ಆ್ಯಪ್ನಗರ

ಪಾಂಡವಪುರ ಪುರಸಭೆ: 105ರಲ್ಲಿ 13 ನಾಮಪತ್ರ ತಿರಸ್ಕೃತ

ವಿಕ ಸುದ್ದಿಲೋಕ ಪಾಂಡವಪುರ ಪಟ್ಟಣದ ಪುರಸಭೆಯ ಚುನಾವಣೆಗೆ ಸ್ಪರ್ಧೆ ಬಯಸಿ ಒಟ್ಟು 105 ನಾಮಪತ್ರಗಳು ಸಲ್ಲಿಕೆಯಾಗಿದ್ದವು ಆ...

Vijaya Karnataka 21 Aug 2018, 5:00 am
ಪಾಂಡವಪುರ: ಪಟ್ಟಣದ ಪುರಸಭೆಯ ಚುನಾವಣೆಗೆ ಸ್ಪರ್ಧೆ ಬಯಸಿ ಒಟ್ಟು 105 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಆ.20ರಂದು ನಾಮಪತ್ರಗಳ ಪರಿಶೀಲನೆಯಲ್ಲಿ ಒಟ್ಟು 13 ನಾಮಪತ್ರಗಳು ತಿರಸ್ಕೃತಗೊಂಡಿದ್ದು ಅಂತಿಮವಾಗಿ 92 ನಾಮಪತ್ರಗಳು ಅಧಿಕೃತಗೊಂಡಿವೆ.
Vijaya Karnataka Web pandavpur municipal election 13 out of 105 nominations rejected
ಪಾಂಡವಪುರ ಪುರಸಭೆ: 105ರಲ್ಲಿ 13 ನಾಮಪತ್ರ ತಿರಸ್ಕೃತ


ಪಕ್ಷ ದಿಂದ ನಾಮಪತ್ರ ಸಲ್ಲಿಸಿ ಪಕ್ಷ ದ 'ಬಿ' ಫಾರಂ ನೀಡದಿರುವ ಅಭ್ಯರ್ಥಿಗಳ ನಾಮಪತ್ರವೇ ತಿರಸ್ಕೃತಗೊಂಡಿರುವುದು.

2ನೇ ವಾರ್ಡ್‌ನಲ್ಲಿ ಪಿ.ಎಲ್‌.ಶ್ರೀಹರ್ಷ ಜೆಡಿಎಸ್‌ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ಆದರೆ ಅವರಿಗೆ ಪಕ್ಷದ ಬಿ ಫಾರಂ ಲಭಿಸದಿರುವುದರಿಂದ ನಾಮಪತ್ರ ತಿರಸ್ಕೃತಗೊಂಡಿದೆ. ಅದೇ ರೀತಿ 3ನೇ ವಾರ್ಡ್‌ನ ಎನ್‌.ಜಯಕುಮಾರ್‌, 4ನೇ ವಾರ್ಡ್‌ನಿಂದ ಜಬೀನಾ ಹಾಗೂ ನಜಮಾಬಾನು, 6ನೇ ವಾರ್ಡ್‌ನಿಂದ ಶೇಷಾಚಲ, 7ನೇ ವಾರ್ಡ್‌ನಿಂದ ಎಸ್‌.ಕೆ.ಭಾಗ್ಯಲಕ್ಷ್ಮಿ, 10ನೇ ವಾರ್ಡ್‌ನಿಂದ ಎಲ್‌.ಬಿ.ಮಹೇಶ್‌ಬಾಬು, 11ನೇ ವಾರ್ಡ್‌ನಿಂದ ಪರಮೇಶ್‌, 12ನೇ ವಾರ್ಡ್‌ನಿಂದ ಎಸ್‌. ಶಿವಕುಮಾರ್‌, 15ನೇ ವಾರ್ಡ್‌ನಲ್ಲಿ ಪಿ.ಜಿ.ರಘುನಾಥ್‌, 17ನೇ ವಾರ್ಡ್‌ನಲ್ಲಿ ಪುಟ್ಟಲಕ್ಷ್ಮಿ ಅವರು ಜೆಡಿಎಸ್‌ನಿಂದ ನಾಮಪತ್ರ ಸಲ್ಲಿಸಿದ್ದರು. ಆದರೆ ಅಷ್ಟೂ ಮಂದಿಗೆ ಬಿ ಫಾರಂ ನೀಡದಿರುವುದರಿಂದ ನಾಮಪತ್ರ ತಿರಸ್ಕೃತಗೊಂಡಿವೆ.

5ನೇ ವಾರ್ಡ್‌ನಿಂದ ಕಾಂಗ್ರೆಸ್‌ನಿಂದ ನಾಮಪತ್ರ ಸಲ್ಲಿಸಿದ ಸಿ.ಗೋಪಾಲ್‌, 15ನೇ ವಾರ್ಡ್‌ನಿಂದ ಟಿ.ಎಸ್‌.ಶಶಿಕಾಂತ್‌ ಅವರಿಗೆ ಪಕ್ಷ ಬಿ ಫಾರಂ ನೀಡದಿರುವುದರಿಂದ ನಾಮಪತ್ರ ತಿರಸ್ಕೃತಗೊಂಡಿವೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ