ಆ್ಯಪ್ನಗರ

ಭ್ರಷ್ಟಾಚಾರ ನಿರ್ಮೂಲನೆಗೆ ಕ್ರಮಕೈಗೊಳ್ಳಿ

ಭ್ರಷ್ಟಾಚಾರ ದೇಶದ ಮಹಾನ್ ಪಿಡುಗು. ಇದನ್ನು ತೊಡೆದು ಹಾಕಿದಲ್ಲಿ ಮಾತ್ರ ದೇಶದ ಪ್ರಗತಿ ಜತೆಗೆ ಇತರೆ ದೇಶಗಳಿಗೆ ಮಾದರಿ ಯಾಗುವುದಾಗಿ ಎಸಿಬಿ ಡಿವೈಎಸ್‌ಪಿ ಎಚ್.ಎಂ. ಶೈಲೇಂದ್ರ ತಿಳಿಸಿದರು.

Vijaya Karnataka 9 Apr 2018, 5:15 am
ಮದ್ದೂರು: ಭ್ರಷ್ಟಾಚಾರ ದೇಶದ ಮಹಾನ್ ಪಿಡುಗು. ಇದನ್ನು ತೊಡೆದು ಹಾಕಿದಲ್ಲಿ ಮಾತ್ರ ದೇಶದ ಪ್ರಗತಿ ಜತೆಗೆ ಇತರೆ ದೇಶಗಳಿಗೆ ಮಾದರಿ ಯಾಗುವುದಾಗಿ ಎಸಿಬಿ ಡಿವೈಎಸ್‌ಪಿ ಎಚ್.ಎಂ. ಶೈಲೇಂದ್ರ ತಿಳಿಸಿದರು.
Vijaya Karnataka Web take action to eradicate corruption
ಭ್ರಷ್ಟಾಚಾರ ನಿರ್ಮೂಲನೆಗೆ ಕ್ರಮಕೈಗೊಳ್ಳಿ


ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಭ್ರಷ್ಟ್ರಾಚಾರ ನಿಗ್ರಹದಳ ಸಾರ್ವಜನಿಕರ ಕುಂದುಕೊರತೆ ಹಾಗೂ ವಿವಿಧ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ಮೇಲಾಧಿ ಕಾರಿಗಳು ತಮ್ಮ ಕೆಳಹಂತದ ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಾರ್ವಜನಿಕರ ಸಮಸ್ಯೆ ಪರಿಹಾರಕ್ಕೆ ಮುಂದಾಗಬೇಕು ಎಂದರು.

ಪ್ರತಿ ಇಲಾಖೆಗೆ ಸಂಬಂಧಿಸಿದ ಸಾರ್ವಜನಿಕರ ಕೆಲಸ ಕಾರ್ಯಗಳನ್ನು ತ್ವರಿತಗತಿಯಲ್ಲಿ ಕೈಗೊಂಡು ಬಗೆಹರಿಸುವ ಮೂಲಕ ಭ್ರಷ್ಟಾಚಾರ ನಿರ್ಮೂಲನೆಗೆ ಕ್ರಮ ವಹಿಸಬೇಕು. ಭ್ರಷ್ಟಾಚಾರ ನಡೆಸುವ ಅಧಿಕಾರಿಗಳ ವಿರುದ್ಧ ಯಾರೇ ಲಿಖಿತ ದೂರು ನೀಡಿದಲ್ಲಿ ತಕ್ಷಣವೇ ಕ್ರಮವಹಿಸುವುದಾಗಿ ಎಚ್ಚರಿಕೆ ನೀಡಿದರು.

ಮೆಣಸಗೆರೆ ನಾಗರಾಜು ಹಾಗೂ ನರಸೇಗೌಡ ಮಾತನಾಡಿ, ತಮ್ಮ ಗ್ರಾಮದ ಸರ್ವೆ.ನಂ. 135/19 ಸರಕಾರಿ ಗೋಮಾಳ ಜಾಗದಲ್ಲಿದ್ದ ಕೆರೆಯನ್ನು ಖಾಸಗಿಯವರು ಒತ್ತುವರಿ ಮಾಡಿಕೊಂಡಿದ್ದು ಸಾರ್ವಜನಿಕರ ಅನುಕೂಲ ಕ್ಕಾಗಿ ಅದನ್ನು ತೆರವುಗೊಳಿಸುವಂತೆ ಎಸಿಬಿ ಡಿವೈಎಸ್‌ಪಿ ಎಚ್.ಎಂ. ಶೈಲೇಂದ್ರ ಅವರಿಗೆ ದೂರು ಸಲ್ಲಿಸಿದರು.

ತಾಲೂಕಿನ ಸಿ.ಎ.ಕೆರೆ ಹೋಬಳಿಯ ಡಿಎಕೆರೆ ಗ್ರಾಮದ ಸರ್ವೆ.ನಂ.1282 ವ್ಯಾಪ್ತಿ ಯಲ್ಲಿ ಬರುವ ಕೆರೆಯು ಒತ್ತುವರಿ ಯಾಗಿದ್ದು, ಇದನ್ನು ಅಳತೆ ಮಾಡಿಸಿ ಹದ್ದುಬಸ್ತುಗೊಳಿಸಿ ಅತಿಕ್ರಮಣವಾಗಿರುವ ಸರಕಾರಿ ಕೆರೆಯನ್ನು ತೆರವುಗೊಳಿಸುವಂತೆ ಜಿಲ್ಲಾಧಿಕಾರಿ ಮತ್ತು ಉಪವಿಭಾಗಾಧಿಕಾರಿಗಳಿಗೆ ದೂರು ನೀಡಿದ್ದರೂ ಈವರೆವಿಗೂ ಯಾವುದೇ ಕ್ರಮಕ್ಕೆ ಮುಂದಾಗಿಲ್ಲವೆಂದು ಗ್ರಾಮದ ಮುಖಂಡ ಡಿ.ಕೆ. ಕಷ್ಣ ಅವರು ದೂರು ನೀಡಿದರು.

ವಿವಿಧ ಗ್ರಾಮದ ಮುಖಂಡರಿಂದ ಅಹವಾಲು ಸ್ವೀಕರಿಸಿದ ಎಸಿಬಿ ಡಿವೈಎಸ್‌ಪಿ ಎಚ್.ಎಂ. ಶೈಲೇಂದ್ರ ಅವರು ಪ್ರತಿಕ್ರಿಯಿಸಿ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವ ಜತೆಗೆ ಅಧಿಕಾರಿಗಳನ್ನು ಚುನಾವಣೆ ಸಂಬಂಧ ನಿಯೋಜನೆಗೊಳಿಸಿರುವುದರಿಂದ ಸಾರ್ವಜನಿಕರ ಕೆಲಸ ಕಾರ್ಯಗಳು ಕುಂಠಿತವಾಗಿದ್ದು, ಮುಂದಿನ ದಿನಗಳಲ್ಲಿ ಶೀಘ್ರವಾಗಿ ಕೆರೆ ಒತ್ತುವರಿ ಕಾರ್ಯಾ ಚಾರಣೆಗೆ ಮುಂದಾಗುವುದಾಗಿ ಹೇಳಿದರು.
ಇನ್ಸ್ ಪೆಕ್ಟರ್ ಲಕ್ಷ್ಮಿನಾರಾಯಣ್, ಮಹೇಶ್, ವಿವಿಧ ಇಲಾಖೆ ಅಧಿಕಾರಿಗಳಾದ ಶ್ರೀಕಾಂತ್, ಮಂಜುನಾಥ್, ಚಂದ್ರಶೇಖರ್, ಸಿದ್ದಲಿಂಗಸ್ವಾಮಿ, ಲೋಕೇಶ್, ಬೋರೇಗೌಡ, ಲಿಂಗರಾಜು, ಆಶಾಲತಾ, ಕಪಿನಿಗೌಡ, ಶಶಿಕಲಾ ಮಂಜುನಾಥ್ ಮತ್ತಿತರರು ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ