ಆ್ಯಪ್ನಗರ

ಕ್ರಿಮಿನಾಶಕ ಸೇವಿಸಿ ರೈತ ಆತ್ಮಹತ್ಯೆ

ಸಾಲಬಾಧೆ ತಾಳಲಾರದೆ ರೈತ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಮಾಡಿಕೊಂಡಿರುವ ಘಟನೆ ಪಾಂಡವಪುರ ತಾಲೂಕಿನ ಕಡಬ ಗ್ರಾಮದಲ್ಲಿ ನಡೆದಿದೆ.ಗ್ರಾಮದ ನರಸಿಂಹೇಗೌಡ ಪುತ್ರ ಲಕ್ಷ್ಮೇಗೌಡ(35) ಮೃತ ರೈತ.

ವಿಕ ಸುದ್ದಿಲೋಕ 13 Jun 2016, 5:19 am
ಪಾಂಡವಪುರ: ಸಾಲಬಾಧೆ ತಾಳಲಾರದೆ ರೈತ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಮಾಡಿಕೊಂಡಿರುವ ಘಟನೆ ಪಾಂಡವಪುರ ತಾಲೂಕಿನ ಕಡಬ ಗ್ರಾಮದಲ್ಲಿ ನಡೆದಿದೆ. ಗ್ರಾಮದ ನರಸಿಂಹೇಗೌಡ ಪುತ್ರ ಲಕ್ಷ್ಮೇಗೌಡ(35) ಮೃತ ರೈತ.
Vijaya Karnataka Web the farmer committed suicide by consuming pesticide
ಕ್ರಿಮಿನಾಶಕ ಸೇವಿಸಿ ರೈತ ಆತ್ಮಹತ್ಯೆ


ಲಕ್ಷ್ಮೇಗೌಡ ಮೂಲತಃ ರೈತರಾಗಿದ್ದರು. ಆದರೆ ಇವರ ಹೆಸರಿನಲ್ಲಿ ಯಾವುದೇ ಜಮೀನಿನರಲಿಲ್ಲ. ಇವರ ತಾಯಿ ದೇವಿರಮ್ಮ ಅವರ ಹೆಸರಿನಲ್ಲಿ 2.20 ಎಕರೆ ಜಮೀನಿದ್ದು ಇದರಲ್ಲಿ ಬೇಸಾಯ ಮಾಡುತ್ತಿದ್ದರು ಎನ್ನಲಾಗಿದೆ. ಈ ಜಮೀನಿನಲ್ಲಿ ನೀರಿಗಾಗಿ ಸುಮಾರು ಎರಡು ಬೋರ್‌ವೇಲ್‌ಗಳನ್ನು ತೆಗೆಸಿದರೂ ಎರಡು ಬೋರೆವೆಲ್‌ಗಳ ನೀರು ಬರಲಿಲ್ಲ. ಇದಕ್ಕಾಗಿ ಸುಮಾರ ಲಕ್ಷಾಂತರ ರೂ.ಸಾಲ ಮಾಡಿದ್ದ ಎನ್ನಲಾಗಿದೆ. ಈ ಜಮೀನಿನಲ್ಲಿ ಟಮೋಟ ಹಾಗೂ ತರಕಾರಿ ಬೆಳೆ ಬೆಳೆದಿದ್ದರು. ಅಲ್ಲದೆ ತಾಯಿ ದೇವಿರಮ್ಮ ಹೆಸರಿನ ಜಮೀನಿನ ಮೇಲೆ ಚಿನಕುರಳಿಯ ಎಸ್‌ಬಿಎಂ ಬ್ಯಾಂಕ್ ನಿಂದ 2 ಲಕ್ಷ ರೂ.ಸಾಲ ಮಾಡಿದ್ದರು. ಜತೆಗೆ ಪತ್ನಿಯ ತಂದೆ ಕೆ.ಪಿ.ಬೋರೇಗೌಡ ಅವರ ಜಮೀನಿನ ಮೇಲೆ ಬ್ಯಾಂಕ್‌ನಿಂದ ಸುಮಾರು 5 ಲಕ್ಷ ರೂ.ಸಾಲ ತೆಗೆಸಿಕೊಂಡು. ಅವರ ಸುಮಾರು ಐದು ಎಕರೆ ಜಮೀನನ್ನು ಸಹ ಲಕ್ಷ್ಮೇಗೌಡ ಬೇಸಾಯ ಮಾಡುತ್ತಿದ್ದರು. ಆದರೆ ಈ ಸಾಲ ತೀರಿಸಲು ಸಾಧ್ಯವಾಗಿರಲಿಲ್ಲ ಎಂದು ಪತ್ನಿ ಸವಿತಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಇದರಿಂದ ಬೇಸತ್ತ ಲಕ್ಷ್ಮೇಗೌಡ ಶನಿವಾರ ರಾತ್ರಿ ತಮ್ಮ ಜಮೀನಿನಲ್ಲಿ ಕ್ರಿಮಿನಾಶಕ ಸೇವಿಸಿದ್ದಾರೆ, ವಿಷಯ ತಿಳಿದ ಸಾರ್ವಜನಿಕರು ತಮಗೆ ಮಾಹಿತಿ ಮುಟ್ಟಿಸಿದ ತಕ್ಷಣ ಲಕ್ಷ್ಮೇಗೌಡ ಅವರನ್ನು ಚಿನಕುರಳಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಬೆಳಗ್ಗೆ ಸಾವನ್ನಪ್ಪಿದ್ದಾರೆ. ಈ ಸಂಬಂಧ ಪಾಂಡವಪುರ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ