ಆ್ಯಪ್ನಗರ

ಹಕ್ಕಿ ಬೇಟೆ ವೇಳೆ ವಿದ್ಯುತ್‌ ಸ್ಪರ್ಶ: ಚಿರತೆ ಸಾವು

ವಿಕ ಸುದ್ದಿಲೋಕ ಮದ್ದೂರು ವಿದ್ಯುತ್‌ ಅವಘಡದಿಂದ ಚಿರತೆಯೊಂದು ಮೃತಪಟ್ಟಿರುವ ಘಟನೆ ತಾಲೂಕಿನ ಕಬ್ಬಾರೆಯಲ್ಲಿ ಬುಧವಾರ ಬೆಳಗ್ಗೆ ಜರುಗಿದೆ...

Vijaya Karnataka 7 Feb 2019, 5:00 am
ಮದ್ದೂರು: ವಿದ್ಯುತ್‌ ಅವಘಡದಿಂದ ಚಿರತೆಯೊಂದು ಮೃತಪಟ್ಟಿರುವ ಘಟನೆ ತಾಲೂಕಿನ ಕಬ್ಬಾರೆಯಲ್ಲಿ ಬುಧವಾರ ಬೆಳಗ್ಗೆ ಜರುಗಿದೆ.
Vijaya Karnataka Web power touch were bird hunting leopard death
ಹಕ್ಕಿ ಬೇಟೆ ವೇಳೆ ವಿದ್ಯುತ್‌ ಸ್ಪರ್ಶ: ಚಿರತೆ ಸಾವು


ಕಬ್ಬಾರೆ ಹೊರವಲಯದ ಬೆಟ್ಟದರಸಮ್ಮನ ಗುಡ್ಡ ಸಮೀಪ ಅಕ್ಕಪಕ್ಕದ ಗ್ರಾಮಗಳಿಗೆ ಹಾದುಹೋಗಿರುವ ವಿದ್ಯುತ್‌ ತಂತಿ ಸ್ಪರ್ಶಿಸಿ ಹೆಣ್ಣು ಚಿರತೆ ಸ್ಥಳದಲ್ಲೇ ಮೃತಪಟ್ಟಿರುವುದಾಗಿ ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಒಂದೂವರೆ ವರ್ಷ ವಯಸ್ಸಿನ ಈ ಚಿರತೆ ಮರದ ಮೇಲೆ ಪಕ್ಷಿ ಹಿಡಿಯಲು ಹೋದ ವೇಳೆ ವಿದ್ಯುತ್‌ ಸ್ಪರ್ಶಿಸಿ ಮೃತಪಟ್ಟಿದೆ. ಸ್ಥಳಕ್ಕೆ ಅರಣ್ಯ ಹಾಗೂ ಪಶುಸಂಗೋಪನೆ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ 'ವಿಜಯ ಕರ್ನಾಟಕ'ದೊಂದಿಗೆ ಮಾತನಾಡಿದ ಅರಣ್ಯ ವಲಯಾಧಿಕಾರಿ ಶಶಿಧರ್‌, ಮೃತಪಟ್ಟಿರುವ ಚಿರತೆ ಕಳೇಬರದ ಪರೀಕ್ಷೆ ನಡೆಸಿದ ಬಳಿಕ ಇಲಾಖೆ ಆವರಣದಲ್ಲಿ ಅಂತ್ಯಸಂಸ್ಕಾರ ನಡೆಸಲಾಗುವುದು. ಬೆಟ್ಟದರಸಮ್ಮನ ಗುಡ್ಡ ಆಸುಪಾಸಿನಲ್ಲಿ ಚಿರತೆಗಳು ಕಂಡುಬಂದಿರುವ ಸಂಬಂಧ ಸ್ಥಳೀಯರಿಂದ ದೂರುಗಳು ಬಂದಿದ್ದು, ಸೆರೆಗೆ ಕ್ರಮವಹಿಸುವುದಾಗಿ' ಎಂದು ಭರವಸೆ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ