ಆ್ಯಪ್ನಗರ

ಶಿವರಾಜ್‌ ಪಾಟೀಲ್‌ರಿಗೆ ಕಾವೇರಿ ಪ್ರಶಸ್ತಿ

ಶ್ರೀರಂಗಪಟ್ಟಣದ ಚಂದ್ರವನ ಆಶ್ರಮದಿಂದ ನವರಾತ್ರಿ ಉತ್ಸವದಲ್ಲಿನೀಡುವ ಕಾವೇರಿ ಪ್ರಶಸ್ತಿಗೆ ನಿವೃತ್ತ ನ್ಯಾಯಾಧೀಶ ಶಿವರಾಜ್‌ ಪಾಟೀಲ್‌ ಅವರನ್ನು ಆಯ್ಕೆ ಮಾಡಲಾಗಿದೆ.

Vijaya Karnataka 21 Sep 2019, 5:00 am
ಕೆ.ಆರ್‌.ಪೇಟೆ: ಶ್ರೀರಂಗಪಟ್ಟಣದ ಚಂದ್ರವನ ಆಶ್ರಮದಿಂದ ನವರಾತ್ರಿ ಉತ್ಸವದಲ್ಲಿನೀಡುವ ಕಾವೇರಿ ಪ್ರಶಸ್ತಿಗೆ ನಿವೃತ್ತ ನ್ಯಾಯಾಧೀಶ ಶಿವರಾಜ್‌ ಪಾಟೀಲ್‌ ಅವರನ್ನು ಆಯ್ಕೆ ಮಾಡಲಾಗಿದೆ.
Vijaya Karnataka Web shivaraj patil honored with kaveri award
ಶಿವರಾಜ್‌ ಪಾಟೀಲ್‌ರಿಗೆ ಕಾವೇರಿ ಪ್ರಶಸ್ತಿ


ಸಾಹಿತಿ ತೈಲೂರು ವೆಂಕಟಕೃಷ್ಣ, ಚಿತ್ರನಟ ದೊಡ್ಡಣ್ಣ, ತತ್ತ್ವಪದ ಗಾಯಕ ರಾಮಣ್ಣ, ಖ್ಯಾತ ವನ್ಯಜೀವಿ ಛಾಯಾಗ್ರಾಹಕ ಡಾ.ಶಿವಪ್ರಕಾಶ್‌, ಪ್ರಗತಿಪರ ರೈತ ಮಹಿಳೆ ರಾಯಚೂರಿನ ಸುಮಿತ್ರಾ ಮಿಶ್ರಾ ಅವರಿಗೆ ಕಾಯಕ ಯೋಗಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಚಂದ್ರವನ ಆಶ್ರಮ ಹಾಗೂ ಬೇಬಿ ಮಠದ ಪೀಠಾಧ್ಯಕ್ಷ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿತಾಲೂಕು ವೀರಶೈವ ಮಹಾಸಭಾ ಪದಾಧಿಕಾರಿಗಳ ಸಭೆಯಲ್ಲಿಮಾತನಾಡಿದ ಅವರು, ''ಸೆ. 29ರಿಂದ ಅ. 10ರವರೆಗೆ ನವರಾತ್ರಿ ಉತ್ಸವದಲ್ಲಿನಾನಾ ಕಾರ್ಯಕ್ರಮಗಳು ನಡೆಯಲಿವೆ. ಕೆ.ಆರ್‌.ಪೇಟೆ ತಾಲೂಕಿನ ಪುರ, ಸಂಗಾಪುರ, ಅಂಬಿಗರಹಳ್ಳಿ ಬಳಿ ಇರುವ ಕಾವೇರಿ, ಹೇಮಾವತಿ, ಲಕ್ಷ್ಮಣತೀರ್ಥ ನದಿಗಳ ಪವಿತ್ರ ಸಂಗಮ ಕ್ಷೇತ್ರದಲ್ಲಿಚಂದ್ರವನ ಹಾಗೂ ಬೇಬಿ ಮಠದ ಶಾಖಾ ಮಠವನ್ನು ತಾಲೂಕಿನ ಮಠದ ಭಕ್ತಾಧಿಗಳ ಬಹು ದಿನದ ಅಪೇಕ್ಷೆಯ ಮೇರೆಗೆ ಆರಂಭಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಶಾಖಾ ಮಠದ ಜತೆಗೆ ವೃದ್ಧಾಶ್ರಮ, ಅನಾಥಾಶ್ರಮ ತೆರೆಯುವ ಉದ್ದೇಶವಿದೆ'' ಎಂದರು.

ತಾಲೂಕು ವೀರಶೈವ ಮಹಾಸಭಾ ಅಧ್ಯಕ್ಷ ವಿ.ಎಸ್‌. ಧನಂಜಯ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಶಿಕ್ಷಕ ಶಿವಪ್ಪ, ಚಂದ್ರಪ್ರಕಾಶ್‌, ಕೆ.ಎನ್‌.ಲಿಂಗರಾಜು, ಮಹಾಸಭಾದ ಉಪಾಧ್ಯಕ್ಷರಾದ ಡಿ.ಸಿ.ಕುಮಾರ್‌, ನಂಜುಂಡಪ್ಪ ರಾಣಿ, ಖಜಾಂಚಿ ಶಿವಮೂರ್ತಿ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ