ಆ್ಯಪ್ನಗರ

ಮಂಡ್ಯ: ಕಿರಿಯ ಪುತ್ರನೊಂದಿಗೆ ಸೇರಿಕೊಂಡು , ಹಿರಿಯ ಮಗನ ಕೊಲೆಗೆ ಯತ್ನಿಸಿದ ಪಾಪಿ ತಂದೆ!

ಆರೋಪಿ ಶಿವಲಿಂಗೇಗೌಡರಿಗೆ ಇಬ್ಬರು ಪತ್ನಿಯರಿದ್ದು, ಮೊದಲ ಹೆಂಡತಿಯ ಮಗ ಪ್ರಸನ್ನ ಜಮೀನು ವಿಚಾರವಾಗಿ ಚಿಕ್ಕಪ್ಪನಿಗೆ ಬೆಂಬಲವಾಗಿದ್ದ. ಈ ಬಗ್ಗೆ ಹಿಂದೆ ಒಂದೆರೆಡು ಬಾರಿ ಗಲಾಟೆ ನಡೆದಿತ್ತು. ಬೆಂಗಳೂರಿನಲ್ಲಿ ನೆಲೆಸಿದ್ದ ಶಿವಲಿಂಗೇಗೌಡ ತನ್ನ ಎರಡನೇ ಪತ್ನಿಯ ಮಗ ಬಾಲಕೃಷ್ಣ ಜತೆ ಸೇರಿ ಹಲ್ಲೆ ಮಾಡಿರುವುದು ಪ್ರಾಥಮಿಕ ತನಿಖೆಯಿಂದ ಬಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Vijaya Karnataka Web 26 Dec 2020, 7:34 am
ನಾಗಮಂಗಲ: ಆಸ್ತಿ ವಿಷಯಕ್ಕೆ ಸಂಬಂಧಿಸಿದಂತೆ ತಂದೆಯೇ ತನ್ನ ಮಗನನ್ನು ಕೊಲೆಗೆ ಯತ್ನಿಸಿದ ಘಟನೆ ತಾಲೂಕಿನ ಅಂಚೆಭೂವನಹಳ್ಳಿ ಗ್ರಾಮದಲ್ಲಿ ಗುರುವಾರ ರಾತ್ರಿ ನಡೆದಿದೆ. ಶಿವಲಿಂಗೇಗೌಡ ಎಂಬವರ ಮೊದಲ ಪತ್ನಿಯ ಪುತ್ರ ಪ್ರಸನ್ನ (27) ತೀವ್ರ ಹಲ್ಲೆಗೊಳಗಾಗಿ ಆಸ್ಪತ್ರೆ ದಾಖಲಾಗಿದ್ದಾರೆ. ತಂದೆ ಶಿವಲಿಂಗೇಗೌಡ ಹಾಗೂ ಕಿರಿಯ ಪತ್ನಿಯ ಮಗ ಬಾಲಕೃಷ್ಣ ಕೊಲೆಗೆ ಯತ್ನಿಸಿದ ಆರೋಪಿಗಳು.
Vijaya Karnataka Web Mandya


ಪ್ರಸನ್ನ ಎಂದಿನಂತೆ ಗ್ರಾಮದಲ್ಲಿನ ಸ್ನೇಹಿತರ ಜತೆ ಸಮಯ ಕಳೆದ ನಂತರ ಗುರುವಾರ ರಾತ್ರಿ ಸುಮಾರು 8.30ಕ್ಕೆ ತನ್ನ ಮನೆಗೆ ಮರಳಿ ಬಾಗಿಲು ತೆಗೆಯುವ ವೇಳೆ ಹೊಂಚುಹಾಕಿ ಕಾದು ಕುಳಿತಿದ್ದ ಶಿವಲಿಂಗೇಗೌಡ ಹಾಗೂ ಬಾಲಕೃಷ್ಣ ಏಕಾಏಕಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದರು. ಪ್ರಸನ್ನನ ಚೀರಾಟ ಕೇಳಿ ಗ್ರಾಮಸ್ಥರು ಸ್ಥಳಕ್ಕಾಗಮಿಸುವಷ್ಟರಲ್ಲಿ ಆರೋಪಿಗಳು ತಾವು ಬಂದಿದ್ದ ಕಾರನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಶಿವಲಿಂಗೇಗೌಡರಿಗೆ ಇಬ್ಬರು ಪತ್ನಿಯರಿದ್ದು, ಮೊದಲ ಹೆಂಡತಿಯ ಮಗ ಪ್ರಸನ್ನ ಜಮೀನು ವಿಚಾರವಾಗಿ ಚಿಕ್ಕಪ್ಪನಿಗೆ ಬೆಂಬಲವಾಗಿದ್ದ. ಈ ಬಗ್ಗೆ ಹಿಂದೆ ಒಂದೆರೆಡು ಬಾರಿ ಗಲಾಟೆ ನಡೆದಿತ್ತು. ಬೆಂಗಳೂರಿನಲ್ಲಿ ನೆಲೆಸಿದ್ದ ಶಿವಲಿಂಗೇಗೌಡ ತನ್ನ ಎರಡನೇ ಪತ್ನಿಯ ಮಗ ಬಾಲಕೃಷ್ಣ ಜತೆ ಸೇರಿ ಹಲ್ಲೆ ಮಾಡಿರುವುದು ಪ್ರಾಥಮಿಕ ತನಿಖೆಯಿಂದ ಬಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರೋಬೋಟ್ ಸಂಶೋಧನೆ‌ ಬಳಿಕ ಇದೀಗ ವೇಸ್ಟ್‌ ನೀರನ್ನು ಬಳಸಿ ಮಂಡ್ಯದ ರೈತ ವಿಜ್ಞಾನಿಯಿಂದ ವಿದ್ಯುತ್‌ ಉತ್ಪಾದನೆ!

ಗಾಯಾಳುವನ್ನು ಬಿಜಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿಗಳ ಪತ್ತೆಗಾಗಿ ಗ್ರಾಮಸ್ಥರು ಕತ್ತಲೆಯಲ್ಲಿಯೇ ಗಿಡ-ಗಂಟಿಗಳ ಪೊದೆಗಳಲ್ಲಿ ಹುಡುಕುತ್ತಿರುವ ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು, ಕಾರನ್ನು ಪರಿಶೀಲಿಸಿದಾಗ ಆರೋಪಿಗಳಿಗೆ ಸಂಬಂಧಿಸಿದ ಕೆಲವು ದಾಖಲೆಗಳು ಸಿಕ್ಕಿವೆ. ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಬೆಳ್ಳೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ