ಆ್ಯಪ್ನಗರ

ರಾಮೇನಹಳ್ಳಿ ಬಳಿ ಭೀಕರ ರಸ್ತೆ ಅಫಘಾತ , ಸಾವಿನ ಸಂಖ್ಯೆ 8ಕ್ಕೆ ಏರಿಕೆ

ಜೇವರ್ಗಿ- ಚಾಮರಾಜನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುರುವಾರ ರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಎಂಟಕ್ಕೆ ಏರಿಕೆ ಆಗಿದೆ. ಕ್ರೂಸರ್ ಮತ್ತು‌ ಟಾಟಾ ಸುಮೋದ ನಡುವೆ ಮುಖಾಮುಖಿ ಡಿಕ್ಕಿಯಾಗಿ ಈ ದುರಂತ ನಡೆದಿದೆ.

Vijaya Karnataka Web 22 Nov 2019, 1:09 pm
ಮಂಡ್ಯ: ನಾಗಮಂಗಲ ತಾಲೂಕಿನ ರಾಮೇನಹಳ್ಳಿ ಬಳಿ ಜೇವರ್ಗಿ- ಚಾಮರಾಜನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುರುವಾರ ರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ.
Vijaya Karnataka Web mandya


ಗುರುವಾರ ರಾತ್ರಿ ಆರು ಜನ ಸಾವನ್ನಪ್ಪಿದ್ದರು. ಶುಕ್ರವಾರ ಮುಂಜಾನೆ ಅಕ್ಬರ್ ಬಿನ್ ನಸ್ರೀನ್ ಪಾಷ, ಮತ್ತು ಸಾಯೀದಾ ಕೋಂ ಕಲೀಂಪಾಷ ಅವರು ಚಿಕಿತ್ಸೆ ಫಲಿಸದೆ ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ನಾಗಮಂಗಲ ಪಟ್ಟಣ ನಿವಾಸಿಗಳಾದ ಬಾಕ್ರ ಶರೀಪ್‌ (59), ತಾಹಿರ್‌ (30), ನೌಸದ್‌ (45), ಅಸೀನ್‌ ತಾಜ್‌ (50), ಮಹಬೂಬ್‌ ಖಾನ್‌ (50), ಮಕ್ಸೂದ್‌ (35) ಗುರುವಾರ ರಾತ್ರಿ ಮೃತರಾದ ದುರ್ದೈವಿಗಳು. ಗಾಯಾಳುಗಳಾದ ಅಜ್ಮದ್‌ ಪಾಷ (50),ಅಜ್ಮದ್‌ ಅಲೀ ಖಾನ್‌ (40), ಮಹಮ್ಮದ್‌ ಸಾದಿಕ್‌ (40), ಸಾಯೀದ್‌ ಖಾನ್‌ (54) ಅವರನ್ನು ತಾಲೂಕಿನ ಬಿ.ಜಿ.ನಗರದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಸ್ನೇಹಿತರ ಮನೆಯಲ್ಲಿ ನಡೆಯುತ್ತಿದ್ದ ಸಮಾರಂಭಕ್ಕಾಗಿ ಕುಣಿಗಲ್‌ಗೆ ಟಾಟಾ ಸುಮೋ ವಾಹನದಲ್ಲಿ ಹೋಗುತ್ತಿದ್ದ ಇವರಿಗೆ ರಾಮೇನಹಳ್ಳಿ ಎದುರಾದ 407 ಗೂಡ್ಸ್‌ ಟೆಂಪೊ ಮುಖಾಮುಖಿ ಡಿಕ್ಕಿ ಹೊಡೆದಿದೆ. ಈ ವೇಳೆ ತೀವ್ರ ಗಾಯಗೊಂಡಿದ್ದ ನಾಲ್ವರು ಸ್ಥಳದಲ್ಲೇ ಮೃತಪಟ್ಟರೆ, ಮತ್ತಿಬ್ಬರು ಬೆಳ್ಳೂರು ಕ್ರಾಸ್‌ ಆದಿಚುಂಚನಗಿರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

ಟಾಟಾ ಸುಮೋದಲ್ಲಿಇದ್ದ ಇಬ್ಬರು ಹಾಗೂ ಗೂಡ್ಸ್‌ ವಾಹನದ ಚಾಲಕ ತೀವ್ರವಾಗಿ ಗಾಯಗೊಂಡಿದ್ದಾರೆ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಪರಶುರಾಮ್‌ ಹಾಗೂ ಜಿಲ್ಲಾ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಡಾ.ವಿ.ಜೆ.ಶೋಭಾರಾಣಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಬೆಳ್ಳೂರು ಪೊಲೀಸ್‌ ಠಾಣೆಯಲ್ಲಿಪ್ರಕರಣ ದಾಖಲಾಗಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ