ಆ್ಯಪ್ನಗರ

ವೈದ್ಯರ ಮುಷ್ಕರ: ಮಂಡ್ಯದ ಈ ವೈದ್ಯರಿಂದ 5 ರೂ.ಗೆ ಚಿಕಿತ್ಸೆ

ಕೆಪಿಎಂಇ ಕಾಯ್ದೆ ತಿದ್ದುಪಡಿ ವಿರೋಧಿಸಿ ವೈದ್ಯರು ಮುಷ್ಕರ ನಡೆಸುತ್ತಿರುವ ಪರಿಣಾಮ ರಾಜ್ಯದ ಬಹುತೇಕ ಖಾಸಗಿ ಆಸ್ಪತ್ರೆಗಳು ಬಾಗಿಲು ಹಾಕಿದ ಪರಿಣಾಮ ರೋಗಿಗಳು ಪರದಾಡುವಂತಾಗಿದೆ.

Vijaya Karnataka 16 Nov 2017, 6:12 pm
ಮಂಡ್ಯ: ಕೆಪಿಎಂಇ ಕಾಯ್ದೆ ತಿದ್ದುಪಡಿ ವಿರೋಧಿಸಿ ವೈದ್ಯರು ಮುಷ್ಕರ ನಡೆಸುತ್ತಿರುವ ಪರಿಣಾಮ ರಾಜ್ಯದ ಬಹುತೇಕ ಖಾಸಗಿ ಆಸ್ಪತ್ರೆಗಳು ಬಾಗಿಲು ಹಾಕಿದ ಪರಿಣಾಮ ರೋಗಿಗಳು ಪರದಾಡುವಂತಾಗಿದೆ.
Vijaya Karnataka Web mandya famous doctors continuous his service inbetween the doctors strike
ವೈದ್ಯರ ಮುಷ್ಕರ: ಮಂಡ್ಯದ ಈ ವೈದ್ಯರಿಂದ 5 ರೂ.ಗೆ ಚಿಕಿತ್ಸೆ


ಆದರೆ ಮಂಡ್ಯದ ಐದು ರುಪಾಯಿ ವೈದ್ಯ ಎಂದು ಖ್ಯಾತಿಯ ಡಾ.ಶಂಕರೇಗೌಡ ಇದ್ಯಾವುದಕ್ಕೂ ಬೆಂಬಲ ನೀಡದೇ ನಾಲ್ಕು ದಿನಗಳಿಂದಲೂ ನಿರಂತರವಾಗಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಾ ಬಂದಿದ್ದಾರೆ.



ಚರ್ಮ, ಕುಷ್ಠ, ಲೈಂಗಿಕ ರೋಗ ತಜ್ಞರಾಗಿರುವ ಡಾ.ಶಂಕರೇಗೌಡ, ಪ್ರತಿನಿತ್ಯದಂತೆ ಬೆಳಗ್ಗೆ ಶಿವಳ್ಳಿಯಲ್ಲಿ ನಂತರ ಮಂಡ್ಯ ನಗರದ ಆರ್.ಪಿ ರಸ್ತೆಯಲ್ಲಿನ ಕ್ಲಿನಿಕ್‌ನಲ್ಲಿ ಚಿಕಿತ್ಸೆ ನೀಡುತ್ತಲೇ ಬಂದಿದ್ದಾರೆ. ನವೆಂಬರ್ 3ರಂದು ಖಾಸಗಿ ಆಸ್ಪತ್ರೆಗಳ ಮುಷ್ಕರಕ್ಕೆ ನೀಡಿದ್ದ ಕರೆಗೂ ಬೆಂಬಲ ನೀಡದೇ ಕರ್ತವ್ಯ ನಿರ್ವಹಿಸಿದ್ದರು.

ಇದೀಗ ಸಾರ್ವಜನಿಕರಂತೂ ಡಾ.ಶಂಕರೇಗೌಡ ಅವರ ಕಾಯಕವನ್ನು ಹಾಡಿ ಹೊಗಳುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ