ಆ್ಯಪ್ನಗರ

ಸ್ಕೂಟರ್‌ಗೆ ಬಸ್‌ ಡಿಕ್ಕಿ: ಇಬ್ಬರು ವಿದ್ಯಾರ್ಥಿಗಳು ಸಾವು

ಇಬ್ಬರು ವಿದ್ಯಾರ್ಥಿಗಳು ಸಾವು ವಿಕ ಸುದ್ದಿಲೋಕ ಶ್ರೀರಂಗಪಟ್ಟಣ (ಮಂಡ್ಯ ಜಿಲ್ಲೆ) ಮಂಡ್ಯ-ಅರಕೆರೆ ಹೆದ್ದಾರಿಯ ತಾಲೂಕಿನ ಪೀಹಳ್ಳಿ ತಿರುವು ಬಳಿ ಕೆಎಸ್‌ಆರ್‌ಟಿಸಿ ಬಸ್‌ ...

Vijaya Karnataka 23 Jun 2019, 5:00 am
ಶ್ರೀರಂಗಪಟ್ಟಣ (ಮಂಡ್ಯ ಜಿಲ್ಲೆ) : ಮಂಡ್ಯ-ಅರಕೆರೆ ಹೆದ್ದಾರಿಯ ತಾಲೂಕಿನ ಪೀಹಳ್ಳಿ ತಿರುವು ಬಳಿ ಕೆಎಸ್‌ಆರ್‌ಟಿಸಿ ಬಸ್‌ ಸ್ಕೂಟರ್‌ಗೆ ಡಿಕ್ಕಿಯಾಗಿ ಇಬ್ಬರು ವಿದ್ಯಾರ್ಥಿಗಳು ಸ್ಥಳದಲ್ಲಿಯೇ ಮೃತಪಟ್ಟರು.
Vijaya Karnataka Web scooter and bus accident two student death
ಸ್ಕೂಟರ್‌ಗೆ ಬಸ್‌ ಡಿಕ್ಕಿ: ಇಬ್ಬರು ವಿದ್ಯಾರ್ಥಿಗಳು ಸಾವು


ತಾಲೂಕಿನ ಬನ್ನಹಳ್ಳಿಯ ಮನೋಹರ ಎಂಬುವವರ ಪುತ್ರ ಬಿ.ಎಂ.ಸಂದೇಶ್‌(17) ಹಾಗೂ ಶಂಕರ್‌ ಎಂಬುವವರ ಪುತ್ರ ಮಹೇಂದ್ರ ಮೃತರು.

ಸ್ಕೂಟರ್‌ ಚಲಾಯಿಸುತ್ತಿದ್ದ ಬಿ.ಎಂ.ಸುರೇಶ್‌ ಕೊತ್ತತ್ತಿ ವಿದ್ಯಾಗಣಪತಿ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿಯಲ್ಲಿ ಹಾಗೂ ಹಿಂಬದಿ ಸವಾರ ಮಹೇಂದ್ರ ಅದೇ ಕಾಲೇಜು ಪ್ರೌಢಶಾಲೆಯ ಹತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು. ಈ ಇಬ್ಬರು ಸ್ವಗ್ರಾಮ ಬನ್ನಹಳ್ಳಿಯಿಂದ ಕಾಲೇಜಿಗೆ ತೆರಳುವಾಗ ಪೀಹಳ್ಳಿ ತಿರುವಿನಲ್ಲಿ ಎದುರುಗಡೆಯಿಂದ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ ಡಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ. ಈ ವೇಳೆ ಹೆದ್ದಾರಿಯಲ್ಲಿ ಅರ್ಧ ಗಂಟೆ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಅರಕೆರೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇಬ್ಬರು ವಿದ್ಯಾರ್ಥಿಗಳು ರಸ್ತೆ ಅಪಘಾತದಲ್ಲಿ ಮೃತಪಟ್ಟ ಸುದ್ದಿ ತಿಳಿಯುತ್ತಿದ್ದಂತೆ ಕೊತ್ತತ್ತಿ ವಿದ್ಯಾಗಣಪತಿ ಕಾಲೇಜು ಹಾಗೂ ಪ್ರೌಢಶಾಲೆಯಲ್ಲಿ ನೀರವ ಮೌನ ಆವರಿಸಿತ್ತು. ಮೃತರ ಸ್ನೇಹಿತರು, ಉಪನ್ಯಾಸಕರು ಕಣ್ಣೀರಾದರು. ವಿದ್ಯಾರ್ಥಿಗಳ ಸ್ಮರಣಾರ್ಥ ಶಾಲಾ, ಕಾಲೇಜಿಗೆ ರಜೆ ಘೋಷಣೆ ಮಾಡಲಾಯಿತು.

ಬನ್ನಹಳ್ಳಿಯಿಂದ ಸರಕಾರಿ ಬಸ್‌ ಸೌಕರ‍್ಯ ಇಲ್ಲದ ಕಾರಣ ಸಕಾಲಕ್ಕೆ ಕಾಲೇಜಿಗೆ ಹೋಗಲಿ ಎಂಬ ಉದ್ದೇಶದಿಂದ ಮೃತ ವಿದ್ಯಾರ್ಥಿ ಬಿ.ಎಂ.ಸಂದೇಶ್‌ಗೆ ತಂದೆ ಮನೋಹರ್‌ ಬೈಕ್‌ ಕೊಡಿಸಿದ್ದರು. ಬನ್ನಹಳ್ಳಿ ಗ್ರಾಮದಿಂದ 2 ಕಿಲೋ ಮೀಟರ್‌ ದೂರದ ಪೀಹಳ್ಳಿಗೆ ನಡೆದುಕೊಂಡು ಹೋಗಿ ನಂತರ ಬಸ್‌ ಹತ್ತಿ ಕೊತ್ತತ್ತಿಗೆ ತೆರಳಬೇಕಿತ್ತು. ಹಠ ಮಾಡಿ ತಂದೆಯಿಂದ ಸಂದೇಶ್‌ ಕಾಲೇಜಿಗೆ ಹೋಗಲು ಸ್ಕೂಟರ್‌ ತೆಗೆಸಿಕೊಂಡಿದ್ದ. ಆತನ ಜತೆ ಅದೇ ಶಾಲೆ ವಿದ್ಯಾರ್ಥಿ ಮಹೇಂದ್ರ ಕೂಡ ಸ್ಕೂಟರ್‌ನಲ್ಲಿ ಶಾಲೆಗೆ ಹೋಗುತ್ತಿದ್ದ. ಇಬ್ಬರು ವಿದ್ಯಾರ್ಥಿಗಳ ದುರ್ಮರಣ ಹಿನ್ನೆಲೆಯಲ್ಲಿ ಪೋಷಕರ ಆಕ್ರಂದನ ಮುಗಿಲ ಮುಟ್ಟಿತ್ತು.

''ಪೀಹಳ್ಳಿ ಬಳಿ ತಿರುವಿನಲ್ಲಿ ಆಗಾಗ್ಗೆ ಅಪಘಾತಗಳು ಸಂಭವಿಸುತ್ತಿವೆ. 2 ತಿಂಗಳ ಹಿಂದೆಯೂ ಇಬ್ಬರು ಮೃತಪಟ್ಟಿದ್ದರು. ತಿರುವು ಬಳಿ ಸೂಚನಾಫಲಕ ಅಳವಡಿಸಬೇಕು. ಉಬ್ಬುದಿಣ್ಣೆ ನಿರ್ಮಿಸಬೇಕು,'' ಎಂದು ಪೀಹಳ್ಳಿ ರಮೇಶ್‌ ಇತರರು ಒತ್ತಾಯಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ