ಆ್ಯಪ್ನಗರ

ಮನಸ್ಸುಗಳ ಸೇತುವೆ ಕಟ್ಟೋಣ: ತ್ರಿನೇತ್ರ ಸ್ವಾಮೀಜಿ

ಮಹಲು ಕಟ್ಟುವವರು ಮತ್ತು ನಾಡು ಕಟ್ಟುವ ವರು ಸಾಕಷ್ಟು ಜನರಿದ್ದಾರೆ. ಆದರೆ, ಮನಸ್ಸು ಮತ್ತು ಭಾವನೆಯ ಸೇತುವೆ ಕಟ್ಟುವುದು ಇಂದಿನ ತುರ್ತು ಅಗತ್ಯ ಎಂದು ಚಂದ್ರವನ ಆಶ್ರಮದ ಶ್ರೀ ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ ಹೇಳಿದ್ದಾರೆ.

Vijaya Karnataka 12 Sep 2017, 5:15 am
ಶ್ರೀರಂಗಪಟ್ಟಣ: ಮಹಲು ಕಟ್ಟುವವರು ಮತ್ತು ನಾಡು ಕಟ್ಟುವ ವರು ಸಾಕಷ್ಟು ಜನರಿದ್ದಾರೆ. ಆದರೆ, ಮನಸ್ಸು ಮತ್ತು ಭಾವನೆಯ ಸೇತುವೆ ಕಟ್ಟುವುದು ಇಂದಿನ ತುರ್ತು ಅಗತ್ಯ ಎಂದು ಚಂದ್ರವನ ಆಶ್ರಮದ ಶ್ರೀ ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ ಹೇಳಿದ್ದಾರೆ.
Vijaya Karnataka Web lets bridge the minds swamiji
ಮನಸ್ಸುಗಳ ಸೇತುವೆ ಕಟ್ಟೋಣ: ತ್ರಿನೇತ್ರ ಸ್ವಾಮೀಜಿ


ಮೂರು ದಿನಗಳ ಕಾಲ ಚಂದ್ರವನ ಆಶ್ರಮದಲ್ಲಿ ನಡೆದ ಸಮೃದ್ಧ ಜೀವನ ವ್ಯಕ್ತಿತ್ವ ವಿಕಸನ 7ನೇ ಶಿಬಿರದ ಸಮಾರೋಪ ಸಮಾರಂಭ ದಲ್ಲಿ ಭಾನುವಾರ ಅವರು ಮಾತನಾಡಿದರು. ‘‘ಕೊಡು-ತಗೋ ಸಂಬಂಧಗಳೇ ಇಂದು ಹೆಚ್ಚು. ಇವೆಲ್ಲವನ್ನೂ ಮೀರಿದ್ದು ಪ್ರತಿಫಲಾಪೇಕ್ಷೆ ಇಲ್ಲದ ಪ್ರೀತಿ. ಸ್ವರ್ಗ ಎಲ್ಲೋ ಇದೆ, ಸತ್ತ ಮೇಲೆ ಅದು ಸಿಗುತ್ತದೆ ಎಂಬ ಭಾವನೆ ಬಹಳಷ್ಟು ಜನರಲ್ಲಿದೆ. ಆದರೆ, ಸ್ವರ್ಗ ಇಲ್ಲೇ ಇದೆ. ನಗುತ್ತ ಮಲಗಿ, ನಗುತ್ತಲೇ ಏಳಬೇಕು. ಮಾಡುವ ಕೆಲಸ ಸತ್ಯ, ಶುದ್ಧ, ಪ್ರಾಮಾಣಿಕವಾಗಿದ್ದರೆ ಅದರ ಫಲ ಸಿಕ್ಕೇ ಸಿಗುತ್ತದೆ’’ ಎಂದು ಹೇಳಿದರು.

‘‘‘ನಾನು’ ಮತ್ತು ‘ಬೇಕು’ ಎಂಬುದನ್ನು ತ್ಯಜಿಸಿದರೆ ಎಲ್ಲವನ್ನೂ ಸಾಧಿಸಬಹುದು. ಇಡೀ ಪ್ರಪಂಚದಲ್ಲಿ ಸಂಬಂಧಗಳು ಜೀವಂತ ಇರುವ ಏಕೈಕ ರಾಷ್ಟ್ರ ಭಾರತ’’ ಎಂದರು. ‘‘ಶಿಬಿರದಿಂದ ಕಲಿತ ಪಾಠಗಳನ್ನು ಜೀವನದಲ್ಲಿ ಅಳವಡಿಸಿ ಕೊಂಡು, ಬದುಕಿರುವಷ್ಟು ದಿನ ಎಲ್ಲರ ಜತೆ ಪ್ರೀತಿಯಿಂದ ಬಾಳಿರಿ’’ ಎಂದು ಕಿವಿಮಾತು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಪತಂಜಲಿ ಯೋಗಾಶ್ರಮ ಟ್ರಸ್ಟ್ ಅಧ್ಯಕ್ಷ ಶ್ರೀ ಪ್ರಕಾಶ್ ಯೋಗಿ ಗುರೂಜಿ, ‘‘ಹಂಚಿ ತಿನ್ನುವುದೇ ಸ್ವರ್ಗ, ಕಿತ್ತು ತಿನ್ನುವುದೇ ನರಕ. ಪ್ರತಿನಿತ್ಯ ಯೋಗ ಮಾಡುವುದರಿಂದ ಮತ್ತು ಸದಾ ನಗುತ್ತ ಇರುವುದರಿಂದ ಆರೋಗ್ಯ ದಿಂದ ಇರಬಹುದು’’ ಎಂದು ತಿಳಿಸಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ವಿಜಯ ಕರ್ನಾಟಕ ಮೈಸೂರು ಸ್ಥಾನಿಕ ಸಂಪಾದಕ ಲೋಕೇಶ್ ಕಾಯರ್ಗ ಮಾತನಾಡಿ, ಆಧುನಿಕ ಸವಲತ್ತು ಮತು ಆಕರ್ಷಣೆಗಳು ನಮ್ಮ ಏಕಾಂತ ಮತ್ತು ಮೌನವನ್ನು ಕಸಿದುಕೊಂಡಿವೆ. ನಮ್ಮೊಳಗೆ ನಾವು ಸಂಭಾಷಣೆ ನಡೆಸುವ, ಸ್ವವಿಮರ್ಶೆ ನಡೆಸುವ ಅವಕಾಶವಿಲ್ಲದಾಗಿದೆ. ಜಂಗಮರ ವಾಣಿ ಕೇಳಬೇಕಾದವರು ಇಂದು ಜಂಗಮವಾಣಿ ಕೇಳುವಂತಾಗಿದೆ. ನವ ಮಾಧ್ಯಮಗಳ ಗದ್ದಲದಲ್ಲಿ ನಮ್ಮ ಮನಸ್ಸು ಕದಡಿ ಹೋಗುತ್ತಿದೆ. ಯಾವುದು ನಮ್ಮ ಮನಸ್ಸನ್ನು ಅರಳಿಸುತ್ತದೋ ಅದನ್ನು ಮಾತ್ರ ಸ್ವೀಕರಿಸಿ, ಜೀವನ ಖುಷಿಯಾಗಿಟ್ಟು ಕೊಳ್ಳಬೇಕು. ಇಂತಹ ಶಿಬಿರಗಳನ್ನು ಆಯೋಜಿಸುವುದರಿಂದ ಜನರಿಗೆ ಪ್ರೀತಿ, ಬಾಂಧವ್ಯ, ಸಂಬಂಧಗಳ ಬೆಲೆ ತಿಳಿಯುತ್ತದೆ’’ ಎಂದು ಪ್ರಶಂಶಿಸಿದರು.
ಆಯುರ್ವೇದ ತಜ್ಞರಾದ ಡಾ.ಕೃಷ್ಣಮೂರ್ತಿ, ಡಾ.ಪೂರ್ಣಿಮ ದಂಪತಿ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ