ಆ್ಯಪ್ನಗರ

‘ಕೆ.ಆರ್.ಪೇಟೆಯನ್ನು ಕಾಮಾಟಿಪುರ ಮಾಡ್ತಾರೆ’: ಡಿ.ಸಿ.ತಮ್ಮಣ್ಣ ಹೇಳಿಕೆಗೆ ನಾರಾಯಣಗೌಡ ಕೆಂಡಾಮಂಡಲ

'ತಮ್ಮಣ್ಣ ಮಹಿಳೆಯರ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಜೆಡಿಎಸ್ ಪ್ರಚಾರ ಸಭೆಯಲ್ಲಿ ಈ ವ್ಯಕ್ತಿ ಆಡಿರುವ ಮಾತುಗಳು, ಮನಸ್ಸಿನಲ್ಲಿರುವ ಭಾವನೆಗಳನ್ನು ಗಮನಿಸಿದರೆ ಈತ ಸಣ್ಣತನದ ಮನುಷ್ಯ ಎಂಬುದು ಗೊತ್ತಾಗುತ್ತದೆ.' - ನಾರಾಯಣಸ್ವಾಮಿ

Vijaya Karnataka Web 29 Nov 2019, 9:32 pm
ಕೆ. ಆರ್. ಪೇಟೆ (ಮಂಡ್ಯ): ಬಿಜೆಪಿ ಅಭ್ಯರ್ಥಿ, ಅನರ್ಹ ಶಾಸಕ ನಾರಾಯಣ ಗೌಡ ಅವರು ಕೆ. ಆರ್. ಪೇಟೆಯನ್ನು ಮುಂಬೈನ ಕಾಮಾಟಿಪುರ ಮಾಡ್ತಾರೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ ಜೆಡಿಎಸ್ ಮುಖಂಡ, ಮಾಜಿ ಸಚಿವ ಡಿ. ಸಿ. ತಮ್ಮಣ್ಣ ವಿರುದ್ಧ ನಾರಾಯಣ ಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಮ್ಮಣ್ಣ ಅವರಿಗೆ ಮಾನ ಮರ್ಯಾದೆ ಇದ್ದರೆ ತಾಲ್ಲೂಕಿನ ಮಹಿಳೆಯರ ಕ್ಷಮೆ ಕೇಳಬೇಕು ಎಂದು ನಾರಾಯಣಗೌಡ ಎಚ್ಚರಿಕೆ ನೀಡಿದ್ದಾರೆ.
Vijaya Karnataka Web mandya kr pet bjp candidate narayana gowda takes on jds leader dc tammanna
‘ಕೆ.ಆರ್.ಪೇಟೆಯನ್ನು ಕಾಮಾಟಿಪುರ ಮಾಡ್ತಾರೆ’: ಡಿ.ಸಿ.ತಮ್ಮಣ್ಣ ಹೇಳಿಕೆಗೆ ನಾರಾಯಣಗೌಡ ಕೆಂಡಾಮಂಡಲ


ಮಾಜಿ ಸಚಿವ, ಶಾಸಕ ಡಿ.ಸಿ.ತಮ್ಮಣ್ಣ ಅವರಿಗೇ ಮುಂಬಯಿ ಮಹಾನಗರದ ಕಾಮಾಟಿಪುರದ ನಂಟಿದೆ ಎಂದು ತಿರುಗೇಟು ನೀಡಿದ ನಾರಾಯಣಗೌಡ, ನಾನು ಮುಂಬೈ ಮಹಾನಗರದಲ್ಲಿಯೇ ವಾಸವಾಗಿದ್ದರೂ ಕಾಮಾಟಿಪುರ ಪ್ರದೇಶವನ್ನು ನೋಡಿಲ್ಲ ಎಂದರು. ಶಾಸಕರಾದ ತಮ್ಮಣ್ಣ ನನ್ನ ಬಗ್ಗೆ, ತಾಲ್ಲೂಕಿನ ಮಹಿಳೆಯರ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಅವರ ಬಗ್ಗೆ ನನಗೆ ಪೂಜ್ಯ ಭಾವನೆಯಿತ್ತು. ಆದರೆ ಜೆಡಿಎಸ್ ಪ್ರಚಾರ ಸಭೆಯಲ್ಲಿ ಈ ವ್ಯಕ್ತಿ ಆಡಿರುವ ಮಾತುಗಳು, ಮನಸ್ಸಿನಲ್ಲಿರುವ ಭಾವನೆಗಳನ್ನು ಗಮನಿಸಿದರೆ ಈತ ಸಣ್ಣತನದ ಮನುಷ್ಯ ಎಂಬುದು ಗೊತ್ತಾಗುತ್ತದೆ. ಎಂದು ಕಿಡಿಕಾರಿದ್ದಾರೆ. ತಮ್ಮಣ್ಣನಿಗೆ ಮುಂಬೈನ ಕಾಮಾಟಿಪುರದ ನಂಟು ಹಾಗೂ ಒಡನಾಟವಿದೆ ಎಂಬುದು ಅವರ ಹೇಳಿಕೆಯಿಂದಲೇ ಸ್ಪಷ್ಟವಾಗಿ ಗೊತ್ತಾಗುತ್ತಿದೆ ಎಂದು ನಾರಾಯಣಗೌಡ ಆಕ್ರೋಶ ವ್ಯಕ್ತಪಡಿಸಿದರು. ತಮ್ಮಣ್ಣ ಅವರು ಈ ಕೂಡಲೇ ಕೆ. ಆರ್. ಪೇಟೆ ತಾಲ್ಲೂಕಿನ ಮಹಿಳೆಯರ ಕ್ಷಮೆ ಕೇಳಬೇಕು ಎಂದು ನಾರಾಯಣಗೌಡ ಆಗ್ರಹಿಸಿದರು.

ನಾರಾಯಣಗೌಡ ಕೆ.ಆರ್.ಪೇಟೆಯನ್ನು ಮುಂಬೈ ಮಹಾನಗರದ ಕಾಮಾಟಿಪುರವನ್ನಾಗಿ ಮಾಡ್ತಾನೆ ಎಂದು ಲೇವಡಿ ಮಾಡಿದ್ದ ಡಿ. ಸಿ. ತಮ್ಮಣ್ಣ, ಮುಂಬೈವಾಲನ ಬಗ್ಗೆ ಎಚ್ಚರವಾಗಿರಿ ಎಂದು ಕರೆ ನೀಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ನಾರಾಯಣ ಗೌಡ, ತಮ್ಮಣ್ಣ ಅವರ ಅಳಿಯ ಡಾ. ರಮೇಶ್ ಮುಂಬೈಗೆ ಬಂದಾಗಲೆಲ್ಲಾ ನನ್ನ ಹೋಟೆಲ್‌ನಲ್ಲಿಯೇ ಉಳಿಯುತ್ತಾರೆ. ಅವರನ್ನು ಕೇಳಿ ವಿಚಾರಿಸಿ ನನ್ನ ಬಗ್ಗೆ ಮಾಹಿತಿ ತಿಳಿದುಕೊಳ್ಳಲಿ ಎಂದು ನಾರಾಯಣಗೌಡ ಹೇಳಿದ್ದಾರೆ. ಲೋಕಸಭಾ ಚುನಾವಣೆ ವೇಳೆ ಸುಮಲತಾ ಅವರ ಬಗ್ಗೆ ಮಾತಾಡಿ ಗೌರವ ಕಳೆದುಕೊಂಡ ತಮ್ಮಣ್ಣ, ಕೆ.ಆರ್.ಪೇಟೆ ತಾಲ್ಲೂಕಿನ ಜನತೆಯ ಮುಂದೆ ಮರ್ಯಾದೆ ಕಳೆದುಕೊಳ್ತಾರೆ ಎಂದು ಎಚ್ಚರಿಕೆ ನೀಡಿದರು.

ಕೆ.ಆರ್. ಪೇಟೆ ಎಲೆಕ್ಷನ್ ಅಖಾಡದಲ್ಲಿ ಮತ್ತೆ ಅತ್ತ ಕುಮಾರಣ್ಣ..! ಮಗನ ಸೋಲು ನೆನೆದು ಕಣ್ಣೀರು

ಕುಮಾರಸ್ವಾಮಿ ಕಣ್ಣೀರಿಗೆ ನಾರಾಯಣ ಸ್ವಾಮಿ ವ್ಯಂಗ್ಯ

ಜೆಡಿಎಸ್‌ನಲ್ಲಿ ಅಷ್ಟು ನೋವು ಕೊಟ್ರೂ ನಾನೇ ಕಣ್ಣೀರಾಕಿಲ್ಲ, ಇವರು ಅದ್ಯಾಕೆ ಕಣ್ಣೀರು ಹಾಕ್ತಾರೆ ಎಂದು ಎಚ್ಡಿಕೆ ಕಣ್ಣೀರಿಗೆ ನಾರಾಯಣಗೌಡ ವ್ಯಂಗ್ಯವಾಡಿದ್ದಾರೆ. ಕುಮಾರಸ್ವಾಮಿ ಅವರು ಅಳುವಂಥಾ ಪರಿಸ್ಥಿತಿ ಏನಾಗಿದೆ? ಮಗ ಸೋತ ಅನ್ನೋದು ಬಿಟ್ಟರೆ ಇನ್ಯಾವ ಚಿಂತೆಯೂ ಇಲ್ಲ ಎಂದ ನಾರಾಯಣ ಗೌಡ, ನಮ್ಮ ತಾಲೂಕನ್ನು ಚೆನ್ನಾಗಿ ನೋಡಿಕೊಂಡಿದ್ದರೆ ನಾನ್ಯಾಕೆ ರಾಜೀನಾಮೆ ತೀರ್ಮಾನ ತೆಗೆದುಕೊಳ್ತಿದ್ದೆ ಎಂದು ತಮ್ಮನ್ನು ತಾವು ಸಮರ್ಥಿಸಿಕೊಂಡಿದ್ದಾರೆ.

ಧರ್ಮಸ್ಥಳದಲ್ಲಿ ಆಣೆ ಪ್ರಮಾಣಕ್ಕೂ ರೆಡಿ!

ಅನರ್ಹನ ಡೀಲ್ ಆಡಿಯೋ, ವಿಡಿಯೋ ಪೆನ್ ಡ್ರೈವ್ ಪ್ರದರ್ಶನ ವಿಚಾರಕ್ಕೆ ಸಂಬಂಧಿಸಿದಂತೆ ಎಚ್ಡಿಕೆ ಸವಾಲಿಗೆ ಜವಾಬ್ ನೀಡಿದ ನಾರಾಯಣಸ್ವಾಮಿ, ಆಣೆ-ಪ್ರಮಾಣಕ್ಕೂ ಸಿದ್ಧ ಎಂದಿದ್ದಾರೆ. ಅವರು ಮೊದಲು ಧರ್ಮಸ್ಥಳಕ್ಕೆ ಹೋಗಿ ಕೂರಲಿ, ನಾನೂ ಹೋಗ್ತೀನಿ ಎಂದಿದ್ದಾರೆ. ಹೀಗೇ ಮಾಡಿ ತಮ್ಮ ಮಗ ನಿಖಿಲ್ ಕುಮಾರಸ್ವಾಮಿಯನ್ನು ತೆಗೆದ್ರು ಎಂದು ನಾರಾಯಣ ಸ್ವಾಮಿ ತಿರುಗೇಟು ನೀಡಿದ್ದಾರೆ.

'ಅನರ್ಹ'ರ ವಿರುದ್ಧ ಅಬ್ಬರಿಸಿ ಬೊಬ್ಬಿರಿದ ಎಚ್ಡಿಕೆ! ದೋಸ್ತಿ ಸರ್ಕಾರ ಬೀಳಿಸಿದವರನ್ನ ಸೋಲಿಸೋದೇ ಗುರಿಯಂತೆ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ