ಆ್ಯಪ್ನಗರ

ಕೊಡಗಿಗೆ ತೆರಳಿದ ಮಂಡ್ಯದ ಗೃಹರಕ್ಷಕ ದಳದ ಸಿಬ್ಬಂದಿ

ವಿಕ ಸುದ್ದಿಲೋಕ ಮಂಡ್ಯ ನೆರೆ ಹಾವಳಿಯಿಂದ ಸಂಕಷ್ಟಕ್ಕೆ ಸಿಲುಕಿರುವ ಜನರ ರಕ್ಷಣೆ ಮತ್ತು ನೆರವಾಗಿ ಮಂಡ್ಯದಿಂದ 100 ಮಂದಿ ಗೃಹರಕ್ಷಕ ದಳದ ಸಿಬ್ಬಂದಿ ಶನಿವಾರ ಕೊಡಗಿಗೆ ...

Vijaya Karnataka 19 Aug 2018, 5:00 am
ಮಂಡ್ಯ: ನೆರೆ ಹಾವಳಿಯಿಂದ ಸಂಕಷ್ಟಕ್ಕೆ ಸಿಲುಕಿರುವ ಜನರ ರಕ್ಷಣೆ ಮತ್ತು ನೆರವಾಗಿ ಮಂಡ್ಯದಿಂದ 100 ಮಂದಿ ಗೃಹರಕ್ಷಕ ದಳದ ಸಿಬ್ಬಂದಿ ಶನಿವಾರ ಕೊಡಗಿಗೆ ತೆರಳಿದರು.
Vijaya Karnataka Web mandyas home guards staff went to kodagu
ಕೊಡಗಿಗೆ ತೆರಳಿದ ಮಂಡ್ಯದ ಗೃಹರಕ್ಷಕ ದಳದ ಸಿಬ್ಬಂದಿ


ಗೃಹ ರಕ್ಷಕ ದಳದ ಸಮಾದೇಷ್ಟ ಕೆ.ಎಂ.ಮಹೇಶ್‌ ಅವರು ತಾವೂ ಸದಸ್ಯರಾಗಿರುವ ರೋಟರಿ ಸಕ್ಕರೆನಾಡು ಮಂಡ್ಯ ತಂಡದಿಂದ ಕೊಡಗಿನ ಪ್ರವಾಹ ಸಂತ್ರಸ್ತರಿಗೆ ಬ್ರೇಡ್‌, ಬನ್‌, ನೀರಿನ ಬಾಟಲ್‌, ಬಿಸ್ಕೆತ್‌, ಯುಎಚ್‌ಟಿ ಹಾಲು, ರಸ್ಕ್‌, ಗ್ಲುಕೋಸ್‌ ಹಾಗೂ ಚಪಾತಿಯನ್ನು ಸಂಗ್ರಹಿಸಿತ್ತು. ಅದನ್ನು ಗೃಹರಕ್ಷಕ ದಳದ ಸಿಬ್ಬಂದಿ ತಾವು ಪ್ರಯಾಣಿಸುತ್ತಿದ್ದ ಬಸ್ಸಿನಲ್ಲೇ ತೆಗೆದುಕೊಂಡು ಕೊಡಗಿನತ್ತ ಹೊರಟರು.
'ನಾವು ನಿಮ್ಮೊಂದಿಗಿದ್ದೇವೆ: ಮಳೆಯಿಂದಾಗಿರುವ ತೊಂದರೆ, ಸಂಕಷ್ಟಕ್ಕೆ ಸಿಲುಕಿರುವ ಕೊಡಗಿನವರೊಂದಿಗೆ ನಾವಿರುತ್ತೇವೆ. ನಿಮ್ಮೆಲ್ಲಾ ಕಷ್ಟ-ಸುಖಗಳಿಗೆ ಸ್ಪಂದಿಸುತ್ತೇವೆ. ಧೈರ್ಯವಾಗಿರಿ, ಯಾವುದಕ್ಕೂ ಹೆದರಬೇಡಿ ಎಂದು ಜಿಲ್ಲಾ ಉಸ್ತುವಾರಿ ಮತ್ತು ಸಣ್ಣ ನೀರಾವರಿ ಸಚಿವ ಸಿ.ಎಸ್‌.ಪುಟ್ಟರಾಜು ಅವರು ಕೊಡಗಿನ ಜನರಿಗೆ ಧೈರ್ಯ ತುಂಬಿದ್ದಾರೆ.

ಕೊಡಗಿಗೆ ತೆರಳಿ ಅಲ್ಲಿನ ಜನರ ಕಷ್ಟಗಳಿಗೆ ಸ್ಪಂದಿಸುವ ಕೆಲಸವನ್ನು ಮಂಡ್ಯದ ಜನರು ಮಾಡುತ್ತಾರೆ. ಇಡೀ ರಾಜ್ಯದ ಜನರು, ವಿಶೇಷವಾಗಿ ಮಂಡ್ಯದ ಜನರು ನಿಮ್ಮೊಂದಿಗೆ ಇರುತ್ತೇವೆ. ಆಹಾರ, ಕುಡಿಯುವ ನೀರು, ಬಟ್ಟೆ ಸೇರಿದಂತೆ ಅಗತ್ಯ ವಸ್ತುಗಳ ವ್ಯವಸ್ಥೆ ಮಾಡಲಾಗುತ್ತದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ಸಂದೇಶದ ಮೂಲಕ ಭರವಸೆ ನೀಡಿದ್ದಾರೆ.

ಮಂಡ್ಯ ಜಿಲ್ಲೆಯಿಂದ ಕೊಡಗಿಗೆ ಎಲ್ಲ ರೀತಿಯ ನೆರವನ್ನು ನೀಡಲಾಗುವುದು. ಯಾವುದೇ ಕಾರಣಕ್ಕೂ ಕೊಡಗಿನ ಜನರು ಧೃತಿಗೆಡಬಾರದು. ಮಂಡ್ಯ ಜಿಲ್ಲೆಯ ಉಸ್ತುವಾರಿ ಸಚಿವನಾಗಿ ಮಂಡ್ಯದ ಪರವಾಗಿ ತಾವು ನಿಮ್ಮ ನೆರವಿಗಿದ್ದೇನೆ ಎಂದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ