ಆ್ಯಪ್ನಗರ

ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಶ್ರೀಹರ್ಷ ಅಧ್ಯಕ್ಷ

ವಿಕ ಸುದ್ದಿಲೋಕ ಪಾಂಡವಪುರ ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷ ರಾಗಿ ಜೆಡಿಎಸ್‌ ಬೆಂಬಲಿತ ಪಿಎಲ್‌ಶ್ರೀಹರ್ಷ ಶುಕ್ರವಾರ ಅವಿರೋಧವಾಗಿ ಆಯ್ಕೆಯಾದರು...

Vijaya Karnataka 30 Jun 2018, 5:00 am
ಪಾಂಡವಪುರ: ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷ ರಾಗಿ ಜೆಡಿಎಸ್‌ ಬೆಂಬಲಿತ ಪಿ.ಎಲ್‌.ಶ್ರೀಹರ್ಷ ಶುಕ್ರವಾರ ಅವಿರೋಧವಾಗಿ ಆಯ್ಕೆಯಾದರು.
Vijaya Karnataka Web sriharsha is the president of the agriculture co operative society pandavapura
ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಶ್ರೀಹರ್ಷ ಅಧ್ಯಕ್ಷ


ಒಟ್ಟು 11 ಮಂದಿ ನಿರ್ದೇಶಕರನ್ನು ಹೊಂದಿರುವ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಹಿಂದಿನ ಅಧ್ಯಕ್ಷ ಬಿ.ಸಿ.ಜಯರಾಮು ಅವರ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ಚುನಾವಣೆ ನಿಗದಿಯಾಗಿತ್ತು. ಚುನಾವಣೆಯ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನದ ಆಯ್ಕೆ ಬಯಸಿ ಜೆಡಿಎಸ್‌ ಬೆಂಬಲ ಅಭ್ಯರ್ಥಿ ಪಿ.ಎಲ್‌.ಶ್ರೀಹರ್ಷ ನಾಮಪತ್ರ ಸಲ್ಲಿಸಿದರು. ಇವರನ್ನು ಹೊರತುಪಡಿಸಿ ಉಳಿದ ಯಾವೊಬ್ಬ ನಿರ್ದೇಶಕರು ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಅವರನ್ನು ಅವಿರೋಧವಾಗಿ ಆಯ್ಕೆಮಾಡಲಿದೆ ಎಂದು ಚುನಾವಣಾಧಿಕಾರಿ ಆನಂದ್‌ನಾಯಕ್‌ ಘೋಷಿಸಿದರು.

ನೂರಾರು ಬೆಂಬಲಿಗರು ಪಟಾಕಿಸಿಡಿಸಿ ಸಿಹಿ ಹಂಚಿ ಸಂಭ್ರಮಾಚರಣೆ ವ್ಯಕ್ತಪಡಿಸಿದರು. ಬಳಿಕ ಎಲ್ಲಾ ನಿರ್ದೇಶಕರು, ಬೆಂಬಲಿಗರು, ಜೆಡಿಎಸ್‌ ಕಾರ‍್ಯಕರ್ತರು ನೂತನ ಅಧ್ಯಕ್ಷ ರನ್ನು ಅಭಿನಂದಿಸಿದರು.

ಪಿ.ಎಲ್‌.ಶ್ರೀ ಹರ್ಷ ಮಾತನಾಡಿ, ''ಸಂಘದ ಎಲ್ಲಾ ನಿರ್ದೇಶಕರು ಸಹಕಾರದಿಂದ ಕಸಬಾ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷ ರಾಗಿ ಆಯ್ಕೆಯಾಗಿದ್ದೇನೆ. ಮುಂದಿನ ದಿನಗಳಲ್ಲಿ ರೈತರಿಗೆ ಕೃಷಿ ಚಟುವಟಿಕೆಗೆ ಅಗತ್ಯವಿರುವ ರಸಗೊಬ್ಬರವನ್ನು ಪೂರೈಸುವ ಬಗ್ಗೆ ಅಗತ್ಯ ಕ್ರಮತೆಗೆದುಕೊಳ್ಳಲಾಗುವುದು. ಸಂಘದ ಸರ್ವಾಂಗೀಣ ಅಭಿವೃದ್ಧಿಗೆ ಶಕ್ತಿ ಮೀರಿ ಶ್ರಮಿಸುತ್ತೇನೆ'' ಎಂದು ಹೇಳಿದರು.

ಉಪಾಧ್ಯಕ್ಷೆ ಪದ್ಮಮ್ಮ, ನಿರ್ದೇಶಕರಾದ ಹಾರೋಹಳ್ಳಿಸತೀಶ್‌, ಬಲರಾಮೇಗೌಡ, ಜಯರಾಮು, ಶಿವರಾಮು, ಚಂದ್ರು, ಕಾರ‍್ಯದರ್ಶಿ ಸಂದೇಶ್‌ ಸೇರಿದಂತೆ ಹಲವರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ