ಆ್ಯಪ್ನಗರ

ಮೇಲುಕೋಟೆ: ಆಷಾಢ ಜಾತ್ರೆಯ ಧ್ವಜಾರೋಹಣ

ಮೇಲುಕೋಟೆ: ಚೆಲುವನಾರಾಯಣಸ್ವಾಮಿಯವರ ಆಷಾಢ ಜಾತ್ರೆಯ ಧ್ವಜಾರೋಹಣ ಭಾನುವಾರ ಸಂಭ್ರಮದೊಂದಿಗೆ ನೆರವೇರಿತು.

Vijaya Karnataka 30 Jul 2018, 5:00 am
ಮೇಲುಕೋಟೆ: ಚೆಲುವನಾರಾಯಣಸ್ವಾಮಿಯವರ ಆಷಾಢ ಜಾತ್ರೆಯ ಧ್ವಜಾರೋಹಣ ಭಾನುವಾರ ಸಂಭ್ರಮದೊಂದಿಗೆ ನೆರವೇರಿತು.
Vijaya Karnataka Web melukote flag of the ashram
ಮೇಲುಕೋಟೆ: ಆಷಾಢ ಜಾತ್ರೆಯ ಧ್ವಜಾರೋಹಣ


ಗರುಡಧ್ವಜವನ್ನು ಪ್ರತಿಷ್ಠಾಪನೆ ಮಾಡಿ ಮಹಾವಿಷ್ಣುವಿನ ವಾಹನವಾದ ಗರುಡದೇವನನ್ನು ಆರಾಧಿಸಿ ಅಭಿಷೇಕ ನೆರವೇರಿಸಿ ಮುಹೂರ್ತಪಠಣ ಮತ್ತು ವೇದಮಂತ್ರಗಳೊಂದಿಗೆ ಧ್ವಜಾರೋಹಣ ಮಾಡಲಾಯಿತು. ಇದಕ್ಕೂ ಮುನ್ನ ಚೆಲುವನಾರಾಯಣಸ್ವಾಮಗೆ ಗರುಡಪಟದೊಂದಿಗೆ ಮಂಟಪವಾಹನೋತ್ಸವವೂ ವೈಭವದಿಂದ ನೆರವೇರಿತು.

ಹತ್ತು ದಿನ ನಡೆಯುವ ಆಷಾಢಜಾತ್ರಾ ಮಹೋತ್ಸವ ಶ್ರೀ ಕೃಷ್ಣರಾಜಮುಡಿ ಬ್ರಹ್ಮೋತ್ಸವಕ್ಕೆ ದೇವಾನುದೇವತೆಗಳನ್ನು ಆಹ್ವಾನಿಸಲು ಸಾಂಪ್ರದಾಯಿಕ ಪದ್ಧತಿಯನುಸಾರಿ ಮಂತ್ರಗಳ ಮೂಲಕ ಕೋರಿ ಗರುಡದೇವನಿಗೆ ಪೂಜಾನುಷ್ಠಾನ ಕೈಗೊಳ್ಳಲಾಯಿತು.

ಮುಮ್ಮಡಿ ಶ್ರೀ ಕೃಷ್ಣರಾಜಒಡೆಯರ್‌ ಜನ್ಮ ವರ್ಧಂತಿ ನಿಮಿತ್ತ ಮೂಲಮೂರ್ತಿ ಚೆಲ್ವತಿರುನಾರಾಯಣಸ್ವಾಮಿ, ಯೋಗನರಸಿಂಹಸ್ವಾಮಿ, ರಾಮಾನುಜಾಚಾರ್ಯರು ಹಾಗೂ ಯದುಗಿರಿ ನಾಯಕಿ ಅಮ್ಮನವರಿಗೆ ವೇದ ಮಂತ್ರಗಳೊಂದಿಗೆ ಸ್ನಪನ ಪೂರ್ವಕವಾದ ಮಹಾಭಿಷೇಕ ನೆರವೇರಿಸಲಾಯಿತು. ನಾನಾ ಭಾಗಗಳಿಂದ ಆಗಮಿಸಿದ್ದ ಸಹಸ್ರಾರು ಭಕ್ತರು ದೇವರದರ್ಶನ ಮಾಡಿದರು. ಬೆಳಗ್ಗೆ 8ಕ್ಕೆ ಆರಂಭವಾದ ದೇವಾಲಯದ ಧಾರ್ಮಿಕ ಕಾರ್ಯಕ್ರಮಗಳು ಇಡೀ ದಿನ ನಡೆದವು. ಧ್ವಜಾರೋಹಣ ಕಾರ್ಯಕ್ರಮಗಳು ಒಂದು ಗಂಟೆಗೆ ಮುಕ್ತಾಯವಾದ ನಂತರ ಆರಂಭವಾದ ಮಹಾಭಿಷೇಕ ಸಂಜೆ 6ಕ್ಕೆ ಮುಕ್ತಾಯವಾಯಿತು. ರಾತ್ರಿ ಕಲ್ಯಾಣ ನಾಯಕಿ ಮತ್ತು ಚೆಲುವನಾರಾಯಣಸ್ವಾಮಿಗೆ ಕಲ್ಯಾಣೋತ್ಸವ ನೆರವೇರಿತು.

29 ಲಕ್ಷ ರೂ. ಕಾಣಿಕೆ : ಮೇಲುಕೋಟೆ ದೇವಾಲಯದಲ್ಲಿ ಎರಡು ತಿಂಗಳಲ್ಲಿ ಹುಂಡಿಯಲ್ಲಿ 30 ಲಕ್ಷ ರೂ. ಕಾಣಿಕೆ ಸಂಗ್ರಹವಾಗಿದೆ. ಇತ್ತೀಚೆಗೆ ನಡೆಸಿದ ಎಣಿಕೆಯಲ್ಲಿ ಚೆಲುವನಾರಾಯಣಸ್ವಾಮಿ ದೇವಾಲಯದ ಹುಂಡಿಗಳಿಂದ 21,26,915 ಲಕ್ಷ ರೂ. ಮತ್ತು ಯೋಗನರಸಿಂಹಸ್ವಾಮಿ ದೇವಾಲಯದ ಹುಂಡಿಗಳಲ್ಲಿ 8.66.985 ರೂ. ಕಾಣಿಕೆ ಸಂಗ್ರಹವಾಗಿದ್ದು, ಎಣಿಕೆ ಕಾರ್ಯದಲ್ಲಿ ಕಾರ್ಯನಿರ್ವಾಹಕ ಅಧಿಕಾರಿ ನಂಜೇಗೌಡ, ಉಪತಹಸೀಲ್ದಾರ್‌ ರಾಜೇಶ್‌ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ