ಆ್ಯಪ್ನಗರ

24 ಲಕ್ಷ ರೈತರಿಗೆ 15 ಸಾವಿರ ಕೋಟಿ ಸಾಲ ನೀಡುವ ಗುರಿ

ಜನವರಿ, ಫೆಬ್ರವರಿ, ಮಾರ್ಚ್‌ ಸಾಲ ಜಾಸ್ತಿ ಕೇಳಲಿದ್ದಾರೆ. ಎಸ್‌ಸಿ/ಎಸ್‌ಟಿ, ಅಲ್ಪವಧಿ, ದೀರ್ಘಾವಧಿ, ಮಧ್ಯಮಾವಧಿ ಸಾಲ, ಬಡವರು, ಸ್ತ್ರೀಶಕ್ತಿಗೆ ಸಾಲ ನೀಡಬೇಕಾಗಿದ್ದು, ಅವುಗಳ ಬಗ್ಗೆ ಪರಿಶೀಲಿಸಲಾಗುತ್ತಿದೆ

Vijaya Karnataka Web 19 Jan 2021, 10:18 am
ಪಾಂಡವಪುರ: ರಾಜ್ಯದ ಎಲ್ಲ ಡಿಸಿಸಿ ಬ್ಯಾಂಕ್‌ನಿಂದ 24.5 ಲಕ್ಷ ರೈತರಿಗೆ 15,300 ಕೋಟಿ ರೂ. ಸಾಲ ನೀಡಲಾಗುವುದು ಎಂದು ಸಹಕಾರ ಸಚಿವ ಎಸ್‌ ಟಿ ಸೋಮಶೇಖರ್‌ ಹೇಳಿದರು.
Vijaya Karnataka Web ಎಸ್‌ಟಿ ಸೋಮಶೇಖರ್
ಎಸ್‌ಟಿ ಸೋಮಶೇಖರ್


''ಸಾಲ ನೀಡುವ ಯೋಜನೆ ಹಿನ್ನೆಲೆಯಲ್ಲಿ ಡಿಸಿಸಿ ಬ್ಯಾಂಕ್‌ಗಳಿಗೆ ಭೇಟಿಕೊಟ್ಟು ಎಷ್ಟು ಗುರಿ ಸಾಧ್ಯವಾಗಿದೆ. ಇನ್ನೂ ಎಷ್ಟು ಬಾಕಿ ಇದೆ ಎಂಬು ದನ್ನು ಪರಿಶೀಲಿಸಲಾಗುತ್ತಿದೆ. ನೆನ್ನೆಯವರೆಗೆ ಸುಮಾರು 12.5 ಲಕ್ಷ ರೈತರಿಗೆ 12.50 ಸಾವಿರ ಕೋಟಿ ರೂ. ಸಾಲ ನೀಡಲಾಗಿದೆ. ಜನವರಿ, ಫೆಬ್ರವರಿ, ಮಾರ್ಚ್‌ ಸಾಲ ಜಾಸ್ತಿ ಕೇಳಲಿದ್ದಾರೆ. ಎಸ್‌ಸಿ/ಎಸ್‌ಟಿ, ಅಲ್ಪವಧಿ, ದೀರ್ಘಾವಧಿ, ಮಧ್ಯಮಾವಧಿ ಸಾಲ, ಬಡವರು, ಸ್ತ್ರೀಶಕ್ತಿಗೆ ಸಾಲ ನೀಡಬೇಕಾಗಿದ್ದು, ಅವುಗಳ ಬಗ್ಗೆ ಪರಿಶೀಲಿಸಲಾಗುತ್ತಿದೆ''ಎಂದರು.

ಮಂಡ್ಯ ಸಮೀಪದ ಪಿಎಸ್‌ಎಸ್‌ಕೆ ಕಾರ್ಖಾನೆಯನ್ನು ಏಕಾಏಕಿ ಸ್ಥಗಿತಗೊಳಿಸಿ, ಕಾರ್ಖಾನೆಯ 90 ಮಂದಿ ಕಾರ್ಮಿಕರನ್ನು ರಿಲೀವ್‌ ಮಾಡಿದ್ದಲ್ಲದೆ, ವೇತನ ತಾರತಮ್ಯ ಮಾಡಲಾಗುತ್ತಿದೆ ಎಂಬ ಆರೋಪದ ಕುರಿತ ಪ್ರಶ್ನೆಗೆ ಉತ್ತರಿಸಿದ ಸಚಿವರು ''ಈ ಬಗ್ಗೆ ಸಕ್ಕರೆ ಸಚಿವರು ಹಾಗೂ ಮುರುಗೇಶ್‌ ನಿರಾಣಿ ಅವರೊಂದಿಗೆ ಚರ್ಚಿಸುತ್ತೇನೆ. ಕಾರ್ಖಾನೆ ಸ್ಥಗಿತಗೊಂಡಿರುವ ಬಗ್ಗೆ ನನಗೆ ಗೊತ್ತಿರಲಿಲ್ಲ'' ಎಂದು ಸಚಿವ ಎಸ್‌ಟಿ ಸೋಮಶೇಖರ್‌ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ