ಆ್ಯಪ್ನಗರ

ಅಭಿಮಾನಿಗಳ ಬೆಳ್ಳಿ ಕಿರೀಟ ಹರಾಜು ಹಾಕಿ ನೆರೆ ಸಂತ್ರಸ್ತರಿಗೆ ನೀಡಿದ ಸಚಿವ

ವಿಕ ಸುದ್ದಿಲೋಕ ಪಾಂಡವಪುರ ಅಭಿನಂದನಾ ಸಮಾರಂಭದಲ್ಲಿ ಅಭಿಮಾನಿಗಳು ಕೊಟ್ಟ ಬೆಳ್ಳಿ ಕಿರೀಟವನ್ನು ಸ್ಥಳದಲ್ಲೇ ಹರಾಜು ಹಾಕಿ, ಅದರಿಂದ ಬಂದ 58 ಸಾವಿರ ರೂ...

Vijaya Karnataka 7 Sep 2018, 5:00 am
ಪಾಂಡವಪುರ: ಅಭಿನಂದನಾ ಸಮಾರಂಭದಲ್ಲಿ ಅಭಿಮಾನಿಗಳು ಕೊಟ್ಟ ಬೆಳ್ಳಿ ಕಿರೀಟವನ್ನು ಸ್ಥಳದಲ್ಲೇ ಹರಾಜು ಹಾಕಿ, ಅದರಿಂದ ಬಂದ 58 ಸಾವಿರ ರೂ.ಗಳನ್ನು ಕೊಡಗಿನ ನೆರೆ ಸಂತ್ರಸ್ತರಿಗೆ ನೀಡುವ ಮೂಲಕ ಸಣ್ಣ ನೀರಾವರಿ ಸಚಿವ ಸಿ.ಎಸ್‌.ಪುಟ್ಟರಾಜು ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
Vijaya Karnataka Web minister cs puttaraju auction of his silver crown which gave by fans
ಅಭಿಮಾನಿಗಳ ಬೆಳ್ಳಿ ಕಿರೀಟ ಹರಾಜು ಹಾಕಿ ನೆರೆ ಸಂತ್ರಸ್ತರಿಗೆ ನೀಡಿದ ಸಚಿವ


ತಾಲೂಕಿನ ಹುಲ್ಕೆರೆಕೊಪ್ಪಲು ಗ್ರಾಮದಲ್ಲಿ ಬುಧವಾರ ರಾತ್ರಿ ಗ್ರಾಮಸ್ಥರು ಹಾಗೂ ಮಧು ಅಭಿಮಾನಿ ಬಳಗದಿಂದ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅಭಿಮಾನಿಗಳು ಕೊಟ್ಟ ಕಿರೀಟವನ್ನು ಸಚಿವ ಸಿ.ಎಸ್‌.ಪುಟ್ಟರಾಜು ಹರಾಜು ಹಾಕಿದರು.

''ಪಕ್ಕದ ನಮ್ಮ ಕೊಡಗು ಜಿಲ್ಲೆಯ ಜನತೆ ಪ್ರಾಕೃತಿಕ ವಿಕೋಪಕ್ಕೆ ಸಿಲುಕಿ ಮನೆ ಕಳೆದುಕೊಂಡು ಸಂತ್ರಸ್ತರಾಗಿದ್ದಾರೆ. ಇಂತಹ ಸಂದರ್ಭದಲ್ಲಿ ನಾನು ಬೆಳ್ಳಿ ಕಿರೀಟವನ್ನು ಹಾಕಿಕೊಂಡು ಅಭಿನಂದನೆ ಸ್ವೀಕರಿಸುವುದು ಸರಿಯಲ್ಲ. ಗ್ರಾಮಸ್ಥರು ಹಾಗೂ ಮಧು ಅಭಿಮಾನಿಗಳ ಬಗಳಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ. ಆದರೆ, ಕಾರ‍್ಯಕ್ರಮದಲ್ಲಿ ನನಗೆ ನೀಡುತ್ತಿರುವ ಬೆಳ್ಳಿ ಕಿರೀಟವನ್ನು ಹರಾಜು ಹಾಕಿ ಬಂದ ಹಣವನ್ನು ಗ್ರಾಮಸ್ಥರ ಪರವಾಗಿ ಕೊಡಗಿನ ನೆರೆ ಸಂತ್ರಸ್ತರಿಗೆ ನೀಡುತ್ತಿದ್ದೇನೆ'' ಎಂದು ಹೇಳಿದ ಸಚಿವ ಸಿ.ಎಸ್‌.ಪುಟ್ಟರಾಜು ವೇದಿಕೆಯಲ್ಲಿಯೇ ಕಿರೀಟವನ್ನು ಹರಾಜು ಹಾಕಿದರು. ಚಿಕ್ಕಾಡೆ ಜಿ.ಪಂ.ಸದಸ್ಯ ತಿಮ್ಮೇಗೌಡ 58 ಸಾವಿರ ರೂ.ಗೆ ಹರಾಜಿನಲ್ಲಿ ಬೆಳ್ಳಿ ಕಿರೀಟವನ್ನು ಖರೀದಿಸಿದರು. ಈ ಹಣವನ್ನು ಜಿಲ್ಲಾಧಿಕಾರಿ ಮೂಲಕ ಕೊಡಗಿನ ನೆರೆ ಸಂತ್ರಸ್ತರಿಗೆ ವಿತರಿಸಲಾಗುವುದು ಎಂದು ಸಚಿವ ಸಿ.ಎಸ್‌.ಪುಟ್ಟರಾಜು ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ