ಆ್ಯಪ್ನಗರ

ಕಚೇರಿಗೆ ಬೀಗ ಜಡಿದು ಪ್ರತಿಭಟನೆ

ಮೂಲ ಸೌಲಭ್ಯ ಕಲ್ಪಿಸದ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳ ವಿರುದ್ಧ ವಿವಿಧ ಗ್ರಾಮಗಳ ಗ್ರಾಮಸ್ಥರು ಗ್ರಾಪಂ ಕಚೇರಿಗೆ ಬೀಗ ಜಡಿದು ಶನಿವಾರ ಪ್ರತಿಭಟನೆ ನಡೆಸಿದರು.

Vijaya Karnataka 21 Jan 2018, 5:16 am
ಮದ್ದೂರು: ಮೂಲ ಸೌಲಭ್ಯ ಕಲ್ಪಿಸದ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳ ವಿರುದ್ಧ ವಿವಿಧ ಗ್ರಾಮಗಳ ಗ್ರಾಮಸ್ಥರು ಗ್ರಾಪಂ ಕಚೇರಿಗೆ ಬೀಗ ಜಡಿದು ಶನಿವಾರ ಪ್ರತಿಭಟನೆ ನಡೆಸಿದರು.
Vijaya Karnataka Web locking the office and protesting
ಕಚೇರಿಗೆ ಬೀಗ ಜಡಿದು ಪ್ರತಿಭಟನೆ


ತಾಲೂಕಿನ ಗೊರವನಹಳ್ಳಿ ಗ್ರಾ.ಪಂ. ಕಚೇರಿ ಬಳಿ ಜಮಾಯಿಸಿದ ಪ್ರತಿಭಟನಾ ಕಾರರು ಆಡಳಿತ ಮಂಡಳಿ ಹಾಗೂ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿ, ಕರ್ತವ್ಯ ನಿರ್ವಹಿಸಿ ವರ್ಗಾವಣೆಗೊಂಡಿರುವ ಪಿಡಿಒ, ಕಾರ್ಯದರ್ಶಿ ಹಲವಾರು ಅವ್ಯವಹಾರಗಳನ್ನು ನಡೆಸಿದ್ದು ತನಿಖೆ ಮಾಡುವಂತೆ ಆಗ್ರಹಿಸಿ ರು.

ಗೊರವನಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಚನ್ನಸಂದ್ರ, ಉಪ್ಪಿನಕೆರೆ, ಮರಕಾಡ ದೊಡ್ಡಿ ಸೇರಿದಂತೆ ಇನ್ನಿತರೆ ಗ್ರಾಮಗಳ ಗ್ರಾಮಸ್ಥರು ಕಚೇರಿಗೆ ಬೀಗ ಜಡಿದು ಸಾರ್ವಜನಿಕರ ಕೆಲಸ ಕಾರ್ಯಗಳು ವಿಳಂಬವಾಗುತ್ತಿದೆ. ಹಿಂದೆ ಕರ್ತವ್ಯ ನಿರ್ವಹಿಸುತ್ತಿದ್ದ ಪಿಡಿಒ ಕಷ್ಣಪ್ಪ ಹಾಗೂ ಕಾರ್ಯದರ್ಶಿ ಶಿವಮಾದು ಅಕ್ರಮವಾಗಿ ನಿವೇಶನ ಗಳನ್ನು ಖಾಸಗಿ ವ್ಯಕ್ತಿಗಳಿಗೆ ಖಾತೆ ಮಾಡಿರುವುದಾಗಿ ಆರೋಪಿಸಿದರು. ಪಿಡಿಒ ಕಷ್ಣಪ್ಪ ಅವರು ನಕಲಿ ದಾಖಲೆ ಸಷ್ಟಿಸಿ ಹಾಗೂ ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಪುಟ್ಟರಾಜು ಅವರ ಪೋರ್ಜರಿ ಸಹಿ ಮಾಡಿ 17 ನಿವೇಶನ ಗಳನ್ನು ಹಣ ದಾಸೆಗಾಗಿ ಖಾಸಗಿ ವ್ಯಕ್ತಿ ಗಳಿಗೆ ಖಾತೆ ಮಾಡಿಕೊಟ್ಟಿದ್ದು, ಈ ಸಂಬಂಧ ತಾಲೂಕು ಇಒ ಅವರು ತನಿಖೆ ಕೈಗೊಳ್ಳುವಂತೆ ಒತ್ತಾಯಿಸಿದರು.

ಕೆಲ ಸಭಾ ನಡವಳಿಕೆಗಳನ್ನು ತಿದ್ದುಪಡಿ ಮಾಡಿ ಕಾನೂನು ಬಹಿರವಾಗಿ ಅಕ್ರಮ ವೆಸಗಿರುವ ಪಿಡಿಒ ಕಷ್ಣಪ್ಪ ಅವರನ್ನು ಅಮಾನತು ಗೊಳಿಸುವಂತೆ ಇ-ಸ್ವತ್ತು ಮತ್ತು ಖಾತೆ ಮಾಡಿಕೊಟ್ಟಿ ರುವ ಕಾರ್ಯ ದರ್ಶಿ ವಿರುದ್ಧ ಕಾನೂನು ರೀತಿಯ ಕ್ರಮ ಕೈಗೊಳ್ಳುವ ಜತೆಗೆ ಕಳೆದ ಐದು ವರ್ಷಗಳಿಂದಲೂ ಆಶ್ರಯ ಮನೆ ಯೋಜನೆ ಹಣ ನೀಡಿಲ್ಲ . ಫಲಾನುಭವಿಗಳಿಗೆ ಹಣ ವಿತರಿಸದೆ ವಿಳಂಬಧೋರಣೆ ಅನುಸರಿಸುತ್ತಿದ್ದು ಕೂಡಲೇ ಹಣ ವಿತರಿಸಲು ಮುಂದಾಗಬೇಕು ಎಂದು ಆಗ್ರಹಿಸಿದರು.

ಮುಂದಿನ 15 ದಿನದೊಳಗಾಗಿ ಅಕ್ರಮ ಅವ್ಯವಹಾರಗಳ ವಿರುದ್ಧ ತಾ.ಪಂ. ಇಒ ಕ್ರಮವಹಿಸದಿದ್ದಲ್ಲಿ ತಾಲೂಕು ಕಚೇರಿ ಎದುರು ಅನಿರ್ಧಿಷ್ಠಾವಧಿ ಧರಣಿ ಕೈಗೊಳ್ಳುವುದಾಗಿ ಎಚ್ಚರಿಸಿದರು.
ಸುರೇಶ್, ಉಮೇಶ್, ಜಿ.ಬಿ. ಶಿವಪ್ಪ, ಸಿ.ಕೆ. ರವಿ, ಶಿವಬೋರಯ್ಯ, ಸಿದ್ದೇಗೌಡ, ಪುಟ್ಟಸ್ವಾಮಿ, ರವಿ, ವೀರಭದ್ರ, ನೀಲಕಂಠೇಗೌಡ, ಬೋರೇಗೌಡ ನೇತತ್ವವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ