ಆ್ಯಪ್ನಗರ

ನಾಟಿ ತಳಿಯ ರಾಸುಗಳನ್ನು ರಕ್ಷಿಸಿ

ಮಂಡ್ಯ: ಅಸಂಘಟಿತರಾಗಿರುವ ರೈತರು ತಮ್ಮೊಳಗಿನ ಆಂತರಿಕ ಭಿನ್ನಾಭಿಪ್ರಾಯ ಬಿಟ್ಟು ಎಂದು ಕರ್ನಾಟಕ ಹಾಲು ಮಹಾಮಂಡಳಿಯ ನಿವೃತ್ತ ಜಂಟಿ ನಿರ್ದೇಶಕ ಕೆ.ಕೆ.ಸತ್ಯನಾಥ್‌ ಸಲಹೆ ನೀಡಿದರು.

Vijaya Karnataka 29 Jul 2018, 5:00 am
ಮಂಡ್ಯ: ಅಸಂಘಟಿತರಾಗಿರುವ ರೈತರು ತಮ್ಮೊಳಗಿನ ಆಂತರಿಕ ಭಿನ್ನಾಭಿಪ್ರಾಯ ಬಿಟ್ಟು ಎಂದು ಕರ್ನಾಟಕ ಹಾಲು ಮಹಾಮಂಡಳಿಯ ನಿವೃತ್ತ ಜಂಟಿ ನಿರ್ದೇಶಕ ಕೆ.ಕೆ.ಸತ್ಯನಾಥ್‌ ಸಲಹೆ ನೀಡಿದರು.
Vijaya Karnataka Web protect the nursery beds
ನಾಟಿ ತಳಿಯ ರಾಸುಗಳನ್ನು ರಕ್ಷಿಸಿ


ನಗರದ ಗಾಂಧಿಭವನದಲ್ಲಿ ಜಿಲ್ಲಾ ಹಾಲು ಉತ್ಪಾದಕರ ಹೋರಾಟ ಸಮಿತಿಯಿಂದ ಶನಿವಾರ ಆಯೋಜಿಸಿದ್ದ 'ಹೈನೋದ್ಯಮದಲ್ಲಿ ಹಾಲು ಉತ್ಪಾದಕರು ಎದುರಿಸುತ್ತಿರುವ ಸಮಸ್ಯೆ ಮತ್ತು ಸವಾಲು' ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಹಾಲು ಉತ್ಪಾದಕರು ಸಂಘಟಿತರಾದರೆ ಹೈನು ಉದ್ಯಮದಲ್ಲಿ ಆರ್ಥಿಕ ಲಾಭ ಗಳಿಸಲು ಸಾಧ್ಯ ಎಂದರು.

ನಾಟಿ ತಳಿಯ ರಾಸುಗಳನ್ನು ಯಾವ ಕಾರಣಕ್ಕೂ ಮಾರಾಟ ಮಾಡಬಾರದು. ಈ ರಾಸುಗಳು ಗುಣಮಟ್ಟದ ಹಾಲನ್ನು ನೀಡುತ್ತದೆ. ಅಂತೆಯೇ, ಬೂಸಾ ಕೊಡುವುದನ್ನು ಕಡಿಮೆ ಮಾಡಿ ಹೆಚ್ಚು ಪೋಷಕಾಂಶವುಳ್ಳ ಜೋಳದ ನುಚ್ಚು ಕೊಡಬೇಕು. ಶೇಂಗಾ ಹಿಂಡಿ ಬದಲಿಗೆ ಹತ್ತಿ ಹಿಂಡಿ ಕೊಡಬೇಕು. ಏಕದಳದ ಜತೆಗೆ ದ್ವಿದಳ ಧಾನ್ಯಗಳಾದ ನುಗ್ಗೆಸೊಪ್ಪು, ಅವರೆಸೊಪ್ಪು, ಹುರುಳಿ, ಅಲಸಂಧೆಯನ್ನು ರಾಸುಗಳಿಗೆ ಕೊಡಬೇಕು. ಗೊಬ್ಬರದ ಗಿಡವನ್ನು ತಂದು ಮರುದಿನ ಕೊಡಬೇಕು ಎಂದು ಸಲಹೆ ನೀಡಿದರು.

ಹಾಲು ಉತ್ಪಾದಕರು ಶ್ರದ್ಧೆಯಿಂದ ಹೈನುಗಾರಿಕೆಯಲ್ಲಿ ತೊಡಗಬೇಕು. ಈ ಕೆಲಸ ಮಾಡಬೇಕು. ತಮ್ಮ ಕ್ಷೇತ್ರದಲ್ಲಿ ಹಂತ ಹಂತವಾಗಿ ಬದಲಾವಣೆ ಮಾಡಿಕೊಳ್ಳಬೇಕು. ನಮ್ಮ ಹಿರಿಯರು ಅನುಸರಿಸುತ್ತಿದ್ದ ತೀರ್ಮಾನ ಅವೈಜ್ಞಾನಿಕವಾಗಿದೆ ಎಂಬ ನಿರ್ಲಕ್ಷೃ ಬಿಟ್ಟು ಅದನ್ನು ಪಾಲಿಸಬೇಕು ಎಂದು ಕಿವಿಮಾತು ಹೇಳಿದರು.

ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಪ್ರಸನ್ನ ಎನ್‌.ಗೌಡ ವಿಚಾರ ಸಂಕಿರಣ ಉದ್ಘಾಟಿಸಿದರು. ಜಿಲ್ಲಾ ಹಾಲು ಉತ್ಪಾದಕರ ಹೋರಾಟ ಸಮಿತಿ ಅಧ್ಯಕ್ಷ ಎಸ್‌.ಸಿ.ಮಧುಚಂದನ್‌ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಹಾಲು ಒಕ್ಕೂಟದ ನಿವೃತ್ತ ಉಪ ವ್ಯವಸ್ಥಾಪಕ ಬಿ.ಜಿ.ಪೂವಯ್ಯ, ಎಚ್‌.ಕೆ.ಕೃಷ್ಣೇಗೌಡ, ಜಗನ್ನಾಥ್‌, ಸಿ.ನಾಗರಾಜು, ಕೆ.ಎನ್‌.ಮಹದೇವು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ