ಆ್ಯಪ್ನಗರ

ದೊಡ್ಡದಾಗಿ ಮೀಸೆ ತಿರುವಿ, ನಿಖಿಲ್ ಕರೆತಂದು ಸೋಲಿಸಿದ್ರು: ಚಲುವರಾಯಸ್ವಾಮಿ ಲೇವಡಿ

‘ನನಗೂ ಕುಮಾರಸ್ವಾಮಿಗೂ ವೈರತ್ವ ಇದೆ. ಹಾಗಂತ ನಿಖಿಲ್‌ ಜೊತೆ ವೈರತ್ವ ಮಾಡೋದಕ್ಕೆ ಆಗುತ್ತಾ? ಅವನು ನನ್ನ ಮಗ ಇದ್ದಂತೆ,' ಎಂಬುದಾಗಿ ಮಾಜಿ ಸಚಿವ ಚಲುವರಾಯಸ್ವಾಮಿ ಮಂಡ್ಯದಲ್ಲಿ ಹೇಳಿದ್ದಾರೆ.

Vijaya Karnataka Web 17 Sep 2019, 5:13 pm
ಮಂಡ್ಯ: ಕೆ.ಆರ್. ಪೇಟೆ ಉಪ ಚುನಾವಣೆ ಹೊಸ್ತಿಲಲ್ಲಿ ಮತ್ತೆ ನಿಖಿಲ್ ಕುಮಾರಸ್ವಾಮಿ ಸೋಲಿನ ಪರಾಮರ್ಶೆ ಆರಂಭವಾಗಿದೆ. ಈ ಹಿಂದೆ, 'ಜೆಡಿಎಸ್ ವರಿಷ್ಠರ ಸುಳ್ಳಿನಿಂದ ನಿಖಿಲ್‌ಗೆ ಸೋಲಾಯಿತು' ಎಂಬುದಾಗಿ ಕೆ.ಆರ್.ಪೇಟೆ ಕ್ಷೇತ್ರದ ಅನರ್ಹ ಜೆಡಿಎಸ್‌ ಶಾಸಕ ನಾರಾಯಣಗೌಡ ಹೇಳಿದ್ದರು.
Vijaya Karnataka Web N Chaluvaraya Swamy


ಇದೀಗ ಮಾಜಿ ಸಚಿವ ಎನ್. ಚಲುವರಾಯಸ್ವಾಮಿ ಸೋಲಿನ ಪರಮಾರ್ಶೆಗೆ ಇಳಿದಿದ್ದಾರೆ. “ನಿಖಿಲ್ ಒಳ್ಳೆ ಹುಡುಗ, ರಾಜಕಾರಣ ಮಾಡೋದಕ್ಕೆ ಬೇಕಾದಷ್ಟು ಟೈಮ್ ಇತ್ತು. ದೊಡ್ಡದಾಗಿ ಮೀಸೆ ತಿರುವಿ, ನಿಖಿಲ್ ಕರೆತಂದು ಸೋಲಿಸಿದ್ರು,” ಎಂಬುದಾಗಿ ಅವರು ಹೇಳಿದರು.

“ನಿಖಿಲ್ ಎಲ್ಲೋ ಒಂದು ಕಡೆ ರಾಜಕಾರಣ ಮಾಡುಕೊಳ್ಳುತ್ತಿದ್ದರು. ಅವ್ರನ್ನ ಕರೆತಂದು ಸೋಲಿಸಿದ್ರು,” ಎಂದು ಹೇಳಿದ ಚಲುವರಾಯಸ್ವಾಮಿ, ‘ನನಗೂ ಕುಮಾರಸ್ವಾಮಿಗೂ ವೈರತ್ವ ಇದೆ. ಹಾಗಂತ ನಿಖಿಲ್‌ ಜೊತೆ ವೈರತ್ವ ಮಾಡೋದಕ್ಕೆ ಆಗುತ್ತಾ? ಅವನು ನನ್ನ ಮಗ ಇದ್ದಂತೆ,' ಎಂದರು.

ರಾಜ್ಯಕ್ಕೆ ದೇವೇಗೌಡ್ರು ಹೇಗೋ ಮಂಡ್ಯಕ್ಕೆ ಸಿ.ಎಸ್.ಪುಟ್ಟರಾಜು ಹಾಗೆಯೇ ಎಂಬುದಾಗಿ ಇದೇ ಸಂದರ್ಭದಲ್ಲಿ ಚಲುವರಾಯಸ್ವಾಮಿ ವ್ಯಂಗ್ಯವಾಡಿದರು. ಇವರಿಗೆ ಲೋಕಸಭೆ ಚುನಾವಣೆಯಲ್ಲಿ ಜನ ಬುದ್ಧಿ ಕಲಿಸಿದ್ದಾರೆ. ಹಾಗೆಯೇ ನಾರಾಯಣಗೌಡ್ರಿಗೂ ಬುದ್ದಿ ಕಲಿಸ್ತಾರೆ ಎಂಬುದಾಗಿ ಅವರು ವಿಶ್ವಾಸ ವ್ಯಕ್ತಪಡಿಸಿದರು.

“ಪುಟ್ಟರಾಜು ಮಂಡ್ಯಕ್ಕೆ 8 ಸಾವಿರ ಕೋಟಿ ಕೊಟ್ಟಿದ್ದೀವಿ ಅಂತಾರೆ. ಎಲ್ಲಿ ಟೆಂಡರ್ ಆಗಿದೆ? ಯಾವ ಕೆಲಸ ಪ್ರಾರಂಭವಾಗಿದೆ?" ಎಂದು ಚಲುವರಾಯಸ್ವಾಮಿ ಪುಟ್ಟರಾಜು ವಿರುದ್ಧ ಇದೇ ಸಂದರ್ಭದಲ್ಲಿ ಕೆಂಡ ಕಾರಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ