಸ್ವಚ್ಛತಾ ಆಂದೋಲನ ಹೆಸರಿನಲ್ಲಿ ಸತತ ನಾಲ್ಕನೇ ಭಾನುವಾರವೂ ನಾನಾ ಸಂಘ, ಸಂಸ್ಥೆಗಳ ಕಾರ್ಯಕರ್ತರು ನದಿ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡರು.
Vijaya Karnataka Web lectures students who walked for cleanliness
ಸ್ವಚ್ಛತೆಗಾಗಿ ನದಿಗಿಳಿದ ಉಪನ್ಯಾಸಕರು, ವಿದ್ಯಾರ್ಥಿಗಳು


ಲೈಫ್‌ ಜಾಕೆಟ್‌, ಕುಡುಗೋಲು ಇತರ ಪರಿಕರಗಳನ್ನು ಹಿಡಿದು ದೋಣಿಯ ಸಮೇತ ನದಿಗಿಳಿದ ಸುಮಾರು 50ಕ್ಕೂ ಹೆಚ್ಚು ಮಂದಿ ಕಾರ‍್ಯಕರ್ತರು, ಅರ್ಧ ದಿನ ಶ್ರಮದಾನ ಮಾಡಿದರು. ನದಿಯ ನೀರಿನ ಮೇಲ್ಭಾಗದಲ್ಲಿ ಬೆಳೆದು ನಿಂತಿರುವ ಜೊಂಡು ಹುಲ್ಲು, ಅಲ್ಲಲ್ಲಿ ಬೆಳೆದು ನಿಂತಿರುವ ಗಿಡ, ಗಂಟಿಗಳನ್ನು ಕತ್ತರಿಸಿದರು. ನದಿಯೊಳಗೆ ತೆರವು ಮಾಡಿದ ತ್ಯಾಜ್ಯ ಹಾಗೂ ನದಿಯ ದಡದಲ್ಲಿ ಸಂಗ್ರಹವಾಗಿದ್ದ ಪ್ಲಾಸ್ಟಿಕ್‌, ಹಳೆ ಬಟ್ಟೆ ಇತರ ವಸ್ತುಗಳನ್ನು ಜೆಸಿಬಿ ಯಂತ್ರದ ಸಹಾಯದಿಂದ ಟ್ರ್ಯಾಕ್ಟರ್‌ಗಳಿಗೆ ತುಂಬಿ ಹೊರ ಹಾಕಿದರು.

ಶ್ರಮದಾನದಲ್ಲಿ ಅಭನವ ಭಾರತ ತಂಡ, ನುರಿತ ಮೀನುಗಾರರು, ಉಪನ್ಯಾಸಕರು, ವಿದ್ಯಾರ್ಥಿಗಳು, ಪತ್ರಕರ್ತರು, ನಾನಾ ಕಂಪನಿಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ನೌಕರರು ಭಾಗವಹಿಸುತ್ತಿದ್ದು. ಇದುವರೆಗೆ ನಾಲ್ಕು ದಿನ ಶ್ರಮದಾನ ನಡೆಸಿ ಸುಮಾರು 600 ಮೀಟರ್‌ನಷ್ಟು ನದಿ ಭಾಗವನ್ನು ಸ್ವಚ್ಛ ಮಾಡಲಾಗಿದೆ. ನದಿ ಸಂಪೂರ್ಣ ಕೆಸರು ಹುಲ್ಲಿನಿಂದ ಮುಚ್ಚಿ ಹೋಗಿತ್ತು. ನೋಡುಗರಿಗೆ ನದಿ ಕೆರೆಯಂತೆ ಕಾಣುತ್ತಿತ್ತು. ಎತ್ತ ನೋಡಿದರೂ ಜೊಂಡು ಹುಲ್ಲು ಆವರಿಸಿಕೊಂಡಿತ್ತು. ನಾನಾ ಸಂಘ ಸಂಸ್ಥೆಗಳ ಕಾರ‍್ಯಕರ್ತರ ಶ್ರಮದಾನದ ಫಲವಾಗಿ ಇದೀಗ ನದಿಯಲ್ಲಿ ಹರಿಯುವ ನೀರು ಕಾಣಿಸಿಕೊಳ್ಳುತ್ತಿದೆ.

* ವೆಲ್ಲೆಸ್ಲಿ ಸೇತುವೆಯಿಂದ ಶ್ರೀ ನಿಮಿಷಾಂಬ ದೇಗುಲದವರೆಗೂ ನದಿಯನ್ನು ಸ್ವಚ್ಛ ಮಾಡುವ ಸಂಕಲ್ಪದೊಂದಿಗೆ ಪ್ರತಿ ಭಾನುವಾರ ಶ್ರಮದಾನ ಮಾಡಲಾಗುತ್ತಿದೆ. ಸ್ಥಳೀಯರು, ಮೀನುಗಾರರು, ನಾನಾ ಸಂಘ, ಸಂಸ್ಥೆಗಳ ಕಾರ‍್ಯಕರ್ತರು, ಉಪನ್ಯಾಸಕರು, ನಿವೃತ್ತ ನೌಕರರು, ವಿದ್ಯಾರ್ಥಿಗಳು ಈ ಕಾರ್ಯದಲ್ಲಿ ಪಾಲ್ಗೊಂಡಿದ್ದಾರೆ. ಪುರಸಭೆ ಜೆಸಿಬಿ ಹಾಗೂ ಟ್ರ್ಯಾಕ್ಟರ್‌ ವ್ಯವಸ್ಥೆ ಮಾಡಿದೆ. ದಾನಿಗಳು ಲೈಫ್‌ ಜಾಕೆಟ್‌ ನೀಡಿದ್ದಾರೆ. ಸ್ವಚ್ಛತೆ ಜತೆಗೆ ಅಲ್ಲಲ್ಲಿ ಸೋಪಾನಕಟ್ಟೆಗಳನ್ನು ನಿರ್ಮಾಣ ಮಾಡುವಂತೆ ಜಿಲ್ಲಾಧಿಕಾರಿ, ಸರಕಾರದ ಮುಖ್ಯ ಕಾರ‍್ಯದರ್ಶಿಗಳಿಗೂ ಪತ್ರ ಬರೆಯಲಾಗಿದೆ.

-ಲಕ್ಷ್ಮೀಶ, ಅಭನವ ಭಾರತ ತಂಡ ಮುಖ್ಯಸ್ಥ

* ನಮ್ಮ ಸಂಸ್ಕೃತಿಯಲ್ಲಿ ನದಿಗೆ ಪೂಜನೀಯ ಸ್ಥಾನವಿದೆ. ಕಾರ್ಖಾನೆಗಳು, ಹೋಟೆಲ್‌ ಹಾಗೂ ನಗರ, ಪಟ್ಟಣಗಳ ಒಳಚರಂಡಿ ನೀರನ್ನು ಕಾವೇರಿಗೆ ಹರಿಯ ಬಿಡುತ್ತಿರುವುದರಿಂದ ನೀರು ಕಲ್ಮಶವಾಗುತ್ತಿದೆ. ಅಲ್ಲದೇ ನದಿ ನೀರಿನ ಮೇಲ್ಭಾಗದಲ್ಲಿ ಜೊಂಡು ಹುಲ್ಲು ಆವೃತ್ತವಾಗಿರುವುದರಿಂದ ನದಿ ಕಾಣದ ಸ್ಥಿತಿ ಇದೆ. ನದಿಯ ಪಾವಿತ್ರ್ಯತೆ ಕಾಪಾಡಬೇಕು. ನದಿ ಕಲುಷಿತವಾಗದಂತೆ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂಬ ಉದ್ದೇಶದಿಂದ ಶ್ರಮದಾನ ಆರಂಭಿಸಲಾಗಿದೆ. ನಿರಂತರವಾಗಿ ಈ ಕಾರ‍್ಯ ನಡೆಯಲಿದೆ.

-ಡಾ.ಭಾನುಪ್ರಕಾಶ್‌ ಶರ್ಮ, ಅಧ್ಯಕ್ಷ . ಶಾಶ್ವತಿ ಧಾರ್ಮಿಕ ಕ್ರಿಯಾ ಸಮಿತಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ