ಆ್ಯಪ್ನಗರ

ಉಕ್ಕಿ ಹರಿಯುವ ಕಾವೇರಿ ನದಿ ಕಣ್ತುಂಬಿಕೊಳ್ಳಲು ಜನರ ಲಗ್ಗೆ

ಕೆಆರ್‌ಎಸ್‌ ಜಲಾಶಯದಿಂದ ಕಾವೇರಿ ನದಿಗೆ 1.50 ಲಕ್ಷ ಕ್ಯೂಸೆಕ್‌ ನೀರು ಬಿಟ್ಟಿದ್ದು ಉಕ್ಕಿ ಹರಿಯುತ್ತಿರುವ ನದಿಯನ್ನು ಕಣ್ತುಂಬಿಕೊಳ್ಳಲು ಜನರು ಶ್ರೀರಂಗಪಟ್ಟಣಕ್ಕೆ ಲಗ್ಗೆ ಇಡುತ್ತಿದ್ದಾರೆ.

Vijaya Karnataka 12 Aug 2019, 5:00 am
ಶ್ರೀರಂಗಪಟ್ಟಣ : ಕೆಆರ್‌ಎಸ್‌ ಜಲಾಶಯದಿಂದ ಕಾವೇರಿ ನದಿಗೆ 1.50 ಲಕ್ಷ ಕ್ಯೂಸೆಕ್‌ ನೀರು ಬಿಟ್ಟಿದ್ದು ಉಕ್ಕಿ ಹರಿಯುತ್ತಿರುವ ನದಿಯನ್ನು ಕಣ್ತುಂಬಿಕೊಳ್ಳಲು ಜನರು ಶ್ರೀರಂಗಪಟ್ಟಣಕ್ಕೆ ಲಗ್ಗೆ ಇಡುತ್ತಿದ್ದಾರೆ.
Vijaya Karnataka Web MDY-MDY11SRP15


ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿರುವ ಉತ್ತರ ಕಾವೇರಿ ನದಿ, ಕಾವೇರಿ ಸಂಗಮ, ಶ್ರೀನಿಮಿಷಾಂಬ ದೇವಾಲಯ ಸ್ನಾನಘಟ್ಟ, ಶ್ರೀರಂಗನಾಥಸ್ವಾಮಿ ದೇವಾಲಯ ಸ್ನಾನಘಟ್ಟ, ಪಶ್ಚಿಮವಾಹಿನಿ ಕಾವೇರಿ ನದಿ ತೀರಕ್ಕೆ ತಂಡೋಪ, ತಂಡವಾಗಿ ಕುಟುಂಬ ಸಮೇತ ಜನರು ಆಗಮಿಸಿ ಉಕ್ಕಿ ಹರಿಯುತ್ತಿರುವ ಕಾವೇರಿ ಮಾತೆಯನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಕಾವೇರಿ ನದಿ ದಡದಲ್ಲಿ ನಿಂತು ಪರಸ್ಪರರು ಜತೆಯಲ್ಲಿ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ.

ನದಿ ತೀರದಲ್ಲಿ ಎಲ್ಲೆಂದರಲ್ಲಿ ಜನ ಜಂಗುಳಿಯೇ ನೆರೆದಿದೆ. ಬೆಂಗಳೂರು, ಮೈಸೂರು ಹೆದ್ದಾರಿಯಲ್ಲಿ ಸಂಚಾರ ಮಾಡುವ ಪ್ರವಾಸಿಗರು ಹಾಗೂ ನೆರೆಯ ಜಿಲ್ಲೆಗಳ ಜನರು ಕಾರು, ಟೆಂಪೋ, ಬಸ್‌ಗಳನ್ನು ನಿಲ್ಲಿಸಿ ಕಾವೇರಿ ನದಿ ಸೇತುವೆ ಮೇಲೆ ನಿಂತು ಸಾಗರೋಪಾದಿಯಲ್ಲಿ ಹರಿಯುತ್ತಿರುವ ಕಾವೇರಿ ನದಿ ವೀಕ್ಷ ಣೆ ಮಾಡುತ್ತಿದ್ದಾರೆ. ವೀಕೆಂಡ್‌ ಪ್ರವಾಸ ಕೈಗೊಳ್ಳುವ ಪ್ರವಾಸಿಗರು ಉಕ್ಕಿ ಹರಿಯುತ್ತಿರುವ ಕಾವೇರಿ ನದಿ ವೀಕ್ಷ ಣೆಗಾಗಿಯೇ ಇಲ್ಲಿಗೆ ಆಗಮಿಸುತ್ತಿದ್ದಾರೆ. ಶ್ರೀರಂಗಪಟ್ಟಣ ತಾಲೂಕು ಸುತ್ತಮುತ್ತಲಿನ ನಾನಾ ಗ್ರಾಮಗಳ ಜನರು ಕುಟುಂಬ ಸಮೇತ ನದಿ ತೀರಕ್ಕೆ ಲಗ್ಗೆ ಇಡುತ್ತಿದ್ದಾರೆ.

ಭಾರಿ ಸಂಖ್ಯೆಯಲ್ಲಿ ನದಿ ವೀಕ್ಷ ಣೆಗೆ ಜನರು ಆಗಮಿಸುತ್ತಿರುವುದರಿಂದ ನದಿ ತೀರದಲ್ಲಿ ಮುಂಜಾಗ್ರತ ಕ್ರಮವಾಗಿ ಪೊಲೀಸರ ಸರ್ಪಗಾವಲು ಹಾಕಲಾಗಿದೆ. ವಾಹನ ಹಾಗೂ ಜನರು ಸಂಚಾರ ಮಾಡದಂತೆ ವೆಲ್ಲೆಸ್ಲಿ ಸೇತುವೆ ಮೇಲೆ ಸಂಚಾರ ನಿರ್ಬಂಧ ಮಾಡಲಾಗಿದೆ. ದ್ವೀಪ ಪ್ರದೇಶ ಶ್ರೀರಂಗಪಟ್ಟಣದಿಂದ ಬೆಂಗಳೂರು ಕಡೆಗೆ ಸಂಪರ್ಕ ಕಲ್ಪಿಸಲು 200 ವರ್ಷಗಳ ಹಿಂದೆ ಮೊಟ್ಟಮೊದಲು ವಾಹನಗಳ ಸಂಚಾರಕ್ಕೆ ನಿರ್ಮಾಣ ಮಾಡಿರುವ ವೆಲ್ಲೆಸ್ಲಿ ಸೇತುವೆಗೆ ನದಿ ನೀರು ತಾಕುತ್ತಿದ್ದು ವೆಲ್ಲೆಸ್ಲಿ ಸೇತುವೆ ತೂಗು ಸೇತುವೆಯಂತೆ ಕಾಣುತ್ತಿದೆ. ಈ ರಮ್ಯ ಮನೋಹರ ದೃಶ್ಯ ವೀಕ್ಷ ಣೆ ಮಾಡಲು ಜನರು ಮುಗಿ ಬೀಳುತ್ತಿದ್ದಾರೆ. ವೆಲ್ಲೆಸ್ಲಿ ಸೇತುವೆಗೆ 300 ಮೀಟರ್‌ ದೂರದಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಬೆಂಗಳೂರು-ಮೈಸೂರು ಹೆದ್ದಾರಿ ಸೇತುವೆ ಮೇಲೆ ಜನರು ನಿಂತು ವೆಲ್ಲೆಸ್ಲಿ ಸೇತುವೆ ವೀಕ್ಷ ಣೆ ಮಾಡುತ್ತಿದ್ದಾರೆ.

ಕಳೆದ ವರ್ಷ ಕೂಡ ಕಾವೇರಿ ನದಿ ಉಕ್ಕಿ ಹರಿದಿತ್ತು. ಈ ವರ್ಷ ನದಿಯಲ್ಲಿ ಹೆಚ್ಚು ಪ್ರಮಾಣದಲ್ಲಿ ನೀರು ಹರಿಯುತ್ತಿದೆ. 6 ವರ್ಷಗಳ ಹಿಂದೆಯೂ ನದಿಯಲ್ಲಿ ಪ್ರವಾಹ ಹರಿದು ಬಂದಿತ್ತು. ತಾತ, ಮುತ್ತಾತನ ಕಾಲದಿಂದಲೂ ಉಪವಾಸ, ಗೌರಿ ಹಬ್ಬದ ಕಾಲದಲ್ಲಿ ಕಾವೇರಿ ನದಿ ಮೈದುಂಬಿ ಹರಿಯುವುದು ವಾಡಿಕೆ. ಬರಗಾಲ ಇದ್ದಾಗ ಹೊಳೆಗೆ ಹೆಚ್ಚು ಪ್ರಮಾಣದಲ್ಲಿ ನೀರು ಬರುವುದಿಲ್ಲ. ನದಿ ಮೈದುಂಬಿ ಉಕ್ಕಿ ಹರಿಯುವುದನ್ನು ನೋಡಲು ತುಂಬಾ ಸಂತಸವಾಗುತ್ತದೆ ಎನ್ನುತ್ತಾರೆ ಬಾಬುರಾಯನಕೊಪ್ಪಲು ರೈತ ಬಿ.ಎಸ್‌.ರಮೇಶ್‌.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ