ಆ್ಯಪ್ನಗರ

ಅನ್‌ಲಾಕ್1: ಮಂಡ್ಯದಲ್ಲಿ ಪ್ರಾಥನಾ ಮಂದಿರಗಳನ್ನು ತೆರೆಯಲು ಸಕಲ ಸಿದ್ಧತೆ!

ಮಂಡ್ಯ ಜಿಲ್ಲೆಯಲ್ಲೂ ಮಂದಿರ, ಚರ್ಚ್ ಹಾಗೂ ಮಸೀದಿಗಳನ್ನು ಪುನರಾರಂಭಿಸಲು ಸಿದ್ಧತೆ ನಡೆಸಲಾಗುತ್ತಿದ್ದು, ನಾಳೆಯಿಂದ ಜಿಲ್ಲೆಯ ಪ್ರಮುಖ ದೇವಸ್ಥಾನಗಳಿಗೆ ಭಕ್ತರ ಪ್ರವೇಶಕ್ಕೆ ಹಸಿರು ನಿಶಾನೆ ತೋರಲಾಗಿದೆ.

Vijaya Karnataka Web 7 Jun 2020, 10:46 am
ಮಂಡ್ಯ: ಅನ್‌ಲಾಕ್ ನೀತಿಯ ಭಾಗವಾಗಿ ನಾಳೆ(ಜೂನ್, 8)ಯಿಂದ ಪ್ರಾರ್ಥನಾ ಮಂದಿರಗಳನ್ನು ತೆರಯಲಾಗುತ್ತಿದ್ದು, ರಾಜ್ಯದಲ್ಲೂ ಪ್ರಮುಖ ಪ್ರಾರ್ಥನಾ ಮಂದಿರಗಳನ್ನು ತೆರೆಯಲು ಸಕಲ ಸಿದ್ಧತೆ ಆರಂಭಿಸಲಾಗಿದೆ.
Vijaya Karnataka Web temple_ED
ಸಂಗ್ರಹ ಚಿತ್ರ


ಅದರಂತೆ ಮಂಡ್ಯ ಜಿಲ್ಲೆಯಲ್ಲೂ ಮಂದಿರ, ಚರ್ಚ್ ಹಾಗೂ ಮಸೀದಿಗಳನ್ನು ಪುನರಾರಂಭಿಸಲು ಸಿದ್ಧತೆ ನಡೆಸಲಾಗುತ್ತಿದ್ದು, ನಾಳೆಯಿಂದ ಜಿಲ್ಲೆಯ ಪ್ರಮುಖ ದೇವಸ್ಥಾನಗಳಿಗೆ ಭಕ್ತರ ಪ್ರವೇಶಕ್ಕೆ ಹಸಿರು ನಿಶಾನೆ ತೋರಲಾಗಿದೆ.

ಭಕ್ತರೇ ಗಮನಿಸಿ: ಶೃಂಗೇರಿ, ಹೊರನಾಡು ದೇವಸ್ಥಾನಗಳಿಗೆ ಸದ್ಯಕ್ಕಿಲ್ಲ ಪ್ರವೇಶ!

ಈ ಕುರಿತು ಮಾಹಿತಿ ನೀಡಿರುವ ಮಂಡ್ಯ ಉಪವಿಭಾಗಾಧಿಕಾರಿ ಸೂರಜ್, ಕೇಂದ್ರ ಸರ್ಕಾರದ ನಿಯಮಾವಳಿಗಳಿಗೆ ಅನುಗುಣವಾಗಿ ಎಲ್ಲಾ ಪ್ರಾರ್ಥನಾ ಮಂದಿರಗಳನ್ನು ತೆರೆಯಲು ಸಿದ್ಧತೆ ಆರಂಭವಾಗಿದೆ ಎಂದು ತಿಳಿಸಿದ್ದಾರೆ.

ದೇವಸ್ಥಾನಗಳನ್ನು ಕಡ್ಡಾಯವಾಗಿ ಸ್ಯಾನಿಟೈಜ್ ಮಾಡಬೇಕು. ಥರ್ಮಲ್ ಸ್ಕ್ಯಾನ್ ಹಾಗೂ ಮಾಸ್ಕ್ ಧರಿಸುವುದು ಕಡ್ಡಾಯ. ಪ್ರಸಾದ, ತೀರ್ಥ, ಅರ್ಚನೆಗೆ ನಿರ್ಬಂಧ ವಿಧಿಸಿ, ದರ್ಶನಕ್ಕೆ ಮಾತ್ರ ಅವಕಾಶ ನೀಡಲಾಗುವುದು ಎಂದು ಸೂರಜ್ ಸ್ಪಷ್ಟಪಡಿಸಿದರು.

60 ವರ್ಷ ಮೇಲ್ಪಟ್ಟವರು ಹಾಗೂ 10 ವರ್ಷದೊಳಗಿನ ಮಕ್ಕಳಿಗೆ ಪ್ರಾರ್ಥನಾ ಮಂದಿರಗಳ ಪ್ರವೇಶ ನಿರ್ಬಂಧ ವಿಧಿಸಲಾಗಿದೆ. ಮಂಡ್ಯದ 24 ದೇವಸ್ಥಾನಗಳನ್ನು ನಾಳೆಯಿಂದ ತೆರೆಯಲಾಗುತ್ತದೆ. ಆದರೆ ಕಂಟೋನ್ಮೆಂಟ್ ಜೋನ್‌ನಲ್ಲಿರುವ ದೇವಸ್ಥಾನಗಳನ್ನು ತೆರೆಯಲು ಅವಕಾಶವಿಲ್ಲ ಎಂದು ಸೂರಜ್ ಹೇಳಿದರು.

ಪರಿಸ್ಥಿತಿ ನೋಡಿ ಭಕ್ತರಿಗೆ ಉಡುಪಿ ಶ್ರೀ ಕೃಷ್ಣದರ್ಶನ ಅವಕಾಶ ನಿರ್ಧಾರ: ಪರ್ಯಾಯ ಶ್ರೀ

ದೇವಸ್ಥಾನದ ಬಳಿ ಹರಕೆ, ಹಾಗೂ ಮದುವೆ ಮಂಟಪ ಸಮಾರಂಭ ಮಾಡುವುದಕ್ಕೆ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಲಾಗಿದ್ದು, ದೇವಸ್ಥಾನದ ಬಳಿ ಮದುವೆ ಮಾಡುವಾಗ 50ಕ್ಕಿಂತ ಹೆಚ್ಚು ಜನ ಸೇರಿದರೆ ಪ್ರಕರಣ ದಾಖಲಿಸಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

ಅಲ್ಲದೇ ಪ್ರತೀ ದೇವಸ್ಥಾನಗಳ ಮುಂಭಾಗದಲ್ಲಿ ಪೊಲೀಸ್ ಭದ್ರತೆ ಒದಗಿಸಲಾಗಿದ್ದು, ಬ್ಯಾರಿಕೇಡ್‌ಗಳ ನಿರ್ಮಾಣ ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಬಾಕ್ಸ್‌ಗಳ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ