ಆ್ಯಪ್ನಗರ

ಮುಂದುವರಿದ ಪಾದಯಾತ್ರೆ

ಟಿಬೆಟ್‌ನ ಧಾರ್ಮಿಕ ಮುಖಂಡ 11ನೇ ಪಂಚೆನ್ ಲಾಮಾ ಅವರ ಇರುವಿಕೆ ಯನ್ನು ಚೀನಾ ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿ ಇಂಡೋ-ಟಿಬೆಟಿನ್‌ನ ಸಂಘಟನೆ ನಡೆಸುತ್ತಿರುವ ಪಾದಯಾತ್ರೆ ಶನಿವಾರ ನಗರದಿಂದ ಮುಂದುವರೆಯಿತು.

Vijaya Karnataka 27 Apr 2019, 8:47 pm
ಮಂಡ್ಯ: ಟಿಬೆಟ್‌ನ ಧಾರ್ಮಿಕ ಮುಖಂಡ 11ನೇ ಪಂಚೆನ್ ಲಾಮಾ ಅವರ ಇರುವಿಕೆ ಯನ್ನು ಚೀನಾ ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿ ಇಂಡೋ-ಟಿಬೆಟಿನ್‌ನ ಸಂಘಟನೆ ನಡೆಸುತ್ತಿರುವ ಪಾದಯಾತ್ರೆ ಶನಿವಾರ ನಗರದಿಂದ ಮುಂದುವರೆಯಿತು.
Vijaya Karnataka Web munduvarida padayatre
ಮುಂದುವರಿದ ಪಾದಯಾತ್ರೆ


ಮೈಸೂರಿನಿಂದ ಆರಂಭಿಸಿರುವ ಪಾದಯಾತ್ರೆಯು ಮೇ 2ರಂದು ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ ಮುಕ್ತಾಯ ಗೊಳ್ಳಿದ್ದುಘಿ, ಶುಕ್ರವಾರ ಮೈಸೂರಿನಿಂದ ಪಾದಯಾತ್ರೆ ಮೂಲಕ ಮಂಡ್ಯಕ್ಕೆ ಆಗಮಿಸಿದ 100ಕ್ಕೂ ಹೆಚ್ಚು ಟಿಬೆಟಿನನ್ನರು ನಗರದಲ್ಲಿ ರಾತ್ರಿ ವಾಸ್ತವ್ಯ ಹೂಡಿದರು. ನಂತರ ಶನಿವಾರ ಬೆಳಗ್ಗೆ ನಗರದಿಂದ ಪಾದಯಾತ್ರೆ ಮುಂದುವರೆಸಿದರು.

‘‘ಟಿಬೆಟಿನ ಧರ್ಮಗುರು ದಲಾಯಿಲಾ ಅವರ ಧಾರ್ಮಿಕ ಸಮೂಹದಲ್ಲಿ ಒಬ್ಬರಾದ 11ನೇ ಪಂಚೆನ್ ಲಾಮಾ ಸ್ಥಾನಕ್ಕೆ 1955ರಲ್ಲಿ ಗುರುತಿಸಲ್ಪಟ್ಟ ಚೊಯ್ಕಿ ನ್ಯಾಮಾ ಅವರನ್ನು ಚೀನಾ ದೇಶ ತಮ್ಮ ವಶಕ್ಕೆ ಪಡೆಯಿತು. ಪಂಚೆನ್ ಲಾಮಾ ಅವರನ್ನು ಬಂಧಿಸಿದಾಗ ಅವರಿಗೆ ಕೇವಲ 6 ವರ್ಷ ವಯಸ್ಸಾಗಿತ್ತುಘಿ. ಈಗ ಅವರಿಗೆ 24 ವರ್ಷಗಳಾಗಿವೆ. ಆದರೆ ಅವರ ಬಗ್ಗೆ ಯಾವುದೇ ಮಾಹಿತಿಯನ್ನೂ ಚೀನಾ ನೀಡುತ್ತಿಲ್ಲ. ಕೂಡಲೇ ಚೀನಾ ದೇಶವು ಪಂಚೆನ್ ಲಾಮಾ ಅವರು ಇರುವಿಕೆ, ವಾಸದ ಸ್ಥಳದ ಮಾಹಿತಿ ಬಹಿರಂಗ ಪಡಿಸಬೇಕು,’’ ಎಂದು ಪಾದಯಾತ್ರಿಗಳು ಒತ್ತಾಯಿಸಿದರು.

‘‘ಟಿಬೆಟ್‌ನ ಧಾರ್ಮಿಕ ಪ್ರಭಾವವನ್ನು ಕುಗ್ಗಿಸುವ ಹುನ್ನಾರದಿಂದ ಚೀನಾ ದೇಶವು ಪಂಚೆನ್ ಲಾಮಾ ಅವರನ್ನು ಬಂಧಿಸಿ ಅವರ ಜಾಗಕ್ಕೆ ಚೀನಿಯರ ಪರವಾಗಿರುವ ವ್ಯಕ್ತಿಯನ್ನು ಮುಂದಿನ ಟಿಬೆಟ್ ಬೌದ್ಧ ಮುಖಂಡನನ್ನಾಗಿ ನೇಮಿಸುವ ಉದ್ದೇಶ ಅಡಗಿದೆ,’’ಎಂದು ಆರೋಪಿಸಿದರು. ಇಂಡೋ-ಟಿಬೆಟಿನ್‌ನ ಸಂಘಟನೆ ಯ ಮಹಿಳಾ ಘಟಕದ ಕೇಂದ್ರೀಯ ಸದಸ್ಯೆ ತೇಂಜಿನ್ ಡೋಲ್ಮಾ ಪಾದಯಾತ್ರೆಯ ನೇತೃತ್ವ ವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ