ಆ್ಯಪ್ನಗರ

ಸ್ಥಳೀಯ ಸಂಸ್ಥೆಗಳ ಚುನಾವಣೆ: 455 ಮಂದಿ ಕಣದಲ್ಲಿ

ವಿಕ ಸುದ್ದಿಲೋಕ ಮಂಡ್ಯ ಜಿಲ್ಲೆಯಲ್ಲಿ ನಡೆಯುತ್ತಿರುವ 5 ನಗರ ಸ್ಥಳೀಯ ಸಂಸ್ಥೆಗಳ ಒಟ್ಟು 117 ವಾರ್ಡ್‌ಗಳ ಚುನಾವಣಾ ಕಣದಲ್ಲಿ ಬರೋಬ್ಬರಿ 455 ಮಂದಿ ಉಳಿದಿದ್ದಾರೆ...

Vijaya Karnataka 23 Aug 2018, 5:00 am
ಮಂಡ್ಯ: ಜಿಲ್ಲೆಯಲ್ಲಿ ನಡೆಯುತ್ತಿರುವ 5 ನಗರ ಸ್ಥಳೀಯ ಸಂಸ್ಥೆಗಳ ಒಟ್ಟು 117 ವಾರ್ಡ್‌ಗಳ ಚುನಾವಣಾ ಕಣದಲ್ಲಿ ಬರೋಬ್ಬರಿ 455 ಮಂದಿ ಉಳಿದಿದ್ದಾರೆ. ಸಲ್ಲಿಕೆಯಾಗಿದ್ದ 505 ನಾಮಪತ್ರಗಳಲ್ಲಿ 31 ಜನರ 50 ನಾಮಪತ್ರಗಳು ತಿರಸ್ಕೃತಗೊಂಡಿವೆ.
Vijaya Karnataka Web mandya local bodies poll 455 candidates final list
ಸ್ಥಳೀಯ ಸಂಸ್ಥೆಗಳ ಚುನಾವಣೆ: 455 ಮಂದಿ ಕಣದಲ್ಲಿ


ಮಂಡ್ಯ ನಗರಸಭೆಯ 35 ವಾರ್ಡ್‌ಗಳಿಗೆ 169, ಮದ್ದೂರು ಪುರಸಭೆಯ 23 ವಾರ್ಡ್‌ಗಳಿಗೆ 85, ಪಾಂಡವಪುರ ಪುರಸಭೆಯ 23 ವಾರ್ಡ್‌ಗಳಿಗೆ 79, ನಾಗಮಂಗಲ ಪುರಸಭೆಯ 23 ವಾರ್ಡ್‌ಗಳಿಗೆ 71 ಹಾಗೂ ನಾಗಮಂಗಲ ತಾಲೂಕು ಬೆಳ್ಳೂರು ಪಟ್ಟಣ ಪಂಚಾಯಿತಿಯ 13 ವಾರ್ಡ್‌ಗಳಿಗೆ 51 ಮಂದಿ ಸೇರಿದಂತೆ ಒಟ್ಟು 455 ಮಂದಿ ಚುನಾವಣಾ ಅಖಾಡದಲ್ಲಿದ್ದಾರೆ.

5 ನಗರ ಸ್ಥಳೀಯ ಸಂಸ್ತೇಗಳ ಒಟ್ಟು 117 ಸ್ಥಾನಗಳಿಗೆ ಕಾಂಗ್ರೆಸ್‌ನಿಂದ 101, ಬಿಜೆಪಿಯಿಂದ 79 ಹಾಗೂ ಜೆಡಿಎಸ್‌ನಿಂದ 118 ಮಂದಿ ಸ್ಪರ್ಧಿಸಿದ್ದಾರೆ. ಸೋಮವಾರ ನಡೆದ ನಾಮಪತ್ರಗಳ ಪರಿಷ್ಕೃರಣೆಯಲ್ಲಿ 31 ಮಂದಿಯ 50 ನಾಮಪತ್ರಗಳು ತಿರಸ್ಕೃತಗೊಂಡಿವೆ. ಇದರಲ್ಲಿ 3ನೇ ವಾರ್ಡ್‌ನಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಉಮೇದುವಾರಿಕೆ ಸಲ್ಲಿಸಿದ್ದ ಅಲ್ತಾಫ್‌ ನಾಮಪತ್ರದಲ್ಲಿ ವಾರ್ಡ್‌ನ ಮತದಾರನಲ್ಲದ ವ್ಯಕ್ತಿ ಸೂಚಕನಾಗಿ ಸಹಿ ಹಾಕಿರುವುರಿಂದ ಅವರ ನಾಮಪತ್ರ ಅಸಿಂಧುಗೊಂಡಿದೆ.

ಉಳಿದಂತೆ ಮಂಡ್ಯ ನಗರಸಭೆಯಲ್ಲಿ 7, ಮದ್ದೂರು ಪುರಸಭೆಯಲ್ಲಿ 6, ಪಾಂಡವಪುರ ಪುರಸಭೆಯಲ್ಲಿ 17, ನಾಗಮಂಗಲ ಪುರಸಭೆಯಲ್ಲಿ 16 ಹಾಗೂ ಬೆಳ್ಳೂರು ಪಟ್ಟಣ ಪಂಚಾಯಿತಿಯಲ್ಲಿ 4 ನಾಮಪತ್ರಗಳು ಸೇರಿದಂತೆ 50 ಉಮೇದುವಾರಿಕೆ ತಿರಸ್ಕೃತಗೊಂಡಿವೆ. ಅದೇ ರೀತಿಯ ನಾಮಪತ್ರ ಸಲ್ಲಿಸಿದ ವ್ಯಕ್ತಿಗಳ ಅಂಕಿಅಂಶದ ಪ್ರಕಾರ ಮಂಡ್ಯ ನಗರಸಭೆಯಲ್ಲಿ 6, ಮದ್ದೂರಿನಲ್ಲಿ 2, ಪಾಂಡವಪುರದಲ್ಲಿ 12, ನಾಗಮಂಗಲದಲ್ಲಿ 7 ಹಾಗೂ ಬೆಳ್ಳೂರಿನಲ್ಲಿ 4 ಮಂದಿ ಸೇರಿದಂತೆ ಒಟ್ಟು 31 ಮಂದಿಯ ನಾಮಪತ್ರಗಳು ತಿರಸ್ಕೃತಗೊಂಡಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ