ಆ್ಯಪ್ನಗರ

ಕಲರಿಂಗ್‌ ಕಾರ್ಖಾನೆ ತೆರವು

ವಿಕ ಸುದ್ದಿಲೋಕ ಶ್ರೀರಂಗಪಟ್ಟಣ ತಾಲೂಕಿನ ಮೊಗರಹಳ್ಳಿ ಗ್ರಾಮದ ಹೊರವಲಯದಲ್ಲಿ ಅಕ್ರಮವಾಗಿ ಬಟ್ಟೆಗೆ ಕಲರಿಂಗ್‌ ಹಾಕುವ ಕಾರ್ಖಾನೆ ತೆರೆದು ರಾಸಾಯನಿಕಯುಕ್ತ ನೀರನ್ನು ವಿರಿಜಾ ...

Vijaya Karnataka 11 Jul 2018, 5:00 am
ಶ್ರೀರಂಗಪಟ್ಟಣ: ತಾಲೂಕಿನ ಮೊಗರಹಳ್ಳಿ ಗ್ರಾಮದ ಹೊರವಲಯದಲ್ಲಿ ಅಕ್ರಮವಾಗಿ ಬಟ್ಟೆಗೆ ಕಲರಿಂಗ್‌ ಹಾಕುವ ಕಾರ್ಖಾನೆ ತೆರೆದು ರಾಸಾಯನಿಕಯುಕ್ತ ನೀರನ್ನು ವಿರಿಜಾ ನಾಲೆಗೆ ಹರಿಯಬಿಡುತ್ತಿದ್ದ ಕಾರ್ಖಾನೆಯನ್ನು ಮಂಗಳವಾರ ತಾಲೂಕು ಆಡಳಿತ ವತಿಯಿಂದ ತೆರವುಗೊಳಿಸಲಾಯಿತು.
Vijaya Karnataka Web painting factory locked in srirangapattana
ಕಲರಿಂಗ್‌ ಕಾರ್ಖಾನೆ ತೆರವು


ಸ್ಥಳಕ್ಕಾಗಮಿಸಿದ ತಹಸೀಲ್ದಾರ್‌ ಡಿ.ನಾಗೇಶ್‌, ಪರಿಸರ ಮಾಲಿನ್ಯ ಅಧಿಕಾರಿ ಆರ್‌.ಸವಿತಾ ನೇತೃತ್ವದ ಅಧಿಕಾರಿಗಳ ತಂಡ ಪರಿಸರ ಇಲಾಖೆ, ಸ್ಥಳೀಯ ಗ್ರಾ.ಪಂ.ಹಾಗೂ ತಾಲೂಕು ಆಡಳಿತದಿಂದ ಯಾವುದೇ ಮಾನ್ಯತೆ ಪಡೆಯದ ಕಾರಣ ಜೆಸಿಬಿ ಯಂತ್ರದ ಸಹಾಯದಿಂದ ಕಾರ್ಖಾನೆಯನ್ನು ಸ್ಥಳದಲ್ಲೇ ತೆರವುಗೊಳಿಸಿದರು.

ಈ ಹಿಂದೆ ಕೂಡ ಕಲರಿಂಗ್‌ ಕಾರ್ಖಾನೆ ನಡೆಸದಂತೆ ಕಾರ್ಖಾನೆ ಮಾಲೀಕರಿಗೆ ಆದೇಶ ನೀಡಲಾಗಿತ್ತು. ವಿದ್ಯುತ್‌ ಸಂಪರ್ಕಕ್ಕೂ ಪರವಾನಗಿ ಪಡೆಯದೇ ಪರಿಸರ ಇಲಾಖೆ ಆದೇಶ ಉಲ್ಲಂಘಿಸಿ ಲೈಸೆನ್ಸ್‌ ಪಡೆಯದೇ ಬಟ್ಟೆಗೆ ಹಾಕುವ ಕಲರಿಂಗ್‌ ಕಾರ್ಖಾನೆ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ಕಾರ್ಖಾನೆ ಮಾಲೀಕರ ವಿರುದ್ಧ ಐಪಿಸಿ 188 ಕಲಂನಡಿ ದೂರು ದಾಖಲಿಸಲಾಗಿದೆ, ಕಾರ್ಖಾನೆಯನ್ನು ತೆರವುಗೊಳಿಸಲಾಗಿದೆ ಎಂದು ತಹಸೀಲ್ದಾರ್‌ ಡಿ.ನಾಗೇಶ್‌ ತಿಳಿಸಿದ್ದಾರೆ.

ಕಾರ್ಖಾನೆ ಮಾಲೀಕ ನಟರಾಜು ಬಟ್ಟೆಗೆ ಕಲರಿಂಗ್‌ ಹಾಕುವ ಕಾರ್ಖಾನೆಯನ್ನು ಮೊಗರಹಳ್ಳಿ ಹೊರವಲಯದಲ್ಲಿರುವ ಸರ್ವೆ ನಂ ಜಮೀನಿನಲ್ಲಿ ಮೈಸೂರಿನಿಂದ ಕಲುಷಿತ ನೀರು ಹರಿದು ಬರುವ ಹಳ್ಳದ ಪಕ್ಕದಲ್ಲಿ ಆರಂಭಿಸಿದ್ದರು. ಕಾರ್ಖಾನೆಯಿಂದ ರಾಸಾಯನಿಕಯುಕ್ತ ನೀರನ್ನು ಕಲುಷಿತ ನೀರು ಹರಿಯುವ ಹಳ್ಳಕ್ಕೆ ಬಿಡಲಾಗುತ್ತಿತ್ತು, ಹಳ್ಳದ ನೀರು ನೇರವಾಗಿ ವಿರಿಜಾ ನಾಲೆ ಸೇರ್ಪಡೆಯಾಗುತ್ತಿತ್ತು. ಆ ನೀರನ್ನೇ ಕುಡಿಯುವ ಜನ, ಜಾನುವಾರುಗಳು ಕಾಯಿಲೆಗೆ ತುತ್ತಿಗುತ್ತಿದ್ದರು ಈ ಸಂಬಂಧ ವಿದ್ಯನ್ಮಾನ ಮಾಧ್ಯಮ ಸುದ್ದಿ ಬಿತ್ತರಿಸಿತ್ತು ಎಚ್ಚೆತ್ತ ತಾಲೂಕು ಆಡಳಿತ ಹಾಗೂ ಪರಿಸರ ಇಲಾಖೆ ಅಧಿಕಾರಿಗಳು ಕಲರಿಂಗ್‌ ಕಾರ್ಖಾನೆಯನ್ನು ತೆರವುಗೊಳಿಸಿದರು. ಉಪತಹಸೀಲ್ದಾರ್‌ ಭರತ್‌ಕುಮಾರ್‌, ಗ್ರಾಮ ಲೆಕ್ಕಿಗರು, ಪೊಲೀಸರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ