ಆ್ಯಪ್ನಗರ

ಮನ್‌ಮುಲ್‌ ಜೆಡಿಎಸ್‌ ತೆಕ್ಕೆಗೆ

ಮಂಡ್ಯ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ(ಮನ್‌ ಮುಲ…) ಆಡಳಿತ ಮಂಡಳಿಯ 12 ನಿರ್ದೇಶಕ ಸ್ಥಾನಕ್ಕೆ ಭಾನುವಾರ ನಿಗದಿಯಾಗಿದ್ದ ಚುನಾವಣೆಯಲ್ಲಿಜೆಡಿಎಸ್‌ ಬೆಂಬಲಿತ ಅಭ್ಯರ್ಥಿಗಳು 8 ಸ್ಥಾನಗಳಲ್ಲಿಗೆಲುವಿನ ನಗೆಬೀರಿದ್ದು, ಮನ್‌ಮುಲ್‌ ದಳದ ತೆಕ್ಕೆಗೆ ಜಾರಿದೆ.

Vijaya Karnataka 9 Sep 2019, 5:00 am
ಮಂಡ್ಯ: ಮಂಡ್ಯ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ(ಮನ್‌ ಮುಲ…) ಆಡಳಿತ ಮಂಡಳಿಯ 12 ನಿರ್ದೇಶಕ ಸ್ಥಾನಕ್ಕೆ ಭಾನುವಾರ ನಿಗದಿಯಾಗಿದ್ದ ಚುನಾವಣೆಯಲ್ಲಿಜೆಡಿಎಸ್‌ ಬೆಂಬಲಿತ ಅಭ್ಯರ್ಥಿಗಳು 8 ಸ್ಥಾನಗಳಲ್ಲಿಗೆಲುವಿನ ನಗೆಬೀರಿದ್ದು, ಮನ್‌ಮುಲ್‌ ದಳದ ತೆಕ್ಕೆಗೆ ಜಾರಿದೆ.
Vijaya Karnataka Web manmul embraces jds
ಮನ್‌ಮುಲ್‌ ಜೆಡಿಎಸ್‌ ತೆಕ್ಕೆಗೆ


ಕಾಂಗ್ರೆಸ್‌ 2 ಸ್ಥಾನ, ಬಿಜೆಪಿ ಹಾಗೂ ಪಕ್ಷೇತರರು ತಲಾ 1ಸ್ಥಾನದಲ್ಲಿಗೆಲುವು ಸಾಧಿಸಿದ್ದಾರೆ. ಜಿಲ್ಲೆಯ 7ತಾಲೂಕಿನಿಂದ ಒಟ್ಟು 25 ಮಂದಿ ಸ್ಪರ್ಧಿಸಿದ್ದರು.

ಶ್ರೀರಂಗಪಟ್ಟಣ ಕ್ಷೇತ್ರದ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿ ಬೋರೇಗೌಡ, ಪಾಂಡವಪುರ ಕ್ಷೇತ್ರದ ಜೆಡಿಎಸ್‌ ಬೆಂಬಲಿತ ಅಭ್ಯರ್ಥಿ ರಾಮಚಂದ್ರ, ಮಳವಳ್ಳಿ ಕ್ಷೇತ್ರ ಜೆಡಿಎಸ್‌ ಬೆಂಬಲಿತ ಅಭ್ಯರ್ಥಿ ವಿಶ್ವನಾಥ್‌, ನಾಗಮಂಗಲ ಕ್ಷೇತ್ರದ ಜೆಡಿಎಸ್‌ ಬೆಂಬಲಿತ ಅಭ್ಯರ್ಥಿಗಳಾದ ನೆಲ್ಲಿಗೆರೆ ಬಾಲು ಮತ್ತು ರವಿ, ಮದ್ದೂರು ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಎಸ್‌.ಪಿ.ಸ್ವಾಮಿ ಮತ್ತು ಬಿಜೆಪಿ ಬೆಂಬಲಿತ ಅಭ್ಯರ್ಥಿ ರೂಪಾ, ಕೆ.ಆರ್‌.ಪೇಟೆ ಕ್ಷೇತ್ರದ ಜೆಡಿಎಸ್‌ ಬೆಂಬಲಿತ ಅಭ್ಯರ್ಥಿ ಎಚ್‌.ಟಿ.ಮಂಜು ಮತ್ತು ಪಕ್ಷೇತರ ಅಭ್ಯರ್ಥಿ ರವಿ, ಮಂಡ್ಯ ಕ್ಷೇತ್ರದ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿ ಯು.ಸಿ.ಶಿವಕುಮಾರ್‌, ಜೆಡಿಎಸ್‌ ಬೆಂಬಲಿತ ಅಭ್ಯರ್ಥಿಗಳಾದ ರಘುನಂದನ್‌, ರಾಮಚಂದ್ರ ಗೆಲವು ಸಾಧಿಸಿದರು.

ಮದ್ದೂರು ಕ್ಷೇತ್ರದಿಂದ ಸ್ಪರ್ಧಿಸಿದ್ದ ಈ ಹಿಂದಿನ ಅಧ್ಯಕ್ಷ ಕದಲೂರು ರಾಮಕೃಷ್ಣ ಅವರು ಸೋಲು ಅನುಭವಿಸಿದರು. ಜಿಲ್ಲೆಯಲ್ಲಿಸ್ಪರ್ಧಿಸಿದ್ದ ಮೂರು ಜನ ಮಹಿಳೆಯರಲ್ಲಿಮದ್ದೂರು ಕ್ಷೇತ್ರದ ಬಿಜೆಪಿ ಬೆಂಬಲಿತ ಅಭ್ಯರ್ಥಿ ರೂಪಾ ಅವರು ಗೆಲುವು ಸಾಧಿಸಿದ್ದಾರೆ. ಬಿಜೆಪಿಯು ಮನ್‌ಮುಲ್‌ ಚುನಾವಣೆಯಲ್ಲಿಒಂದು ಸ್ಥಾನ ಗೆಲ್ಲುವ ಮೂಲಕ ಜೆಡಿಎಸ್‌ ಭದ್ರಕೋಟೆಯಲ್ಲಿಹಾಗೂ ಕಾಂಗ್ರೆಸ್‌ನ ನಡುವೆ ಅರಳಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ