ಆ್ಯಪ್ನಗರ

ಪುರಸಭೆ ಆಯವ್ಯಯ ಪೂರ್ವಭಾವಿ ಸಭೆ

ಪಟ್ಟಣದ ಶ್ರದ್ಧಾ ಭಕ್ತಿಯ ಸ್ಥಳಗಳಲ್ಲಿ ಅಸ್ತಿ ವಿಸರ್ಜನೆ ಶುಲ್ಕಕ್ಕೆ ಕಡಿವಾಣ ಹಾಕಬೇಕು. ಹಳೆ ಮನೆ ದುರಸ್ಥಿಗೆ ಹಾಗೂ ನಿವೇಶನದಲ್ಲಿ ಮನೆ ನಿರ್ಮಾಣ ಮಾಡಿಕೊಳ್ಳುವವರಿಗೆ ಪುರಸಭೆಯಿಂದ ಸಹಾಯಧನ ನೀಡಬೇಕು ಎಂಬ ವಿಷಯ ಕೇಳಿ ಬಂತು...

Vijaya Karnataka 31 Jan 2018, 5:15 am
ಶ್ರೀರಂಗಪಟ್ಟಣ: ಪಟ್ಟಣದ ಶ್ರದ್ಧಾ ಭಕ್ತಿಯ ಸ್ಥಳಗಳಲ್ಲಿ ಅಸ್ತಿ ವಿಸರ್ಜನೆ ಶುಲ್ಕಕ್ಕೆ ಕಡಿವಾಣ ಹಾಕಬೇಕು. ಹಳೆ ಮನೆ ದುರಸ್ಥಿಗೆ ಹಾಗೂ ನಿವೇಶನದಲ್ಲಿ ಮನೆ ನಿರ್ಮಾಣ ಮಾಡಿಕೊಳ್ಳುವವರಿಗೆ ಪುರಸಭೆಯಿಂದ ಸಹಾಯಧನ ನೀಡಬೇಕು ಎಂಬ ವಿಷಯ ಕೇಳಿ ಬಂತು...
Vijaya Karnataka Web preliminary meeting of the municipal budget
ಪುರಸಭೆ ಆಯವ್ಯಯ ಪೂರ್ವಭಾವಿ ಸಭೆ


ಪಟ್ಟಣದ ಪುರಸಭೆಯಲ್ಲಿ ಮುಖ್ಯಾಧಿಕಾರಿ ಕರಿಬಸವಯ್ಯ ಅಧ್ಯಕ್ಷತೆಯಲ್ಲಿ ನಡೆದ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಸಾರ್ವಜನಿಕರು ತಮ್ಮ ಸಲಹೆ ಸೂಚನೆಗಳನ್ನು ನೀಡುವ ಮೂಲಕ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟರು.

ಸಂಗಮ, ಪಶ್ಚಿಮವಾಹಿನಿ, ಶ್ರೀ ರಂಗನಾಥಸ್ವಾಮಿ ದೇವಾಲಯ ಸ್ನಾನ ಘಟ್ಟ ಬಳಿ ಅಸ್ತಿ ವಿಸರ್ಜನೆಗೆ ಸ್ವಚ್ಛತೆ ಹೆಸರಿನಲ್ಲಿ ಶುಲ್ಕ ವಸೂಲಿ ಮಾಡಲಾ ಗುತ್ತಿದೆ. ಶುಲ್ಕ ಹಣ ವಸೂಲಿ ಮಾಡ ಬಾರದು. ರಾಜ್ಯ ಪುರಾತತ್ವ ಇಲಾಖೆಯ ನಿಯಮದಿಂದಾಗಿ ಹಳೆ ಮನೆ ದುರಸ್ಥಿಗೆ ಹೊಸದಾಗಿ ಮನೆ ನಿರ್ಮಾಣ ಮಾಡು ವವರಿಗೆ ತೊಂದರೆಯಾಗುತ್ತಿದೆ ಈ ಸಂಬಂಧ ರಾಜ್ಯ ಪುರಾತತ್ವ ಇಲಾಖೆಗೆ ಪತ್ರ ಬರೆಯಬೇಕು ಎಂದು ಹೇಳಿದರು.

ಹಳೆ ಮನೆ ದುರಸ್ಥಿಗೆ 50 ಸಾವಿರ ಸಹಾಯಧನ ನೀಡಬೇಕು. ಚಂದಗಾಲು ರಸ್ತೆ ಬಳಿ ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಉದ್ದೇಶಕ್ಕೆ ನಡೆ ಯುತ್ತಿರುವ ಕಾಮಗಾರಿ ಸ್ಥಳದಲ್ಲಿ ಕಾವೇರಿ ನದಿಗೆ ಕಲುಷಿತ ನೀರು ಸೇರ್ಪಡೆ ಯಾಗುತ್ತಿದೆ. ಮೊದಲು ನೀರಿನ ಮಾದರಿ ಪರೀಕ್ಷೆ ಮಾಡಿಸಬೇಕು. ಕುಡಿಯಲು ಯೋಗ್ಯ ಎಂದು ವರದಿ ಹೇಳಿದರೆ ನಂತರ ಆ ಸ್ಥಳದಿಂದ ಕುಡಿಯುವ ನೀರು ಸರಬರಾಜು ಕಾಮಗಾರಿಗೆ ಆದ್ಯತೆ ನೀಡಬೇಕು ಎಂದು ತಿಳಿಸಿದರು.

ಸ್ವಚ್ಛತೆಗೆ ಆದ್ಯತೆ: ಐತಿಹಾಸಿಕ ಬತ್ತೇರಿ ಸುತ್ತಮುತ್ತ ಕಸದ ರಾಶಿ ಬಿದ್ದಿದೆ. ಸ್ವಚ್ಛತೆ ಮರಿಚೀಕೆಯಾಗಿದೆ. ಸ್ವಚ್ಛತೆಗೆ ಆದ್ಯತೆ ನೀಡಬೇಕು ರಾತ್ರಿ ವೇಳೆ ಸರಿಯಾಗಿ ವಿದ್ಯುತ್ ದೀಪ ಉರಿಯುತ್ತಿಲ್ಲ. ಬೀದಿ ನಾಯಿ, ಹಂದಿಗಳ ಹಾವಳಿ ಹೆಚ್ಚಾಗಿದೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.
ವಿರೋಧದ ನಡುವೆಯೂ ಇಂದಿರಾ ಕ್ಯಾಂಟಿನ್‌ನ್ನು ಖಾಸಗಿ ಬಸ್ ನಿಲ್ದಾಣದಲ್ಲಿಯೇ ಮಾಡಲಾಗುತ್ತಿದೆ. ಆ ಸ್ಥಳದಲ್ಲಿ ಅರ್ನೈಮಲ್ಯ ತಾಂಡವವಾತ್ತಿದೆ ಎಂದು ಸದಸ್ಯರಾದ ಎಸ್.ಪ್ರಕಾಶ್, ನಳಿನಿಸತ್ಯಪ್ಪ, ನಂದೀಶ್, ಮಾಜಿ ಸದಸ್ಯ ಸಾಯಿಕುಮಾರ್ ಕರವೇ ತಾಲೂಕು ಅಧ್ಯಕ್ಷ ಸುರೇಶ್ ಅಸಮಾಧಾನ ವ್ಯಕ್ತಪಡಿಸಿದರು.

ಪುರಸಭೆ ಸದಸ್ಯರಾದ ಎಂ.ಎಲ್ ದಿನೇಶ್, ಟಿ.ಕಷ್ಣ, ಚಂದ್ರು, ವೆಂಕಟೇಶ್, ಸಿದ್ದರಾಜು, ಹಿರಿಯ ನಾಗರಿಕರು ಹಾಗೂ ಸಾರ್ವಜನಿಕರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ