ಆ್ಯಪ್ನಗರ

ಟೀ ಸ್ಟಾಲ್‌ಗೆ ಸುಧಾಮೂರ್ತಿ ಹೆಸರು: ನೆಟ್ಟಿಗರಿಂದ ಮೆಚ್ಚುಗೆ, ಮಾಲೀಕರಿಗೆ ಸ್ವತಃ ಕರೆ ಮಾಡಿದ ಸುಧಾ ಅಮ್ಮ!

ಸುಧಾಮೂರ್ತಿಯವರ ಸಾಮಾಜಿಕ ಕಾರ್ಯದಿಂದ ಪ್ರೇರಣೆ ಪಡೆದ ಟೀ ಸ್ಟಾಲ್‌ ಮಾಲೀಕರೊಬ್ಬರು ತಮ್ಮ ಶಾಪ್ ಗೆ 'ಸುಧಾಮೂರ್ತಿ ಅಮ್ಮ' ಎಂದು ನಾಮಫಲಕವನ್ನು ಅಳವಡಿಸಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರಿಂದ ಪ್ರಶಂಸೆ ವ್ಯಕ್ತವಾಗಿದೆ.

Vijaya Karnataka Web 17 Sep 2020, 12:20 pm
ಮದ್ದೂರು (ಮಂಡ್ಯ ಜಿಲ್ಲೆ): ಮದ್ದೂರು ತಾಲೂಕಿನ ಗೆಜ್ಜಲಗೆರೆಯ ಸುನೀಲ್‌ಕುಮಾರ್‌ ಎಂಬುವವರು ಪಟ್ಟಣದ ಕೊಲ್ಲಿ ವೃತ್ತದ ಬಳಿ ಆರಂಭಿಸಿರುವ ಟೀಸ್ಟಾಲ್‌ಗೆ 'ಸುಧಾಮೂರ್ತಿ ಅಮ್ಮ' ಎಂಬ ನಾಮಫಲಕ ಅಳವಡಿಸಿರುವುದನ್ನು ಶಿಕ್ಷಣ ಸಚಿವ ಸುರೇಶ್‌ಕುಮಾರ್‌ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಬರೆದುಕೊಂಡಿದ್ದರು. ಇದನ್ನು ಗಮನಿಸಿದ ಸುಧಾಮೂರ್ತಿ ಅವರು ಟೀ ಸ್ಟಾಲ್‌ ಮಾಲೀಕರಿಗೆ ಕರೆ ಮಾಡಿ ಕಾರಣ ಕೇಳಿದ್ದಲ್ಲದೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಕೊರೊನಾ ನಿಯಂತ್ರಣದ ಬಳಿಕ ಅಂಗಡಿಗೆ ಭೇಟಿ ನೀಡುವುದಾಗಿ ಭರವಸೆ ನೀಡಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸೆಗೆ ಕಾರಣವಾಗಿದೆ.
Vijaya Karnataka Web ಸುಧಾಮೂರ್ತಿ

ಈರುಳ್ಳಿ ಕಣ್ಣೀರ ಕಥೆ..! ಲಾಕ್‌ಡೌನ್ ಓದಿಗೆ ಸುಧಾಮೂರ್ತಿ ಹೊಸ ಆಡಿಯೋ ಬುಕ್

ಆ.26ರಂದು ಮೈಸೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ವೇಳೆ ಅಚಾನಕ್ಕಾಗಿ ಸುಧಾಮೂರ್ತಿ ಅಮ್ಮನವರ ನಾಮಫಲಕ ಸಚಿವರ ಗಮನಸೆಳೆದು ಟೀಸ್ಟಾಲ್‌ಗೆ ಭೇಟಿ ನೀಡಿ ಮಾಲೀಕರೊಂದಿಗೆ ಕುಶಲೋಪರಿ ವಿಚಾರಿಸಿ ಬಳಿಕ ಬೆಂಗಳೂರಿಗೆ ತೆರಳಿದ್ದರೆನ್ನಲಾಗಿದೆ.

ಟೀ ಸ್ಟಾಲ್‌ ಮಾಲೀಕ ಸುನೀಲ್‌ಕುಮಾರ್‌ ಹಾಗೂ ಸಹೋದರರು ಸುಧಾಮೂರ್ತಿ ಅವರನ್ನು ನೇರವಾಗಿ ಕಂಡಿಲ್ಲವಾದರೂ ಹಾಗೂ ಯಾವುದೇ ನೆರವು ಪಡೆಯದಿದ್ದರೂ ಸುಧಾಮೂರ್ತಿ ಅವರ ನಾಮಫಲಕ ಅಳವಡಿಸಿರುವುದನ್ನು ಇದೇ ಪ್ರಥಮ ಬಾರಿಗೆ ನೋಡಿರುವುದಾಗಿ ಸುರೇಶ್‌ಕುಮಾರ್‌ ತಮ್ಮ ಫೇಸ್‌ಬುಕ್‌ನಲ್ಲಿಬರೆದು ಪ್ರಕಟಿಸಿದ್ದಾರೆ.
ಬನ್ನೇರುಘಟ್ಟ ಉದ್ಯಾನದಿಂದ ಸುಧಾ ಮೂರ್ತಿ ಅವರಿಗೆ ಗೌರವ..! ಆನೆ ಮರಿಗೆ 'ಸುಧಾ' ಎಂದು ನಾಮಕರಣ

ಶಿಕ್ಷಣ ಸಚಿವರು ಪ್ರಕಟಿಸಿದ ಫೇಸ್‌ಬುಕ್‌ ಬರಹ ಹಾಗೂ ನಾಮಫಲಕದ ಭಾವಚಿತ್ರಕ್ಕೆ 6 ಸಾವಿರಕ್ಕೂ ಹೆಚ್ಚು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದು ಸುಧಾಮೂರ್ತಿ ಅವರ ಗಮನಕ್ಕೆ ಬಂದು ಟೀ ಸ್ಟಾಲ್‌ ಮಾಲೀಕ ಗೆಜ್ಜಲಗೆರೆಯ ಸುನೀಲ್‌ಕುಮಾರ್‌ ಅವರಿಗೆ ಖುದ್ದು ದೂರವಾಣಿ ಕರೆ ಮಾಡಿ ತಮ್ಮ ಹೆಸರಿನ ನಾಮಫಲಕವನ್ನು ಟೀಸ್ಟಾಲ್‌ ಅಂಗಡಿಗೆ ಅಳವಡಿಸಲು ಕಾರಣವೇನೆಂದು ಪ್ರಶ್ನಿಸಿದ್ದಾರೆ. ಇದಕ್ಕೆ ತಮ್ಮ ಸಮಾಜಮುಖಿ ಕಾರ್ಯಗಳೇ ನಮಗೆ ಪ್ರೇರಣೆಯಾಗಿದ್ದು ನೆರೆ ಪರಿಹಾರ, ಸಂತ್ರಸ್ತರಿಗೆ ಮನೆ ನಿರ್ಮಾಣ, ಕೋವಿಡ್‌-19 ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಹಣ ನೆರವು ಇನ್ನಿತರ ಕಾರ್ಯಗಳೇ ತಮಗೆ ಸ್ಪೂರ್ತಿಯಾದ್ದರಿಂದ ಅಂಗಡಿಗೆ ತಮ್ಮ ಹೆಸರನ್ನು ಅಳವಡಿಸಿರುವುದಾಗಿ ಸುನಿಲ್‌ ಕುಮಾರ್‌ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ