ಆ್ಯಪ್ನಗರ

ಕಿರುಕುಳಕ್ಕೆ ಹೆದರಿ ವ್ಯಕ್ತಿ ಆತ್ಮಹತ್ಯೆ

ಕಿರುಕುಳಕ್ಕೆ ಹೆದರಿ ವ್ಯಕ್ತಿ ಆತ್ಮಹತ್ಯೆ -ಹಣಕಾಸು ಸಂಸ್ಥೆಯ ಇಬ್ಬರು ಸಿಬ್ಬಂದಿ ಪೊಲೀಸ್‌ ವಶಕ್ಕೆ ವಿಕ ಸುದ್ದಿಲೋಕ ಮದ್ದೂರು (ಮಂಡ್ಯ) ಖಾಸಗಿ ಹಣಕಾಸು ಸಂಸ್ಥೆಯ ಕಿರುಕುಳಕ್ಕೆ ...

Vijaya Karnataka 18 Sep 2019, 5:00 am
-ಹಣಕಾಸು ಸಂಸ್ಥೆಯ ಇಬ್ಬರು ಸಿಬ್ಬಂದಿ ಪೊಲೀಸ್‌ ವಶಕ್ಕೆ
Vijaya Karnataka Web man who fears harassment and suicide in maddur taluk
ಕಿರುಕುಳಕ್ಕೆ ಹೆದರಿ ವ್ಯಕ್ತಿ ಆತ್ಮಹತ್ಯೆ

ಮದ್ದೂರು (ಮಂಡ್ಯ): ಖಾಸಗಿ ಹಣಕಾಸು ಸಂಸ್ಥೆಯ ಕಿರುಕುಳಕ್ಕೆ ಹೆದರಿ ತಾಲೂಕಿನ ಹೆಮ್ಮನಹಳ್ಳಿ ಗ್ರಾಮದಲ್ಲಿವ್ಯಕ್ತಿಯೊಬ್ಬರು ಮಂಗಳವಾರ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಹೆಮ್ಮನಹಳ್ಳಿ ಗ್ರಾಮದ ಶಂಕರಯ್ಯ ಅವರ ಪುತ್ರ ಪ್ರದೀಪ್‌ (40) ಮೃತ. ಪ್ರದೀಪ್‌ ಅವರ ಪತ್ನಿ ಹೇಮಾ ಅನಾರೋಗ್ಯದ ಕಾರಣ ಸೋಮವಾರ ಮೃತಪಟ್ಟಿದ್ದು, ಮರುದಿನವೇ ಪ್ರದೀಪ್‌ ನೇಣಿಗೆ ಶರಣಾಗಿದ್ದರಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

ಪ್ರದೀಪ್‌ ಬೆಂಗಳೂರಿನ ಸುಂಕದಕಟ್ಟೆಯಲ್ಲಿ ಸ್ಟೀಲ್‌ ಪಾತ್ರೆ ಅಂಗಡಿಯೊಂದನ್ನು ನಡೆಸುತ್ತಿದ್ದು, ವ್ಯಾಪಾರ ವಹಿವಾಟಿಗೆಂದು ಖಾಸಗಿ ಹಣಕಾಸು ಸಂಸ್ಥೆಯಲ್ಲಿ ಸಾಲ ಪಡೆದಿದ್ದರು ಎನ್ನಲಾಗಿದೆ. ವ್ಯಾಪಾರದಲ್ಲಿ ನಷ್ಟ ಹೊಂದಿದ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಪ್ರದೀಪ್‌ ನಾಪತ್ತೆಯಾಗಿದ್ದರು. ಪ್ರದೀಪ್‌ಗಾಗಿ ಹಣಕಾಸು ಸಂಸ್ಥೆ ಸಿಬ್ಬಂದಿ ಎಲ್ಲೆಡೆ ಹುಡುಕಾಡಿದರೂ ಪತ್ತೆಯಾಗಿರಲಿಲ್ಲ. ಪ್ರದೀಪ್‌ ಪತ್ನಿ ಸೋಮವಾರ ಮೃತಪಟ್ಟಿದ್ದರಿಂದ ಹೆಮ್ಮನಹಳ್ಳಿ ಗ್ರಾಮಕ್ಕೆ ಪ್ರದೀಪ್‌ ಬಂದಿರುವ ಸುದ್ದಿ ತಿಳಿದು ಹಣಕಾಸು ಸಂಸ್ಥೆ ಸಿಬ್ಬಂದಿ ಮಂಗಳವಾರ ಪ್ರದೀಪ್‌ ಮನೆಗೆ ಆಗಮಿಸಿ ಸಾಲ ಮರುಪಾವತಿ ಮಾಡುವಂತೆ ಬೆದರಿಕೆ ಹಾಕಿದ್ದಾರೆ ಎಂದು ಕುಟುಂಬದವರು ಆರೋಪಿಸಿದ್ದಾರೆ.

ಖಾಸಗಿ ಹಣಕಾಸು ಸಂಸ್ಥೆಯವರು ಕಿರುಕುಳ ನೀಡಿದ್ದರಿಂದ ಹಾಗೂ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಮನನೊಂದ ಪ್ರದೀಪ್‌ ಮನೆಯ ಕೊಠಡಿಯಲ್ಲಿ ನೇಣಿಗೆ ಶರಣಾಗಿದ್ದಾರೆ ಎಂದು ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದು, ಕೆಸ್ತೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಕೆಸ್ತೂರು ಪೊಲೀಸರು ಹಣಕಾಸು ಸಂಸ್ಥೆಯ ಇಬ್ಬರು ಸಿಬ್ಬಂದಿಯನ್ನು ವಶಕ್ಕೆ ಪಡೆದು, ಮುಂಜಾಗ್ರತಾ ಕ್ರಮವಾಗಿ ಗ್ರಾಮದಲ್ಲಿ ಬಿಗಿ ಪೊಲೀಸ್‌ ಬಂದೋಬಸ್‌್ತ ಕೈಗೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ