ಆ್ಯಪ್ನಗರ

ಪ್ರಯಾಣಿಕರ ಆಕ್ರೋಶಕ್ಕೂ ತಲೆ ಕಡೆಸಿಕೊಳ್ಳದ ಅಧಿಕಾರಿಗಳು

ಮಂಡ್ಯ ತಾಲೂಕಿನ ಹೊಡಾಘಟ್ಟ ಗ್ರಾಮದ ಬಳಿ ಈಚೆಗೆ ಕುಸಿದಿದ್ದ ಮಂಡ್ಯ-ಬೆಸಗರಹಳ್ಳಿ ಮುಖ್ಯ ರಸ್ತೆಯು ಮತ್ತಷ್ಟು ಕುಸಿತದ ಪ್ರಮಾಣ ವಿಸ್ತರಿಸುತ್ತಾ ಇದೆ. ಇಷ್ಟಿದ್ದರೂ ಸಹ ಅಧಿಕಾರಿಗಳು ವಾಹನ ಸವಾರರಿಗೆ ನೆರವಾಗುವ ಕ್ರಮ ಜರುಗಿಸದಿರುವುದು ಸಾರ್ವಜನಿಕ ವಲಯದಲ್ಲಿಚರ್ಚೆಗೆ ಗ್ರಾಸವಾಗಿದೆ.

Vijaya Karnataka 14 Oct 2019, 5:00 am
ಮಂಡ್ಯ : ತಾಲೂಕಿನ ಹೊಡಾಘಟ್ಟ ಗ್ರಾಮದ ಬಳಿ ಈಚೆಗೆ ಕುಸಿದಿದ್ದ ಮಂಡ್ಯ-ಬೆಸಗರಹಳ್ಳಿ ಮುಖ್ಯ ರಸ್ತೆಯು ಮತ್ತಷ್ಟು ಕುಸಿತದ ಪ್ರಮಾಣ ವಿಸ್ತರಿಸುತ್ತಾ ಇದೆ. ಇಷ್ಟಿದ್ದರೂ ಸಹ ಅಧಿಕಾರಿಗಳು ವಾಹನ ಸವಾರರಿಗೆ ನೆರವಾಗುವ ಕ್ರಮ ಜರುಗಿಸದಿರುವುದು ಸಾರ್ವಜನಿಕ ವಲಯದಲ್ಲಿಚರ್ಚೆಗೆ ಗ್ರಾಸವಾಗಿದೆ.
Vijaya Karnataka Web MDY13M-08_17


ಅಪಾಯ ಲೆಕ್ಕಿಸದ ದ್ವಿಚಕ್ರ ವಾಹನ ಸವಾರರು ಜೀವ ಒತ್ತೆ ಇಟ್ಟು ನಿತ್ಯ ಪ್ರಯಾಣ ಮಾಡುತ್ತಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ಬಿದ್ದ ಜೋರು ಮಳೆಯಿಂದಾಗಿ ರಸ್ತೆ ಅರ್ಧ ಭಾಗ ಕುಸಿದು, ಭಾರೀ ವಾಹನಗಳು ವಿದ್ಯಾಪೀಠ-ಶಿವಾರ-ಹೊಡಾಘಟ್ಟ ಗ್ರಾಮಗಳ ಮೂಲಕ ಸಂಚರಿಸುತ್ತಿವೆ. ಈ ಕುಸಿದ ರಸ್ತೆಯಲ್ಲಿಯೇ ದ್ವಿಚಕ್ರ ವಾಹನ ಸವಾರರು ಮಾತ್ರ ಸಂಚರಿಸುತ್ತಿದ್ದರು.

ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಸರಕಾರದಿಂದ ಅನುದಾನ ಬರುವವರೆಗೂ ರಸ್ತೆ ರಿಪೇರಿ ಮಾಡಲಾಗುವುದಿಲ್ಲ. ಆದರೆ, ದ್ವಿಚಕ್ರ ವಾಹನ ಸವಾರರಿಗೆ ಅನುಕೂಲ ಮಾಡಿಕೊಡಲಾಗುವುದು ಎಂದು ಹೇಳಲಾಗಿತ್ತು. ಇದೀಗ ರಸ್ತೆಯು ದಿನದಿಂದ ದಿನಕ್ಕೆ ಮತ್ತಷ್ಟು ಭಾಗ ಕುಸಿಯುವ ಪ್ರಮಾಣ ಹೆಚ್ಚುತ್ತಲೇ ಇದೆ. ಇದರಿಂದ ಹೆಚ್ಚಿನ ಅಪಾಯದ ಸನ್ನಿವೇಶ ಎದುರಾಗಿದೆ. ಈ ಸಮಸ್ಯೆ ಬಗ್ಗೆ ದಿನ ಪತ್ರಿಕೆಯಲ್ಲಿಸುದ್ದಿ ಮಾಡಿಸಿದ್ದರೂ ಸಹ ಎಚ್ಚೆತ್ತುಕೊಳ್ಳದ ಅಧಿಕಾರಿಗಳಿಗೆ ಏನು ಹೇಳಬೇಕು ಎಂದು ತೋಚುತ್ತಿಲ್ಲಎಂದು ವಾಹನ ಸವಾರರ ಆಕ್ರೋಶ ಹೊರಹಾಕುತ್ತಾರೆ.

ಕುಸಿದ ರಸ್ತೆಯಲ್ಲಿಯೇ ದ್ವಿಚಕ್ರ ವಾಹನ ಸವಾರರು ಮಾತ್ರ ಭಂಡ ಧೈರ್ಯದಿಂದ ಕಿರು ರಸ್ತೆಯಲ್ಲಿಯೇ ಸವಾರಿ ಮಾಡುತ್ತಿದ್ದಾರೆ. ಹಲವು ವರ್ಷಗಳಿಂದ ದುರಸ್ಥಿ ಪಡಿಸಲು ಆಗ್ರಹಿಸಿ ನೀಡಿದ ಮನವಿಯನ್ನು ಪರಿಗಣಿಸುತ್ತಿಲ್ಲ. ಇದೀಗ ರಸ್ತೆ ಮತ್ತಷ್ಟು ಕುಸಿದಿದೆ. ದ್ವಿಚಕ್ರ ವಾಹನ ಚಲಿಸಲು ಸೂಕ್ತ ವ್ಯವಸ್ಥೆ ಮಾಡುವುದಾಗಿ ಹೇಳಿದ್ದ ಇಲಾಖೆ ಅಧಿಕಾರಿಗಳು ಅದನ್ನೂ ಮಾಡಿಲ್ಲ. ಸವಾರರಿಗೆ ಎದುರಾಗುವ ಅನಾಹುತ ತಪ್ಪಿಸಲು ಕೂಡಲೇ ಬದಲೀ ರಸ್ತೆ ನಿರ್ಮಿಸಬೇಕು. ಇಲ್ಲವಾದರೆ ರಸ್ತೆಯನ್ನೇ ಬಂದ್‌ ಮಾಡಲಾಗುವುದು ಎಂದು ಅಕ್ಕಪಕ್ಕದ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ